ರಾಜ್ಯ ನೌಕರರ ವಿಮಾ ನಿಗಮ ಜ್ಯೂನಿಯರ್ ರೆಸಿಡೆಂಡ್ ಮತ್ತು ಟ್ಯೂಟರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
404

ಉದ್ಯೋಗದ ನೀರಿಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ರಾಜ್ಯ ನೌಕರರ ವಿಮಾ ನಿಗಮ 41 ಜ್ಯೂನಿಯರ್ ರೆಸಿಡೆಂಡ್ ಮತ್ತು ಟ್ಯೂಟರ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಜೂನ್ 6 ಮತ್ತು 7,2019 ರಂದು ನಡೆಯುವ ವಾಕ್‌-ಇನ್ ಇಂಟರ್‌ವ್ಯೂ ಗೆ ಹಾಜರಾಗಬಹುದು.

Also read: ಇಂಡಿಯನ್‌ ಏರ್‌ಫೋರ್ಸ್‌ನಲ್ಲಿ ಗ್ರೂಪ್ ‘X’ & ಗ್ರೂಪ್ ‘Y’ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ…

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts): ಜ್ಯೂನಿಯರ್ ರೆಸಿಡೆಂಟ್ ಮತ್ತು ಟ್ಯೂಟರ್

ಸಂಸ್ಥೆ (Organisation): ರಾಜ್ಯ ನೌಕರರ ವಿಮಾ ನಿಗಮ ( ಇಎಸ್‌ಐಸಿ ಕರ್ನಾಟಕ)

ವಿದ್ಯಾರ್ಹತೆ (Educational Qualification): ಈ ಹುದ್ದೆಗಳಿಗೆ ಎಂಬಿಬಿಎಸ್‌ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಉದ್ಯೋಗ ಸ್ಥಳ (Job Location): ಕಲಬುರಗಿ (ಕರ್ನಾಟಕ)

ವಯೋಮಿತಿ: ಗರಿಷ್ಠ 30 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವೇತನದ: ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 76,000/-ರೂ.

ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ವಾಕ್‌-ಇನ್ ಇಂಟರ್‌ವ್ಯೂ ಮಾಡಲಾಗುತ್ತಿದ್ದು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): June 6, 2019

ಸಂದರ್ಶನ: ಅಭ್ಯರ್ಥಿಗಳು ಇಎಸ್‌ಐಸಿಯ ಅಧಿಕೃತ ವೆಬ್‌ಸೈಟ್‌ https://www.esic.nic.in/ ನಲ್ಲಿ ಕೇಳಲಾಗಿರುವ ದಾಖಲೆಗಳೊಂದಿಗೆ ಜೂನ್ 6 ಮತ್ತು 7 ರಂದು ನಡೆಯುವ ವಾಕ್‌-ಇನ್‌ ಇಂಟರ್‌ವ್ಯೂ ನಲ್ಲಿ ಭಾಗವಹಿಸಬಹುದು.

ಸಂದರ್ಶನ ನಡೆಯುವ ಸ್ಥಳ: ರಾಜ್ಯ ನೌಕರರ ವಿಮಾ ನಿಗಮ, ಇಎಸ್‌ಐಸಿ ಮೆಡಿಕಲ್ ಕಾಲೇಜು ಮತ್ತು ಆಸ್ಟತ್ರೆ, ಗುಲ್ಬರ್ಗಾ, ಕರ್ನಾಟಕ.