ನಿಮ್ಮ ಅರೋಗ್ಯ ಶಕ್ತಿಯನ್ನು ವೃದ್ಧಿಸುವ ಹಣ್ಣುಗಳು ಯಾವುದು ಎಂದು ನಿಮಗೆ ಗೊತ್ತೇ?ಅದರ ಬಗ್ಗೆ ಒಂದಿಷ್ಟು ಮಾಹಿತಿ.

0
1438

ಇತ್ತೀಚಿನ ದಿನಗಳಲ್ಲಿ ಪ್ರತೀಯೊಬ್ಬ ಮನುಷ್ಯನಿಗೂ ಯಾವುದಾದರೂ ಒಂದು ಖಾಯಿಲೆ ಇರುವುದು ಸಾಮಾನ್ಯ. ಸಂಪೂರ್ಣ ಆರೋಗ್ಯಕರ ಮನುಷ್ಯ ಸಿಗುವುದು ಬಲು ಅಪರೂಪ. ಮನುಷ್ಯನ ದೇಹ ದಿನೇ ದಿನೇ ಅತಿ ಸೂಕ್ಷ್ಮವೆನಿಸಿಕೊಳ್ಳುತ್ತಾ ಇದೆ. ಇನ್ನು ಕ್ಯಾನ್ಸರ್, ಹೃದಯಾಘಾತ ದಂತ ಭಯಾನಕ ರೋಗದಿಂದ ದಿನ ನಿತ್ಯ ಬಳಲುವವರ ಸಾಯುವವರ ಸಂಖ್ಯೆಯೇನು ಕಮ್ಮಿಯಿಲ್ಲ. ಇದಕ್ಕೆಲ್ಲ ಮೂಲ ಕಾರಣ ನಾವು ಸೇವಿಸುವ ಜಂಕ್ ಫುಡ್ ನಂತಹ ಆಹಾರ ಮತ್ತು ಅದರಿಂದ ಕ್ಷೀಣಿಸುವ ದೇಹದ ರೋಗನಿರೋಧಕ ಶಕ್ತಿಯಿಂದಾಗಿ.

ಹಣ್ಣುಗಳು ಪ್ರಕೃತಿ ನೀಡಿದ ವರದಾನ. ರುಚಿ-ಸ್ವಾದದ ಜೊತೆಗೆ ಇವುಗಳಿಂದ ಅನೇಕ ಪ್ರಯೋಜನಗಳುಂಟು. ಉದಾಹರಣೆಗೆ ಸಿಟ್ರಸ್ ಯುಕ್ತ ಹಣ್ಣುಗಳ ಸೇವನೆಯಿಂದ ದೇಹದ ಅನಗಗತ್ಯ ಕೊಬ್ಬನ್ನು ಕರಗಿಸಬಹುದು ಹಾಗೂ ಗಂಡಾಂತರ ರೋಗಗಳ ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ನೀವು ಫಿಟ್ ಆಗಿರಲು ಆಹಾರ ಕ್ರಮದಲ್ಲಿ ಹಣ್ಣುಗಳುನ್ನು ಯೆಥೇಚ್ಛವಾಗಿ ಬಳಸಿ. ಮತ್ತು ಒಣ ಅಂಜೂರ, ಸೇಬು, ಪಪ್ಪಾಯ, ಸಪೋಟಾ, ಕಿತ್ತಳೆರಸ, ಮೂಸಂಬಿ ಹಣ್ಣಿನ ರಸ, ಬಾಳೆಹಣ್ಣು , ಹುರಿದು ಹುಡಿಮಾಡಿದ ಬಾದಾಮಿ, ಗೋಡಂಬಿ ಒಣ ಹಣ್ಣುಗಳ ಪುಡಿ – ಇವೆಲ್ಲವುಗಳನ್ನು ಒಂದೊಂದು ದಿನಕ್ಕೆ ಒಂದೊಂದು ಸೇವಿಸಿದರೆ ನೀವು ಆರೋಗ್ಯಪೂರ್ಣವಾಗಿರಲು ಸಹಾಯ ಮಾಡುತ್ತವೆ.

ಬನ್ನಿ ಹಾಗಾದರೆ ಶಕ್ತಿವರ್ಧಕ ಹಣ್ಣುಗಳು ಯಾವುವು ಮತ್ತು ಅದರಲ್ಲಿರುವ ಪೋಷಕಾಂಶಗಳನ್ನು ತಿಳಿಯೋಣ:

ಅಂಜೂರ ಹಣ್ಣು:
ವಿಟಮಿನ್ಸ್‌ ಹಾಗೂ ಮಿನರಲ್ಸ್‌ಗಳನ್ನು ಹೊಂದಿರುವ ಹಣ್ಣು. 100 ಗ್ರಾಂ ಅಂಜೂರದಲ್ಲಿ 80 ಕ್ಯಾಲೋರೀಸ್‌, 3.3 ಗ್ರಾಂ ಪ್ರೊಟೀನ್‌ 0.3 ಗ್ರಾಂ ಫಾಟ್‌, 5.6ಗ್ರಾಂ ಫೈಬರ್‌ ಸಿಗುತ್ತದೆ.

ಸೀಬೆಹಣ್ಣು:
ಸೀಬೆಹಣ್ಣು ರಕ್ತದೊತ್ತಡವನ್ನು ಕೊಲೆಸ್ಟರಾಲ್ ನ್ನು ಕಡಿಮೆಗೊಳಿಸುತ್ತದೆ. ಇದರಲ್ಲಿ ಪೊಟ್ಯಾಶಿಯಂ ಪ್ರಮಾಣ ಹೆಚ್ಚಿರುವುದರಿಂದ ಇದು ಹೃದಯದ ಬಡಿತವನ್ನು ಕ್ರಮಗೊಳಿಸುತ್ತದೆ.

ಕಿವಿಹಣ್ಣು:
ಕಿವಿ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಖನಿಜಗಳಿವೆ. ಈ ಒಂದು ಹಣ್ಣನ್ನು ತಿನ್ನುವ ಮೂಲಕ ದಿನದ ಅಗತ್ಯದ ಶೇ.9 ರಷ್ಟು ಪೊಟಾಷಿಯಂ ಹಾಗೂ ಶೇ 2 ರಷ್ಟು ಕ್ಯಾಲ್ಷಿಯಂ ಸಿಗುತ್ತದೆ.

 

ಬೆಣ್ಣೆಹಣ್ಣು:
ಒಂದು ಕಪ್‌ ಬೆಣ್ಣೆ ಹಣ್ಣಿನ ತಿರುಳನ್ನು ಸೇವಿಸಿದರೆ ದಿನಕ್ಕೆ ಅಗತ್ಯವಿರುವ ಶೇ. 20 ಪೊಟಾಶಿಯಂ, ಶೇ. 10 ಮೆಗ್ನೀಶಿಯಂ ಮತ್ತು ಶೇ.1 ರಷ್ಟು ಕ್ಯಾಲ್ಷಿಯಂ ಸಿಗುತ್ತದೆ.

ಪೀಚ್ ಹಣ್ಣು:
ಒಂದು ಪೀಚ್‌ ಹಣ್ಣನ್ನು ಸೇವಿಸಿದರೆ ದಿನಕ್ಕೆ ಅಗತ್ಯವಿರುವ ಶೇ. 8 ಪೊಟಾಶಿಯಂ, ಶೇ. 3 ಮೆಗ್ನೀಶಿಯಂ ಮತ್ತು ಶೇ. 1 ಕ್ಯಾಲ್ಷಿಯಂ ಸಿಗುತ್ತದೆ.

ಬಾಳೆಹಣ್ಣು:
ಒಂದು ಬಾಳೆಹಣ್ಣನ್ನು ಸೇವಿಸಿದರೆ ದಿನಕ್ಕೆ ಅಗತ್ಯವಿರುವ ಶೇ. 12 ಪೊಟಾಶಿಯಂ, ಶೇ. 8 ಮೆಗ್ನೀಶಿಯಂ ಮತ್ತು ಶೇ.1 ಕ್ಯಾಲ್ಷಿಯಂ ಸಿಗುತ್ತದೆ.