ಎಳ್ಳು ಬೆಲ್ಲ-ಒಳ್ಳೆ ಮಾತು

0
920

ಎಳ್ಳು ಬೆಲ್ಲ-ಒಳ್ಳೆ ಮಾತು
ಎಳ್ಳು ಬೆಲ್ಲ ತಿನ್ನು ಒಳ್ಳೆ ಮಾತಾಡು.. ಎಂಬುದು ಎಲ್ಲರಿಗೂ ಗೊತ್ತಿರುವ ಹೇಳಿಕೆ. ಸಣ್ಣವರಿರುವಾಗ ಇದೊಂದು ರೀತಿಯ ಖುಷಿ ಕೊಡುವ ಹೇಳಿಕೆಯಾಗಿತ್ತು. ಅದನ್ನೇ ಮತ್ತೆ ಮತ್ತೆ ಹೇಳುತ್ತ ಅಕ್ಕ ತಮ್ಮಂದಿರನ್ನು ಅಣಕಿಸುತ್ತ ಓಡಾಡುತ್ತಿದ್ದೆವು. ಆದರೆ ಈಗ ಸುತ್ತೆಲ್ಲ ಸಡಗರದ ಮುಖವಾಡ ಕಾಣುತ್ತಿದೆ. ದೂರದಲ್ಲಿ ಸ್ನಿಗ್ಧ ಸುಂದರ ಚಂದ್ರ ಬೆಳಗುತ್ತಿದ್ದಾನೆ, ಆದರೆ ಎದೆಗೆ ತಂಪೆರೆಯುವುದಿಲ್ಲ. ಮುಸುಕಿದ ಮೋಡ ಬೆಳದಿಂಗಳನ್ನು ಮರೆಮಾಡುತ್ತದೆ ಆದರೆ ಅದರ ತಂಪನ್ನಲ್ಲ. ಆದರೆ ಮೋಡ ಮುಸುಕದೆಯೂ ಬೆಳಗುವ ಚಂದ್ರನ ಎದುರೂ ಮನಸ್ಸು ವಿಹ್ವಲಗೊಳ್ಳುತ್ತಿರುವುದಕ್ಕೆ ಕಾರಣವನ್ನು ಯಾರೂ ಹುಡುಕಬೇಕಿಲ್ಲ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಮ್ಮ ಸುತ್ತಲಿನ ವಿದ್ಯಮಾನಗಳು, ವಿಪರೀತಗಳು, ವಿಕೃತ ಕೃತ್ಯಗಳು ಮತ್ತು ಅವಿವೇಕಿ ನಾಲಗೆಗಳು. ಇಂತಹ ಜಗತ್ತಿಗಿಷ್ಟು ವಿವೇಕವನ್ನು ಮೂಡಿಸಲೆಂದೇ ಇರಬೇಕು ಸ್ವಲ್ಪ ಒಗರಿನ ಎಳ್ಳಿಗೆ ಸಿಹಿ ರುಚಿಯ ಬೆಲ್ಲದ ಒಡನಾಟ ಕೊಟ್ಟು ನಾಲಗೆಗೂ ಮನಸ್ಸಿಗೂ ಹಿತ ನೀಡುವ ನಂಟು ಬೆಳೆಸಿದ್ದು. ಮತ್ತು ಆ ನಂಟಿನ ಗಂಟು ಬಿಚ್ಚದಂತೆ ನಾಲ್ಕು ಒಳ್ಳೆ ಮಾತನಾಡಿ ಕಹಿ ಮರೆಯುವ ಸರಳ ಸೂತ್ರವನ್ನು ಕೊಟ್ಟವರು ನಮ್ಮ ಹಿರಿಯರು.

ಪಕ್ಕದ ಬೀದಿಯಲ್ಲಿ ಜರಿ ಲಂಗ ತೊಟ್ಟು ಹಬ್ಬದ ಸಂಭ್ರಮದಲ್ಲಿ ಪುಟ್ಟ ಕೂಸು ತನಗಿಂತ ಭಾರದ ಎಳ್ಳು ಬೆಲ್ಲ ಕಬ್ಬಿನ ಬಟ್ಟಲು ಹೊತ್ತು ಮನೆಮನೆಗೆ ಹೊರಟಿದೆ. ಅಲ್ಲೇ ಸ್ವಲ್ಪ ದೂರದಲ್ಲಿ ಒಕ್ಕಲುತನಕ್ಕೆ ತಿಲಾಂಜಲಿ ಇಟ್ಟು ಬರಗಾಲಕ್ಕೆ ತತ್ತರಿಸಿ ಊರಿಂದೂರಿಗೆ ವಲಸೆ ಬಂದ ಕುಟುಂಬದ ಕೂಸು ನಿರ್ಮಾಣ ಹಂತದ ಕಟ್ಟಡದ ಹೊರಗಿನ ತಾತ್ಕಾಲಿಕ ಷೆಡ್‍ನ ಎದುರು ನಿಂತು ಈ ಕೂಸಿನ ಸಡಗರಕ್ಕೆ ಬೆರಗಾಗಿದೆ. ಅದರ ಮನಸ್ಸಿನ ಮೂಲೆಯಲ್ಲಿ ತನ್ನೂರು, ಅಜ್ಜ-ಅಜ್ಜಿ ಬಡತನದ ಬವಣೆ, ಗೊತ್ತಿಲ್ಲದ ಊರಿಗೆ ಪಯಣ, ಕಳೆದುಕೊಂಡ ಬಾಲ್ಯ ಎಲ್ಲವೂ ನೆನಪಾಗಿರಬಹುದು. ಛಕ್ಕನೆ ನೆನಪಾಯಿತು ಬಾಲ್ಯ.ಕೊಂಕಣಿ ಭಾಷಿಕರು ಮಾತ್ರವೇ ಮಾರುತ್ತಿದ್ದ ಬಣ್ಣ ಬಣ್ಣದ ಕುಸುರೆಳ್ಳು ಮಾತ್ರ ಸಿಗುತ್ತಿತ್ತು ನಮ್ಮೂರಲ್ಲಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅದನ್ನೇ ತಂದು ತಿಂದು ಖುಷಿಪಡುತ್ತಿದ್ದುದು ಬಿಟ್ಟರೆ ಈ ತೆರನ ಆಚರಣೆಗಳು ಅಷ್ಟಾಗಿ ಗೊತ್ತಿರದ ಏರಿಯಾ ಅದು. ಆದರೂ ಪ್ರಶ್ನೆ ಏಳುತ್ತಿತ್ತು. ಯಾಕೆ ಎಳ್ಳು ಬೆಲ್ಲ ಒಟ್ಟಿಗೇ ತಿನ್ನಬೇಕು? ಜೊತೆಗೆ ಕಬ್ಬೂ? ಈ ಪ್ರಶ್ನೆಗೆ ಉತ್ತರ ಸಿಗುತ್ತಿದ್ದುದು ಇದು ಚಳಿಗಾಲ, ಎಲೆಗಳು ಹಣ್ಣಾಗಿ ಉದುರುವ ಕಾಲ. ಎಲ್ಲಕಡೆಗೂ ಒಣ ಹವೆ. ಚರ್ಮ ಒಣಗಿ ಹೆಕ್ಕಳಿಕೆ ಏಳುವ ಕಾಲ. ಈಗ ದೇಹಕ್ಕೆ ಒಂದಿಷ್ಟು ಹೆಚ್ಚು ಎಣ್ಣೆಯ ಅಂಶ ಬೇಕು. ಅದು ಎಳ್ಳಿನಲ್ಲಿದೆ. ಹಾಗೇ ಎಳ್ಳು ತಿನ್ನು ಎಂದರೆ ಯಾರಾದ್ರೂ ತಿನ್ನುವರಾ ? ಜೊತೆಗೆ ಕಬ್ಬು ಬೆಳೆದು ಬೆಲ್ಲಕ್ಕೆ ಅಣಿಯಾಗುವ ಕಾಲ. ಕಬ್ಬಿನಲ್ಲಿ ಇರುವ ಕಬ್ಬಿಣದ ಅಂಶವೂ ದೇಹಕ್ಕೆ ಬೇಕು. ಜೊತೆಗೆ ಕೃಷಿ ಪ್ರಧಾನ ದೇಶವಾದ ನಮ್ಮಲ್ಲಿ ಇದು ಸುಗ್ಗಿಯ ಕಾಲ. ಬೆಳೆದ ಬೆಳೆ ರೈತನಿಗೆ ದಕ್ಕಿದರೆ ಸಂತಸದ ಕಾಲ. ಹಾಗಾಗಿ ಈ ಹಬ್ಬ.

ಎಳ್ಳು ಬೆಲ್ಲ ಕಬ್ಬು ಸ್ವಲ್ಪ ಉಷ್ಣದ ಗುಣ ಹೊಂದಿದವುಗಳು. ಇವುಗಳಿಂದ ಉಂಟಾಗಬಹುದಾದ ಉಷ್ಣಕ್ಕೆ ತಂಪೆರೆಯಲು ಹೆಸರು ಬೇಳೆಯ ಸಾಥ್. ಎಂದರೆ ಹುಗ್ಗೀ ಅನ್ನ. ಇವೆಲ್ಲವೂ ನಾಲಗೆಗೆ ರುಚಿ ದೇಹಕ್ಕೆ ಹಿತವೆಂಬ ಅಂಶದ ಜೊತೆಯೇ ಬೆರೆತ ಸರಳ ಸತ್ಯವೊಂದು ಹುದುಗಿದೆ. ಅದೆಂದರೆ ಕೂಡಿ ಬಾಳುವ ಎಳ್ಳು ಬೆಲ್ಲದಂತೆ ಬೆರೆಯುವ, ಕಸಿವಿಸಿ ಭಿನ್ನ ಬೇಧಗಳನ್ನು ಮರೆಯುವ, ಮನುಷ್ಯರಾಗಿ ಬದುಕುವ ಸೂತ್ರ. ಚಿಕ್ಕ ಎಳ್ಳು, ಅದರ ಜೊತೆ ಸ್ವಲ್ಪ ದೊಡ್ಡದಾಗಿಯೇ ಕಾಣುವ ಬೆಲ್ಲದ ಚೂರು, ರುಚಿಗೆ, ಅಂದಕ್ಕೆ ಮೇಲಿನಿಂದ ಕಡಲೇ ಬೀಜ, ಹಾಗೆಯೇ ನಡುವೆ ನಾನೇನು ಕಡಿಮೆನಾ ಎಂಬ ಕೊಬ್ಬರಿ ಕೂಡ.

ಇವೆಲ್ಲವೂ ಒಟ್ಟಿಗೇ ಬೆರೆತಾಗ ಕೊಡುವ ರುಚಿಯೇ ನಮ್ಮ ಸಮಾಜದ ಬದುಕಿನ ತತ್ವ ಕೂಡ. ಆದರೆ ಅದು ಅಷ್ಟು ಸುಲಭವಾಗಿ ಬದುಕಿನ ಅನಿವಾರ್ಯ ಕ್ರಮವಾಗಿ ರೂಪುಗೊಳ್ಳಲೇ ಇಲ್ಲ. ಸರ್ವ ಜನಾಂಗದ ಶಾಂತಿಯ ತೋಟವಾಗಿಯೇ ಬದುಕಲೆಂದೇ, ಬದುಕಿನ ಕಾಲ ಚಕ್ರದಲ್ಲಿ ಆಗಾಗ್ಗೆ ತಲೆದೋರಿ ಬಿಡುವ ವ್ಯತ್ಯಾಸಗಳು, ಅಭಿಪ್ರಾಯ ಬೇಧಗಳು, ತರ ತಮಗಳು ಅಲ್ಲಲ್ಲಿಯೇ ಮಾಯವಾಗಬೇಕೆಂದೇ ಈ ಎಲ್ಲ ಆಚರಣೆಗಳು ರೂಢಿಗತವಾಗಿ ಬಂದವೇನೋ. ಆದರೆ ಆಚಾರ ಆಚರಣೆಯಾಗಿ ಅದರ ಜೊತೆಗಿನ ವಿಚಾರ ಮರೆಯಾಗಿ ಅವಿಚಾರಗಳೇ ಮನೆಮಾಡಿ ಬಿಟ್ಟವಲ್ಲಾ.ಮತ್ತೆ ಬಾಲ್ಯದ ನೆನಪು. ಎಲ್ಲ ಆಚರಣೆಗಳ ಹಿಂದೆಯೂ ಇರುವ ವಿಚಾರದ ಬಗ್ಗೆ ಅಪ್ಪ ಹೇಳುತ್ತಿದ್ದರು. `ನೋಡು ಮಗೂ ಆಚರಣೆಗಳ ಹಿಂದೆ ವಿಚಾರವಿದೆ. ಸುಮ್ಮನೆ ವಿಚಾರ ಹೇಳಿದರೆ ಯಾರೂ ಪಾಲಿಸುವುದಿಲ್ಲ.

ಜೊತೆಗೆ ಒಂದು ಆಚಾರ ಹೇಳುವ ಮೂಲಕÀ ವಿಚಾರವೂ ತಲೆಗೆ ಹೋಗಿ ವಿಚಾರ ಮನುಷ್ಯನ ಮೆದುಳನ್ನು ಪ್ರವೇಶಿಸಿದರೆ, ವೈಚಾರಿಕತೆಯನ್ನು ಮೂಡಿಸಿದರೆ ಆಗ ಈ ಸಮಾಜ ಸಜ್ಜನರ ಸಮಾಜವಾಗುತ್ತದೆ. ಭಿನ್ನ ಬೇಧಗಳನ್ನು ಮರೆತು ಒಂದಾಗಿ ಬಾಳುತ್ತದೆ ಎಂಬುದು ಇದರ ಹಿಂದಿನ ಮರ್ಮ. ಆದರೆ ಹಾಗಾಗುತ್ತಿಲ್ಲ. ಎಲ್ಲ ಆಚಾರಗಳೂ ಆಚರಣೆಗಳಾಗಿ ಬದಲಾದವು. ಆಚಾರದ ಜೊತೆಗಿನ ವಿಚಾರ ಮರೆಯಾಗಿ ಆಡಂಬರ ಮನೆ ಮಾಡುತ್ತಿದೆ. ಇದು ಸರಿಯಲ್ಲ. ಆಚಾರ ಹಿಂದಾದರೂ ಪರವಾಗಿಲ್ಲ ಆದರೆ ವಿಚಾರ ಮರೆಯಾಗಕೂಡದು’ ಎಂದು. ಹೌದು. ಸಂಕ್ರಾಂತಿ ಅಥವಾ ಸಂಕ್ರಮಣವೆಂಬುದು ಬದಲಾವಣೆ ಎಂಬ ಅರ್ಥವೂ ಹೌದು.

ಹಲವು ಬಾರಿ ಮಾತನಾಡುತ್ತೇವೆ. ಇದು ಸಂಕ್ರಮಣದ ಕಾಲವೆಂದು ಮಾತನಾಡುತ್ತೇವೆ. ಸೂರ್ಯನ ಸುತ್ತ ಸುತ್ತುವ ಭೂಮಿ ಚಂದ್ರರ ಚಲನೆಯ ಪಥವನ್ನೂ ಸಂಕ್ರಮಣ ಸೂಚಿಸುತ್ತದೆ ಎಂದೂ ಹೇಳಲಾಗುತ್ತದೆ. ಹೀಗೆ ಹಲವು ಅರ್ಥಗಳನ್ನು ಪಡೆದುಕೊಂಡ ನಮ್ಮ ಎಷ್ಟೊಂದು ಹಬ್ಬಗಳು ಸೂಚಿಸುವುದು ಕೂಡಿ ಬಾಳುವ, ಒಳಿತಿಗಾಗಿ ಬದಲಾಗುವ ಅಗತ್ಯವನ್ನು.ಹೌದಲ್ಲ ನಮ್ಮ ಆಚಾರ ಮತ್ತು ವಿಚಾರಗಳನ್ನು ನೆನೆಯುವಾಗಲೇ ಜನಪದರ ಹಾಡುಗಳು ನೆನಪಾಗುತ್ತವೆ. ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಲಿ ಎಳ್ಳು ಜೀರಿಗೆಯ ಬೆಳೆವಂಥ.. ಭೂಮಿ ತಾಯ್ನ ಎದ್ದೊಂದು ಗಳಿಗೆ ನೆನೆದೇನಾ.. ಯಾಕೆ ಎಳ್ಳು ಮತ್ತು ಜೀರಿಗೆಗಳನ್ನು ಒಟ್ಟಿಗೇ ಸೇರಿಸಲಾಯಿತು. ಕೇವಲ ಪ್ರಾಸಕ್ಕಾಗಿಯೇ ? ಇಲ್ಲ. ಪೂರ್ವಿಕರು ಕಂಡು ಕೊಂಡ ಜೀವನಾನುಭವವದು.

ಯಾವ ವಿಶ್ವವಿದ್ಯಾಲಯದ ಪದವಿಯೂ ಇಲ್ಲದೇ ಬದುಕಿನ ರೀತಿ ಅವರಿಗೆ ಕಲಿಸಿಕೊಟ್ಟ ಅಖಂಡ ಅನುಭವದ ಮಾತಿದು. ಎಳ್ಳಿನ ಗುಣ ಉಷ್ಣವಂತೆ. ಜೀರಿಗೆ ತಂಪಂತೆ. ಎಳ್ಳು ಜೀರಿಗೆ ಎರಡೂ ಇದೇ ಭೂಮಿಯಲ್ಲಿ ಬೆಳೆಯುವ ಎರಡು ಧಾನ್ಯಗಳು. ಉಷ್ಣದ ಜೊತೆ ತಂಪನ್ನೂ ನೀಡುವ ಭೂಮಿಯ ಗುಣದಿಂದ ಕಲಿಯಬೇಕಾದ್ದು ಸಹಬಾಳ್ವೆಯನ್ನಲ್ಲವೇ? ಆದರೆ ಬದುಕಿನ ಜೊತೆಗೆ ಸಿಗುವ ಈ ಸರಳ ಸತ್ಯಗಳನ್ನು ನಾವೇಕೆ ಮನದಟ್ಟು ಮಾಡಿಕೊಳ್ಳುವುದಿಲ್ಲ. ಹುಟ್ಟು ಸಾವುಗಳ ಮಧ್ಯೆಯ ಬದುಕಿನ ಕಾಲ ಘಟ್ಟದಲ್ಲಿ ಲಿಂಗ-ಧರ್ಮ-ಜಾತಿಗಳ ವೈಷಮ್ಯ, ತಾರತಮ್ಯದಲ್ಲಿ ನರಳುತ್ತೇವೆ. ಸಂಕ್ರಾಂತಿಯನ್ನು ಹಬ್ಬವಾಗಿ ಆಚರಿಸುತ್ತೇವೆ ಆದರೆ ಬದುಕಿನ ಸಂಕ್ರಮಣ ಕಾಲವನ್ನು ಗುಣಾತ್ಮಕವಾಗಿ ಬಳಸಿಕೊಳ್ಳಲು ಹಿಂಜರಿಯುತ್ತೇವೆ. ಬಡವ ಬಲ್ಲಿದರೆಂಬ, ಹೆಣ್ಣು ಗಂಡೆಂಬ, ಜಾತಿ ಕುಲ ಸೂತಕಗಳೆಂಬ ಭಾವಕ್ಕೆ ಬಿದ್ದು ಬಡಿದಾಡುತ್ತೇವೆ. ಎಳ್ಳು ಬೆಲ್ಲದಂತೆ ಬೆರೆತು ಒಳ್ಳೆಯವರಾಗುವ ಭಾವಕ್ಕೆ ಬಂದರೆ ಅದು ನಿಜವಾದ ಸಂಕ್ರಮಣ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522