ರಾಜ್ಯ ಬಿಜೆಪಿಯಲ್ಲಿ ವಿವಾದಗಳ ಸರದಾರ ಎಂದೇ ಗುರಿತಿಸಿಕೊಂಡಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಈಗ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ, ಏನದು ನೀವೇ ನೋಡಿ…

0
531

ರಾಜ್ಯ ಬಿಜೆಪಿಯಲ್ಲಿ ವಿವಾದಗಳ ಸರದಾರ ಎಂದೇ ಗುರಿತಿಸಿಕೊಂಡಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಈಗ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಕೊಪ್ಪಳದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈಶ್ವರಪ್ಪ ಕಾರ್ಯಕರ್ತರಿಗೆ, “ಪಕ್ಷದ ಬಗ್ಗೆ ಏನು ಗೊತ್ತಿಲ್ಲ ಅಂದ್ರೆ ಸುಳ್ಳನ್ನಾದ್ರೂ ಹೇಳಿ” ಅಂತ ಮಾಡಿರೋ ಭಾಷಣದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾಯಿದೆ. ಅಷ್ಟಕ್ಕೂ ನಡೆದಿದ್ದು ಏನು ಈಶ್ವರಪ್ಪ ಏನು ಹೇಳಿದರು ಅಂತೀರ ನೀವೇ ನೋಡಿ.

ಕೊಪ್ಪಳ ಜಿಲ್ಲೆ, ಗಂಗಾವತಿ ತಾಲೂಕಿನ ಕಾರಟಗಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ನಡೆದಿತ್ತು, ಸಾಮಾನ್ಯವಾಗಿ ಕಾರ್ಯಕರ್ತರ ಸಭೆ ಅಂದ್ರೆ ಅವರಿಗೆ ಹೇಗೆ ಚುನಾವಣೆಗೆ ಸಿದ್ಧತೆ ನಡೆಸಬೇಕು, ಜನರಿಗೆ ಹೇಗೆ ನಮ್ಮ ಪಕ್ಷದ ಸಾಧನೆಗಳ ಬಗ್ಗೆ ಹೇಳಬೇಕು ಅಂತ ಪಕ್ಷದ ಹಿರಿಯ ಮುಖಂಡರು ತಿಳಿಸಿಕೊಡುತ್ತಾರೆ, ಇಷ್ಟೇ ಕೊಪ್ಪಳದಲ್ಲಿ ನಡೆದ್ದಿದ್ದರೆ ಪರವಾಗಿರಲಿಲ್ಲ. ಪಕ್ಷದ ಸಾಧನೆಗಳ ಬಗ್ಗೆ ಏನೂ ಗೊತ್ತಿಲ್ಲ ಅಂದ್ರೆ ಕೊನೆ ಪಕ್ಷ ಸುಳ್ಳಾನ್ನಾದ್ರೂ ಹೇಳಿ ಅಂತ ಕಾರ್ಯಕರ್ತರಿಗೆ ಚುನಾವಣಾ ಪ್ರಚಾರದ ಪಾಠ ಮಾಡಿದ್ದಾರೆ ಈಶ್ವರಪ್ಪ. ನಮ್ಮ ಸರ್ಕಾರ ಇದ್ದಾಗ ರೈತರು, ದಲಿತರು, ಹೆಣ್ಣು ಮಕ್ಕಳು, ಮಹಿಳೆಯರು, ವಯಸ್ಸಾದವರಿಗೆ ಜನರಿಗೆ ಏನೆಲ್ಲಾ ಅನುಕೂಲವಾಗಿದೆ. ಕೇಂದ್ರ ಸರ್ಕಾರದ ಸಾಧನೆ ಏನು ಅನ್ನೋದು ತಿಳಿದುಕೊಳ್ಳಲೇಬೇಕು, ಒಂದು ವೇಳೆ ಏನು ಗೊತ್ತಿಲ್ಲ ಅಂದ್ರೆ ಸುಳ್ಳನ್ನಾದ್ರೂ ಹೇಳಿ ಎಂದು ಕಾರ್ಯಕರ್ತರ ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ.

60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಮಾಡದಿರುವ ಕೆಲಸವನ್ನು ಹೇಗೆ ಕೇಂದ್ರದಲ್ಲಿ ಹಿಂದಿನ ಮತ್ತು ಇಂದಿನ ಬಿಜೆಪಿ ಸರ್ಕಾರಗಳು ಮಾಡಿ ತೋರಿಸಿವೆ, ಸಿದ್ದರಾಮಯ್ಯ ಸರ್ಕಾರದ ವಿಫಲತೆ, ವಾಜಪೇಯಿ ಪ್ರಧಾನಿಯಾಗಿದ್ದಾಗ ಹೇಗೆಲ್ಲ ದೇಶವನ್ನು ಮುನ್ನಡೆಸಿದ್ದರು, ಹೇಗೆ ಪಾಕಿಸ್ತಾನಕ್ಕೆ ಬುದ್ದಿ ಕಲಿಸಿದ್ದರು. ಈಗ ನರೇಂದ್ರ ಮೋದಿಯವರು ಹೇಗೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕಿಸ್ತಾನಕ್ಕೆ ಬುದ್ದಿ ಕಲಿಸಿದ್ದಾರೆ.

ಸರ್ಕಾರದ ಸಾಧನೆಗಳಾದ ನೋಟ್ ಬ್ಯಾನ್, ಜಾನ್ ಧನ್, ಜಿಎಸ್ಟಿ, ಸುಕನ್ಯಾ ಸಮೃದ್ಧಿ, ಫಸಲ್ ಭೀಮ, ಅಟಲ್ ಪಿಂಚಣಿ ಮತ್ತು ರಾಜ್ಯ ಬಿಜೆಪಿಯ, ಭಾಗ್ಯ ಲಕ್ಷ್ಮಿ ಬಾಂಡ್, ವಯಸ್ಸಾದವರಿಗೆ, ವಿಧವೆಯರಿಗೆ ಮತ್ತು ಅಂಗವಿಕಲರಿಗೆ ಪಿಂಚಣಿ, ಹಿಂದುಳಿದವರ ಅಭಿವೃದ್ಧಿ ಬಗ್ಗೆ ಮಾಹಿತಿಯನ್ನು ಚುನಾವಣೆಯ ಪ್ರಚಾರದಲ್ಲಿ ಬಳಸಿಕೊಳ್ಳಿ ಎಂದ ಅವರು, ನಿಮಗೆ ಇವೆಲ್ಲ ಏನು ಗೊತ್ತಿಲ್ಲ ಅಂದ್ರೆ, ಸುಳ್ಳನ್ನಾದ್ರೂ ಹೇಳಿ, ಸುಳ್ಳು ಹೇಳೋಕೆ ಆಗಲ್ಲ ಅಂದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಮಲ್ಕೋಬಹುದು ಅಂತ ಈಶ್ವರಪ್ಪ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ.