ಒಬಾಮಾ ಇ-ಮೇಲ್ ಗೆ ಕನ್ನ ಹಾಕಿದ ವಿಕಿಲೀಕ್ಸ್!

0
640

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರ ವೈಯಕ್ತಿಕ ಹಾಗೂ ರಹಸ್ಯವಾಗಿ ಸಂದೇಶ ರವಾನೆಗೆ ಬಳಸುತ್ತಿದ್ದ ಇ-ಮೇಲ್ ಸಂದೇಶಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿರುವ ವಿಕಿಲೀಕ್ಸ್, ಕೆಲವು ಮಹತ್ವದ ಸಂದೇಶಗಳನ್ನು ಬಹಿರಂಗಪಡಿಸಿದ್ದು, ಇನ್ನು ಕೆಲವು ಮಾಹಿತಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ.

bobama@ameritech.com https://t.co/Ni95WAl8a6

ಹೆಸರಿನ ಇ-ಮೇಲ್‌ನ ೭ ಸಂದೇಶಗಳನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿದೆ. ಇದರಲ್ಲಿ ೨೦೦೮ ನವೆಂಬರ್ ೪ರಂದು ಜಾನ್ ಪೊಡೆಸ್ಟಾ ಮತ್ತು ಒಬಾಮ ಅವರ ಟ್ರಾನ್ಸ್‌ಲೆಷನ್ ತಂಡದೊಂದಿಗೆ ಮಾಡಿದ ಚರ್ಚೆಯಲ್ಲಿ ನವೆಂಬರ್ ೧೫ರ ಜಿ-೨೦ರ ಶೃಂಗಸಭೆಯ ಆಹ್ವಾನ ತಿರಸ್ಕರಿಸಿ, ಅದೇ ವೇಳೆ ಆರ್ಥಿಕ ಹಿಂಜರಿತ ಕುರಿತು ಮಾಜಿ ಅಧ್ಯಕ್ಷ ಡಬ್ಲ್ಯೂ ಬುಷ್ ಅವರನ್ನು ರಾತ್ರಿ ಆಹ್ವಾನಿಸಿ ಮಾತುಕತೆ ನಡೆಸಲು ಸೂಚಿಸಲಾಗಿತ್ತು. ಅದರಂತೆ ಒಬಾಮ ಜಿ-೨೦ಕ್ಕೆ ಗೈರು ಹಾಜರಾಗಿದ್ದರು.

ಪ್ರಸ್ತುತ ಹೀಲರಿ ಅವರ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ನೇತೃತ್ವ ವಹಿಸಿರುವ ಪೊಡೆಸ್ಟಾ, ಒಬಾಮ ಅವರ ಸುಮಾರು 23 ಸಾವಿರ ಇ-ಮೇಲ್ ವಿವರ ಕದ್ದಿರುವ ಅಂಶವನ್ನೂ ಬಹಿರಂಗಪಡಿಸಿದೆ.

ವಿಕಿಲೀಕ್ಸ್ ಕೇವಲ 7 ಇ-ಮೇಲ್ ಸಂದೇಶಗಳನ್ನು ಮಾತ್ರ ಬಹಿರಂಗಪಡಿಸಿದ್ದು, ಸದ್ಯದಲ್ಲೇ ಮತ್ತುಷ್ಟು ಮಹತ್ವದ ವಿಷಯಗಳನ್ನು ಬಹಿರಂಗಪಡಿಸುವುದಾಗಿ ಹೇಳಿಕೊಂಡಿದೆ.