ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಹುದ್ದೆಗೆ ಬಿಇ, ಎಂಎಸ್ಸಿ ಓದಿದವರಿಂದ 7000 ಅರ್ಜಿ; ವಿದ್ಯಾವಂತರಿಗೆ ಮೋದಿ ಸರ್ಕಾರದಿಂದ ಏನಾದ್ರು ಸಿಗುತ್ತಾ??

0
193

ದೇಶದಲ್ಲಿ ಸರಿಯಾದ ರೀತಿಯಲ್ಲಿ ಉದ್ಯೋಗ ಸಿಗದೇ ಎಷ್ಟೊಂದು ಜನರು ನಿರುದ್ಯೋಗದ ಸಮಸ್ಯೆಗೆ ಸಿಲುಕಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾದ ಘಟನೆ ಒಂದು ತಮಿಳುನಾಡಿನಲ್ಲಿ ನಡೆದಿದ್ದು, ಖಾಲಿ ಇರುವ 549 ಪೌರ ಕಾರ್ಮಿಕರ ಹುದ್ದೆಗೆ ನೇಮಕಾತಿ ನಡೆದಿತ್ತು, ಅದರಲ್ಲಿ ಒಟ್ಟು 7,000 ಅರ್ಜಿ ಬಂದಿದ್ದು, ಅದರಲ್ಲಿ ಇಂಜಿನಿಯರ್​ಗಳು, ಡಿಪ್ಲೊಮಾ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಿ ನೇಮಕಾತಿ ಮಂಡಳಿಗೆ ಆಶ್ಚರ್ಯ ಮೂಡಿಸಿದ್ದಾರೆ. ಏಕೆಂದರೆ ಸ್ವಚ್ಚತಾ ಕೆಲಸಕ್ಕೆ ಇಷ್ಟೊಂದು ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಿರುವುದು ಭಾರಿ ವೈರಲ್ ಆಗಿದ್ದು ಜನರಲ್ಲಿ ಬೇಸರ ತಂದಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Also read: ನಿದ್ದೆ ಪ್ರಿಯರಿಗೆ ಸುವರ್ಣಾವಕಾಶ; 9 ಗಂಟೆ ಮಲ್ಕೊಂಡ್ರೆ ಸಿಗುತ್ತೆ ಬರೋಬ್ಬರಿ 1 ಲಕ್ಷ ರೂ. ಸಂಬಳ.!

ಹೌದು ಸ್ಥಳೀಯ ನಗರ ಪಾಲಿಕೆಯ 549 ಪೌರ ಕಾರ್ಮಿಕ ಖಾಲಿ ಹುದ್ದೆಗಳ ಭರ್ತಿಗೆ ಎಂಜಿನಿಯರ್‌, ಪದವಿ ಮತ್ತು ಡಿಪ್ಲೋಮಾ ಪದವಿ ಪಡೆದ ಪ್ರತಿಭಾವಂತರು ಅರ್ಜಿ ಸಲ್ಲಿಸಿದ್ದಾರೆ. ಒಟ್ಟು 7,000 ಅರ್ಜಿ ಬಂದಿದ್ದು, ಇವರಲ್ಲಿ ಶೇ.70ರಷ್ಟು ಮಂದಿ ಕನಿಷ್ಠ ವಿದ್ಯಾಹರ್ತೆ ಎಸ್‌ಎಸ್‌ಎಲ್‌ಸಿ ಮುಗಿಸಿದವರಾಗಿದ್ದಾರೆ. ಉಳಿದ ಶೇ.30ರಷ್ಟು ಉದ್ಯೋಗಾಕಾಂಕ್ಷಿಗಳಲ್ಲಿ ಎಂಜಿನಿಯರಿಂಗ್‌, ಡಿಪ್ಲೊಮಾ ಮತ್ತಿತರೆ ಪದವಿ ಪಡೆದ ಪ್ರತಿಭಾವಂತರು ಸೇರಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಸಂದರ್ಶನದಲ್ಲಿ ನಗರಪಾಲಿಕೆ ಕೆಲಸಕ್ಕೆ ಅರ್ಜಿ ಹಾಕಿದವರ ವಿದ್ಯಾರ್ಹತೆಯನ್ನು ಪರಿಶೀಲನೆ ಮಾಡಿದ್ದು ಒಟ್ಟು 7000 ಮಂದಿಯಲ್ಲಿ ಶೇ.70ಮಂದಿಯದ್ದು ಎಸ್ಸೆಸ್ಸೆಲ್ಸಿ ಪೂರ್ಣಗೊಂಡಿದೆ. ಉಳಿದ ಶೇ.30 ಮಂದಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿಲ್ಲ. ಆದರೆ ಎಸ್ಸೆಸ್ಸೆಲ್ಸಿ ಪೂರ್ತಿಯಾದ ಬಹುತೇಕರು ಇಂಜಿನಿಯರ್​ಗಳು, ಡಿಪ್ಲೊಮಾ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರು ಇದ್ದಾರೆ. ಅದರಲ್ಲಿ ಸಂದರ್ಶನಕ್ಕೆ ಹಾಜರಾದವರ ಪೈಕಿ ಹಲವರಿಗೆ ಮೂಲ ವೇತನ ಎಷ್ಟು ಅಂತ ಗೊತ್ತಿಲ್ಲ. ಆದರೆ ಕೆಲಸ ಸಿಕ್ಕರೆ ಪೌರ ಕಾರ್ಮಿಕರಾಗಿ ಕೆಲಸ ಮಾಡಲು ಸಿದ್ಧ ಎಂದು ಹೇಳಿದ್ದಾರೆ.

Also read: ಮಹಾರಾಷ್ಟ್ರದಲ್ಲಿ ಭಾರೀ ಸಂಖ್ಯೆಯಲ್ಲಿ ಬಹುಮತ ಸಾಬೀತುಪಡಿಸಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ; ಕೊನೆಗೂ ಅಧಿಕಾರ ಕಳೆದುಕೊಂಡ ಬಿಜೆಪಿ.!

ಹಲವು ಜನ ಈಗಾಗಲೇ ಕೆಲವು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದು ಕೇವಲ 6-7ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ. ಆದರೆ ಪ್ರಥಮ ದರ್ಜೆ ಸ್ವಚ್ಛತಾ ಕಾರ್ಮಿಕರಿಗೆ ಕೊಯಂಬತ್ತೂರು ಮಹಾನಗರ ಪಾಲಿಕೆ ಪ್ರಾರಂಭದಲ್ಲೇ 15,700 ರೂ.ನಿಗದಿಪಡಿಸಿದ್ದರಿಂದ ಹೇಗಾದರೂ ಸರ್ಕಾರಿ ಕೆಲಸ ಪಡೆಯಬೇಕು ಎಂಬ ಕಾರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ಸಂಬಳ ಬರುವ ವರ್ಷಗಳಲ್ಲಿ 20,000ಕ್ಕೆ ಏರುತ್ತದೆ ಎನ್ನಲಾಗಿದೆ. ಅಂದರೆ ಸರ್ಕಾರ ಯಾವುದೇ ಕೆಲಸವಾದರೂ ಮಾಡಲು ಸಿದ್ದರಿರುವ ಯುವ ಪೀಳಿಗೆಗೆ ಉದ್ಯೋಗದ ಭಯ ಹೆಚ್ಚಾಗಿದೆ. ಸರ್ಕಾರ ನಿರುದ್ಯೋಗಿಗಳಿಗೆ ತಂದ ಯಾವುದೇ ಯೋಜನೆಗಳು ಪ್ರಯೋಜನಕೆ ಬರುತ್ತಿಲ್ಲ, ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರು ಕೂಡ ಸರ್ಕಾರ ಇನ್ನೂ ಅನುಮೋದನೆ ನೀಡಿಲ್ಲ. ಸಾಕ್ಷಿದಾರರು ಬೇಕು, ಗ್ಯಾರಂಟಿಗೆ ಜಮೀನು ಬೇಕು, ಕ್ಷೇತ್ರದ ಶಾಸಕರು ಸಹಿ ಬೇಕು, ಬೇಗ ಕೆಲಸಕ್ಕೆ ಲಂಚಾ ಬೇಕು ಅಂತ ಬರಿ ಇದ್ದವರಿಗೆ ಯೋಜನೆ ಹಾಕಿ ಬಡವರಿಗೆ ಸಿಗದಂತೆ ಆಗುತ್ತಿರುವುದು ನಿರುದ್ಯೋಗದ ಸಮಸ್ಯೆಗೆ ಕಾರಣವಾಗಿ ಹೆಚ್ಚಿನ ವಿದ್ಯಾರ್ಹತೆ ಹೊಂದಿದರು ಕಸ ಹೊಡಿಯುವ ಕೆಲಸಕ್ಕೂ ಪರದಾಡುವಂತೆ ಆಗಿದೆ.