ನಿಮ್ಮ ಮನೆ,ಏರಿಯಾ, ಸಿಟಿ ಎಲ್ಲೇ ಆಗಲಿ ಪವರ್ ಕಟ್ ಆದರೇ ಅಥವಾ ಎಲೆಕ್ಟ್ರಿಸಿಟಿ ಪ್ರಾಬ್ಲಮ್ ಏನೇ ಬಂದರೂ ಚಿಂತೆ ಬಿಡಿ.. ಹೀಗೆ ಮಾಡಿ.. ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ

0
694

Kannada News | Karnataka News

ಸಾಮಾನ್ಯವಾಗಿ ಪವರ್ ಕಟ್ ಪ್ರಾಬ್ಲಮ್ ಆಗಿ ಕೆ ಇ ಬಿ ನವರಿಗೆ ಹಿಡಿ ಹಿಡಿ ಶಾಪ ಹಾಕುವುದು ಸಾಮಾನ್ಯ.. ಜೊತೆಗೆ ರಸ್ತೆಯಲ್ಲಿ ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿ ವಾರಗಟ್ಟಲೇ ಕಳೆದರು.. ಯಾರೂ ಬಂದು ರೆಡಿ ಮಾಡುವುದಿಲ್ಲ.. ಈ ರೀತಿಯ ತೊಂದರೆಯನ್ನು ನಾವು ಬಹಳಷ್ಟು ಬಾರಿ ಅನುಭವಿಸಿರುತ್ತೇವೆ.. ಹಳ್ಳಿಗಳ ಕಡೆಯಂತೋ ಲೈನ್ ಮ್ಯಾನ್ ಗಳು ಬರುವುದೇ ಅಪರೂಪ ವಾಗಿರುತ್ತದೆ..

ಇದಕ್ಕೆಲ್ಲಾ ಪರಿಹಾರ ನೀಡಬೇಕೆಂದೇ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಹೆಲ್ಪ್ ಲೈನ್ ನಂಬರ್ ಒಂದನ್ನು ನೀಡಿದ್ದಾರೆ.. ಹೌದು ಇನ್ನು ಮುಂದೆ ಏನೇ ಎಲೆಕ್ಟ್ರಿಕಲ್ ತೊಂದರೆ ಆದರೂ 1912 ನಂಬರ್ ಗೆ ಕಾಲ್ ಮಾಡಿದರೆ ಸಾಕು ತಕ್ಷಣ ಪರಿಹಾರ ಸಿಗಲಿದೆ..

ರಾಜ್ಯ ಸರ್ಕಾರದ ಈ ನೂತನ‌ ಕಾರ್ಯ ಪ್ರಶಂಸನೀಯವಾದರೂ.. ಸರಿಯಾದ ಸಮಯಕ್ಕೆ ಸ್ಪಂದಿಸಿದರೆ ಸಾಮನ್ಯ ಜನರಿಗೇ ಅಷ್ಟೇ ಸಾಕಾಗಿದೆ..

ಈಗಾಗಲೇ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಸೇವೆಗಾಗಿಯೇ ಪ್ರತ್ಯೇಕ ವಾಹನಗಳ ವ್ಯವಸ್ಥೆಯನ್ನು ಇಂಧನ ಸಚಿವಾಲಯ ಮಾಡಿದೆ.. ಜೊತೆಗೆ ಇದಕ್ಕಾಗಿಯೇ ಹೆಚ್ಚುವರಿ ಲೈನ್ ಮ್ಯಾನ್ ಗಳನ್ನು ನಿಯೋಜಿಸಿದೆ.. ಅತ್ಯಂತ ಸುವ್ಯವಸ್ಥೆಯಿಂದ ಕೂಡಿರುವ ಈ ಸೇವೆ ಜನಸಾಮಾನ್ಯರಿಗೆ ಉಪಯೋಗವಾಗಲಿದೆ ಎಂಬುದು ಎಲ್ಲರ ಅಭಿಪ್ರಾಯ..

ಇನ್ನು ಮುಂದೆ ನಿಮ್ಮ ಏರಿಯಾದಲ್ಲಿ ಏನೇ ಪವರ್ ಪ್ರಾಬ್ಲಂ ಆದರೂ.. ಅಥವಾ ಮಳೆಗಾಲದಲ್ಲಿ ಮರ ಬಿದ್ದು ತೊಂದರೆಯಾದರೂ.. 1912 ನಂಬರ್ ಗೆ ಕಾಲ್ ಮಾಡುವುದನ್ನು ಮರೆಯಬೇಡಿ.. ಶೇರ್ ಮಾಡಿಕೊಳ್ಳಿ ಉಪಯೋಗವಾಗಬಹುದು.

Also Read: ಮೋದಿ ಸರ್ಕಾರ ಬಂದಾಗಿನಿಂದ ದೇಶದಲ್ಲಿ ನಿರುದ್ಯೋಗ ಜಾಸ್ತಿಯಾಗ್ತಿದೆ ಅನ್ನೋರಿಗೆ ಇದನ್ನು ತೋರಿಸಿ, 1.5 ಕೋಟಿ ಉದ್ಯೋಗಗಳು ಸೃಷ್ಟಿಯಾಗ್ತಿವೆ..