ಮಕ್ಕಳು, ಸೊಸೆ ಮತ್ತು ಮೊಮ್ಮಕ್ಕಳಿಗೂ ಸಹ ಪಾರ್ಟಿಯಲ್ಲಿ ಹೆಚ್ಚು ಪ್ರಾಮುಖ್ಯತೆ ಇದ್ದರೂ ಸಹ ದೇವೇಗೌಡರು ಹೇಳುತ್ತಾರೆ “ನಾನು ಕುಟುಂಬ ರಾಜಕಾರಣ ಮಾಡಿಲ್ಲ” ಇವರ ಮಾತನ್ನು ನಂಬುತ್ತೀರಾ??

0
274

ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಕುಟುಂಬ ರಾಜಕಾರಣದ ಬಗ್ಗೆ ಬರುತ್ತಿರುವ ಮಾತುಗಳಿಗೆ ಮಾದ್ಯಮ ವೊಂದರ ಸಂವಾದದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟು ನಾವು ಕುಟುಂಬದ ರಾಜಕಾರಣ ಮಾಡುವ ಉದ್ದೇಶ ಇಟ್ಟುಕೊಂಡು ರಾಜಕೀಯ ಮಾಡಿಲ್ಲ ಅವರವರ ಹೆಸರಿನಿಂದ ಬೆಳೆದು ನಿಂತ್ತಿದ್ದಾರೆ, ಪಕ್ಷವು ನನ್ನ ಕುಟುಂಬವಲ್ಲ ಅದು ಇರುವುದು ನಮಗಲ್ಲ, ಒಂದು ಆವಕಾಶ ನೀಡಿದ್ದ ಕಾರಣಕ್ಕೆ ಜಿಡಿಎಸ್ ನಲ್ಲಿ ಎಲ್ಲರು ಬೆಳೆದ್ದಿದಾರೆ. ಎಲ್ಲದಕ್ಕೂ ನಾನೇ ಸಹಾಯ ಮಾಡಿ ಬೆಳಸಿಲ್ಲ ಎಂದು ತಿಳಿಸಿದ್ದಾರೆ.


Also read: 40 ಯೋಧರು ಬಲಿಯಾದ ಪುಲ್ವಾಮಾದಲ್ಲಿ ಮುಸ್ಲಿಂ ಮತ್ತೆ ಹಿಂದೂಗಳು ಜೊತೆಗೂಡಿ ಶಿವ ದೇಗುಲವನ್ನು ಜೀರ್ಣೋದ್ದಾರ ಮಾಡ್ತಿದ್ದಾರೆ, ಮನುಷ್ಯತ್ವವೇ ಎಲ್ಲಕಿಂತ ಮಿಗಿಲು ಅಲ್ಲವೇ??

ನನ್ನ ಕುಟುಂಬದ ಸದಸ್ಯರನ್ನು ನಾನು ರಾಜಕೀಯ ಆಸೆ ಮೂಡಿಸಿ ಎಳೆದ ತಂದಿದ್ದರೆ, ಹಿಂದಿನ ಬಾಗಿಲಿನಿಂದ ವಿಧಾನಪರಿಷತ್ತಿಗೆ ಅಥವಾ ರಾಜ್ಯಸಭೆಗೆ ಸದಸ್ಯರನ್ನಾಗಿ ಮಾಡಿದ್ದರೆ ಎಲ್ಲರಿಗೂ ಪ್ರಶ್ನಿಸುವ ಹಕ್ಕು ಇದೆ. ಅವರು ಜನಗಳ ಮುಂದೆ ನಿಂತು ಪರೀಕ್ಷೆಯಲ್ಲಿ ಗೆದ್ದು ಬಂದರೆ ಯಾಕೆ ಹೊಟ್ಟೆಕಿಚ್ಚು ಪಡಬೇಕು’ ಇದನ್ನು ಬಿಟ್ಟು ಸಂಬಂಧವಿಲ್ಲದ ವಿಷಯಕ್ಕೆ ಮಾತನಾಡುವುದು ಎಷ್ಟು ಕ್ಷೆಮ. ಈಗ ಸಚಿವರಾಗಿರುವ ಡಿ.ಸಿ ತಮ್ಮಣ ಈ ಹಿಂದೆ ನನ್ನ ಜೊತೆಗೆ ಇರಲಿಲ್ಲ, ಅವರು ಮೊದಲು ಕಾಂಗ್ರೆಸ್-ನಲ್ಲಿದ್ದರು. ಬಳಿಕ ಬಿಜೆಪಿಗೆ ಹೋದರು. ಅವರ ನಮ್ಮ ಸಂಬಂಧ ಆಗಿದ್ದು ಆ ಮೇಲೆ. ಇದಕ್ಕೆ ಜನರು ಬಿಗನ ಕರೆದುಕೊಂಡು ಶಾಸಕರನ್ನಾಗಿ ಮಾಡಿದ್ದಾರೆ ಎನ್ನುತ್ತಿದ್ದೀರಿ. ಅದಕ್ಕೆ ನಾನು ಏನು ಹೇಳಲ್ಲಿ’ ಎಂದರು.


Also read: ಪೌರ ಕಾರ್ಮಿಕರ ಕಾಲು ತೊಳೆದಿದ್ದು ಪಬ್ಲಿಸಿಟಿ ಸ್ಟಂಟ್ ಅಂತ ಹೇಳಿದವರಿಗೆ ಇದನ್ನು ತೋರಿಸಿ, ಪೌರ ಕಾರ್ಮಿಕರಿಗೆ ಮೋದಿ ತಮ್ಮ ಸ್ವಂತ ಉಳಿತಾಯದಿಂದ 21 ಲಕ್ಷ ದೇಣಿಗೆ ನೀಡಿ ಅವರು ಮಹಾನ್ ನಾಯಕ ಅನ್ನೋದನ್ನ ಸಾಬೀತು ಮಾಡಿದ್ದಾರೆ!

ಹಿರಿಯ ಮಗ ರೇವಣ್ಣ ಪ್ರವೇಶ?

ನಾನು ತುರ್ತು ಪರಿಸ್ಥಿತಿಯ ವೇಳೆಯಲ್ಲಿ ಜೈಲಿನಲ್ಲಿದ್ದೆ. ನನ್ನ ಕ್ಷೆತ್ರದಲ್ಲಿ ಪುಟ್ಟಸ್ವಾಮಿ ಗೌಡ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದೆ. ಅವರು ನನ್ನ ಬಂಧುವೇ, ಬಾವ ಮೈದುನನಾ’ ಎಂದು ಪ್ರಶ್ನಿಸಿದ ಗೌಡರು’ ನಾನು ಜೈಲಿಗೆ ಹೋದಾಗ ಹಾರನಹಳ್ಳಿ ರಾಮಸ್ವಾಮಿ ಅವರು ಕಾಂಗ್ರೆಸ್ ಗೆ ಹೊರಟರು.ಆ ಸಮಯದಲ್ಲಿ ಸಿಎಸ್. ಕೃಷ್ಣಪ್ಪ, ಮಂಜಪ್ಪ ಮತ್ತಿತರರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಆಗ ರೇವಣ್ಣ ಐಐಟಿಯಲ್ಲಿದ್ದ. ಅವನನ್ನು ಉದ್ಯಮಿ ಮಾಡಬೇಕು ಅಂತ ಇದ್ದೆ. ಈ ವೇಳೆಯಲ್ಲಿ ಊರಿಗೆ ಹೋಗಿ ರಾಜಕಾರಣಕ್ಕೆ ಬರಲು ಮುಂದಾದ. ಕೆಲವು ವಿಷಯಗಳ ಬಗ್ಗೆ ತಿಳಿಸಿದರು ಕೇಳಲಿಲ್ಲ, ಜಿಲ್ಲಾ ಪಂಚಾಯತಿ ಚುನಾವಣೆಗೆ ಸ್ಪರ್ಧೆ ಮಾಡಿ ಗೆದ್ದ, ಆದರೆ ಅವನನ್ನು ನಾನು ಅಧ್ಯಕ್ಷನನ್ನಾಗಿ ಮಾಡಲಿಲ್ಲ. ನಾನು ದಲಿತ ಹುಡುಗನನ್ನು ಅಧ್ಯಕ್ಷನನ್ನಾಗಿ ಹಾಗೂ ನಾಯಕ ಸಮುದಾಯದ ಯುವಕನನ್ನು ಉಪಾಧ್ಯಕ್ಷನನ್ನಾಗಿ ಮಾಡಿದೆ. ಇದರ ಮೂಲಕವೇ, ದೇವೇಗೌಡ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ನೇರವಾಗಿ ಹೇಳಿದರು.


Also read: ಕೇಂದ್ರದಲ್ಲಿ ಸ್ಪಷ್ಟ ಬಹುಮತ ಬರದಿದ್ದರೆ, ಕರ್ನಾಟಕದ ರಿಮೋಟ್ ಮುಖ್ಯಮಂತ್ರಿ ಥರ ಪ್ರಧಾನಿಯೂ ಇರಬೇಕಾಗುತ್ತೆ; ದೇಶದ ಹಿನ್ನೆಡೆ ಆಗಲಿದೆ : ಮೋದಿ

ಕುಮಾರಸ್ವಾಮಿ ರಾಜಕೀಯಕ್ಕೆ;

ಮೊದಲು ಎಚ್, ಡಿ ಕುಮಾರಸ್ವಾಮಿ ಚಲನಚಿತ್ರ ನಿರ್ಮಾಪಕರಾರಿದ್ದರು. ‘ರಾಮಕೃಷ್ಣ ಹೆಗಡೆ ಅವರು ಪಿ.ಜಿ.ಆರ್, ಸಿಂಧ್ಯ ಅವರನ್ನು ಗೃಹ ಸಚಿವರನ್ನಾಗಿ ಮಾಡಿದರು. ಆ ವೇಳೆ, ಲೋಕಸಭಾ ಚುನಾವಣೆಗೆ ನಿಲ್ಲಿ ಎಂದು ಹೆಗಡೆ ಅವರು ಸಿಂಧ್ಯ ಅವರಿಗೆ ಹೇಳಿದರು ಅದಕ್ಕೆ ಸಿಂಧ್ಯ ಒಪ್ಪಲಿಲ್ಲ, ವರದೇಗೌಡ ಅವರನ್ನು ಅಭ್ಯಥಿಯನ್ನಾಗಿ ಮಾಡಲು ಯತ್ನಿಸಿದರು. ಅದಕ್ಕೆ ಅವರ ಕುಟುಂಬದವರು ಒಪ್ಪಲಿಲ್ಲ, ಆ ಸಂಧರ್ಭದಲ್ಲಿ ಅನಿವಾರ್ಯವಾಗಿ ಕುಮಾರಸ್ವಾಮಿಯನ್ನು ಕರೆದುಕೊಂಡು ಬಂದರು. ಆತನ ಬಿ – ಫಾರಂ ತಂದಾಗ ಅದನ್ನು ಎಸೆದೆ, ಈಗಲೇ ಒಬ್ಬ ಮಗ ರಾಜಕಾರಣದಲ್ಲಿದ್ದಾನೆ. ಮತ್ತೊಬ್ಬ ಮಗ ಯಾಕೆ. ಪ್ರಾಣವನ್ನೇಕೆ ತೆಗೆಯುತ್ತಿರಿ ಎಂಬುದಾಗಿ ಹಲವು ಚರ್ಚೆ ಮಾಡಿದೆ. ಮುಖ್ಯವಾಗಿ ಒಂದು ವಿಷಯ ಹೇಳಬೇಕು ಎಂದರೆ ಸಿದ್ದರಾಮಯ್ಯ, ಮೆರಾಜುದ್ದೀನ್ ಪಟೇಲ್ ಹಾಗೂ ಸಿ.ಎಂ ಇಬ್ರಾಹಿಂ ಅವರನ್ನು ಪಕ್ಷದ ಅಧ್ಯಕ್ಷ ರನ್ನಾಗಿ ಮಾಡಿದ್ದು ಯಾರು? ಎ, ಕೃಷ್ಣಪ್ಪ ಅವರನ್ನು ಮನೆಗೆ ಹೋಗಿ ಕರೆದುಕೊಂಡು ಬಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿಲ್ಲವೇ ಕಷ್ಟ ಬಂದಾಗ ಎಲ್ಲರೂ ಬಿಟ್ಟು ಹೋದರು’ ತಿಳಿಸಿದರು.

ನನ್ನ ಮೊಮ್ಮಗ ಪ್ರಜ್ವಲ್ ಪ್ರವೇಶ;

ಪ್ರಜ್ವಲ್ ರಾಜಕೀಯಕ್ಕೆ ಬರುವ ಯಾವುದೇ ಉದ್ದೇಶವನ್ನು ತಿಲಿಸಿದಿಲ್ಲ ಅವರು ಬಿ.ಇ ಪದವಿಧರ, ಎಂ, ಟೆಕ್ ಮಾಡುವಂತೆ ಆತನಿಗೆ ತಿಳಿಸಿದ್ದೆ, ವಿಧಾನಸಭಾ ಚುನಾವಣೆ ಮುಗಿದ ಮೇಲೆ ಮಾಡುತ್ತೇನೆ ಎಂದ ಚುನಾವಣೆ ಮುಗಿದ ಮೇಲೆ ಈ ಬಗ್ಗೆ ಮತ್ತೆ ಕೇಳಿದರೆ. ಜಿಲ್ಲಾ ಪಂಚಾಯತಿ ಚುನಾವಣೆಯಾದ ಮೇಲೆ ಹೋಗುತ್ತೇನೆ ಎಂದ. ಹೀಗೆ ಸಮಯ ತಳ್ಳುತ್ತಾ ಹೋದ. ಆತನಿಗೆ ಆಸಕ್ತಿ ಇಲ್ಲ ಎಂಬುದು ಗೊತ್ತಾಯಿತು. ಆತನಿಗೆ ವಿಧಾನಸಭೆಗೆ ಹೋಗಲು ಮನಸ್ಸಿತ್ತು. ಆದರೆ ನೀಡಲಿಲ್ಲ, ಕೆಲವು ತಿಂಗಳುಗಳ ಹಿಂದೆ ಹಾಸನದ ಕಾರ್ಯಕ್ರಮವೊಂದರಲ್ಲಿ ‘ನನಗೆ ಈಗ 86 ವರ್ಷ, ಮತ್ತೆ ಚುನಾವಣೆ ಸ್ಪರ್ಧಿಸುವುದಿಲ್ಲ ಪ್ರಜಲ್ ಸ್ಪರ್ಧೆ ಮಾಡುತ್ತಾನೆ; ಎಂದು ಪ್ರಕಟಿಸಿದ್ದೆ. ಅದಕ್ಕೂ ಮುನ್ನ ಜಿಲ್ಲೆಯ ಎಲ್ಲ ನಾಯಕರ ಜತೆಗೆ ಸಮಾಲೋಚನೆ ಮಾಡಿದ್ದೆ’ ಎಂದು ಗೌಡರು ಎಂದು ಹಿರಿಯ ಮೊಮ್ಮಗನ ಎಂಟ್ರಿ ಬಗ್ಗೆ ತಿಳಿಸಿದರು.

ನಿಖಿಲ್ ಕುಮಾರಸ್ವಾಮಿ;

ನಿಖಿಲ್ ಒಬ್ಬ ಒಳ್ಳೆಯ ನಟ ಕೆಲವು ತಿಂಗಳ ಹಿಂದೆ ಮಂಡ್ಯದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ. ಚುನಾವಣೆಗೆ ಸ್ಪರ್ಧಿಸುವಂತೆ ಯುವಕರು ಒತ್ತಾಯ ಮಾಡಿದರು ಅದಕ್ಕೆ ದೊಡ್ಡವರು ಹೇಗೆ ಹೇಳುತ್ತಾರೆ ಹಾಗೆ ಮಾಡೋಣ ಎಂದು ನಿಖಿಲ್ ಹೇಳಿದ. ಅದರಂತೆ ಬೆಂಗಳೂರಿನಲ್ಲಿ ತಿಂಗಳ ಹಿಂದೆ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಎಲ್ಲ ಮುಖಂಡರು ನಿಖಿಲ್ ರಾಜಕೀಯ ಬರಬೇಕು ಎಂದು ಒತ್ತಾಯಿಸಿದರು. ಆಗ ನಾನು ಮತ್ತು ಕುಮಾರಸಾಮಿ ಉತ್ತರ ನೀಡಲಿಲ್ಲ. ಜನರ ಒತ್ತಡಕ್ಕೆ ಆಸೆ ನಿರಾಶೆ ಮಾಡಬಾರದು ಎಂದು ಸ್ಪರ್ಧೆಗೆ ಒಪ್ಪಿಗೆ ನೀಡಿದ್ದೇವೆ ಇದನ್ನು ತಿಳಿದು ಕುಟುಂಬ ರಾಜಕೀಯ ಎಂದರೆ ಯಾರು ಏನು ಮಾಡಲು ಸಾದ್ಯವಿಲ್ಲ. ಬರುವ ಲೋಕಸಭಾ ಚುನಾವಣೆಯಲ್ಲಿ 12 ಸ್ಥಾನ ಕೇಳಿದ್ದೇವೆ ಆದರೆ 10 ಆದರು ಕೊಟ್ಟರೆ ಸಾಕು ಎಂದು ತಿಳಿಸಿದರು