100ವರ್ಷಗಳ ಇತಿಹಾಸವಿರುವ ಶ್ರೀರಾಮ ಮಂದಿರ ವಿದ್ಯಾಕೇಂದ್ರವಾಗಿ, 3500 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಪವಾಡವನ್ನು ಪ್ರತಿಯೊಬ್ಬರು ತಿಳಿಯಲೇಬೇಕು..

0
656

ಶ್ರೀರಾಮ ಮಂದಿರ, ಕಲ್ಲಡ್ಕ  (ದಕ್ಷಿಣ ಕನ್ನಡ)

ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಇಲ್ಲಿನ ಶ್ರೀರಾಮ ಮಂದಿರ ಸುಮಾರು 100ವರ್ಷಗಳ ಇತಿಹಾಸವಿರುವ ಮಂದಿರ ಯಾವುದೇ ಪೌರಾಣಿಕ, ಐತಿಹಾಸಿಕ ಹಿನ್ನಲೆಗಳಿಲ್ಲದ, ಕೇವಲ ಊರಿನ ಜನರಿಗೆ ತಾವು ಒಗ್ಗಟ್ಟಾಗಲು ಆರಂಭಗೊಂಡ ಭಜನಾ ಮಂದಿರ ಇದಾಗಿದ್ದು ಮುಂದಿನ ದಿನಗಳಲ್ಲಿ ಸಮಾಜ ಪರಿವರ್ತನಾ ಕೇಂದ್ರವಾಗಿ ಶ್ರೀರಾಮ ಮಂದಿರ ಮೈದಳೆಯಿತು.

Also read: ಈ ದೇವಾಲಯಕ್ಕೆ ಬಂದು ನರಸಿಂಹ ಸ್ವಾಮಿಯ ಮೂಲ ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಸಕಲ ಕಾರ್ಯಗಳಲ್ಲಿ ಯಶಸ್ಸು ಶತಸಿದ್ಧ..!

ಮಂದಿರದಿಂದ ಶೈಕ್ಷಣಿಕ ಪರಿವರ್ತನೆ:

ಶಿಕ್ಷಣಕ್ಕಾಗಿ ಹತ್ತಿರದಲ್ಲಿ ಶಾಲೆಗಳಿಲ್ಲದ್ದರಿಂದ ಓದನ್ನೇ ಕೈಬಿಡುತ್ತಿದ್ದವರ ಕೈ ಹಿಡಿದು ನಡೆಸಿದ್ದು ಶ್ರೀರಾಮ ವಿದ್ಯಾಕೇಂದ್ರ. ಇಂದು 3500 ವಿದ್ಯಾರ್ಥಿಗಳು 200 ಸಿಬ್ಬಂದಿಗಳಿಂದ ಕೂಡಿ ಶಿಕ್ಷಣದ  ಜೊತೆಗೆ ಸಂಸ್ಕಾರದ ಓಂ ನಾಮ ಇಲ್ಲಿ ಮೊಳಗುತ್ತಿದೆ. ಊರಿನ ಎಲ್ಲರಿಗೂ ಇಂದು ಎಸ್.ಎಸ್.ಎಲ್.ಸಿ ವರೆಗಿನ ಶಿಕ್ಷಣ ಉಚಿತವಾಗಿ ಮಾತೃಭಾಷೆಯಲ್ಲಿ ದೊರೆಯುವ ಪ್ರೇರಣೆ ಹುಟ್ಟಿದ್ದು ಇದೇ ಶ್ರೀರಾಮ ಮಂದಿರದ ನೆಲದಲ್ಲಿದೆ.

Also read: ಶಿವ ಎಂದರೆ ಸಾಕು ಭಕ್ತರಿಗೆ ವರ ನೀಡುವ ನಮ್ಮ ನಾಡಿನ ಪ್ರಸಿದ್ಧ 5 ಶಿವ ದೇವಾಲಯಗಳು ಇಲ್ಲಿವೆ ನೋಡಿ

ಸಾಮಾಜಿಕ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟವಂತೂ ಮಂದಿರದ ಸಾಮಾಜಿಕ ಮುಖಕ್ಕೆ ಹಿಡಿದ ಕೈಗನ್ನಡಿ ಅಯೋಧ್ಯಾ ಶ್ರೀರಾಮ ಮಂದಿರದ ಆಂದೋಲನ, 2ನೇ ಸ್ವಾತಂತ್ರ ಸಂಗ್ರಾಮವೆಂದೇ ಹೇಳಬಹುದಾದ ತುರ್ತುಪರಿಸ್ಥಿತಿಯ ಹೋರಾಟ, ಕಿತ್ತೂರು ರಾಣಿ ಚೆನ್ನಮ್ಮ ಮೈದಾನ ಹೋರಾಟ ಹಾಗೂ ಸ್ಥಳೀಯ ಮತಾಂಧ ಶಕ್ತಿಗಳ ಮಟ್ಟ ಹಾಕಿದ ಎಲ್ಲ ಕಾರ‌್ಯಗಳಿಗೆ ಶಕ್ತಿ ತುಂಬಿದ್ದು ಇದೇ ರಾಮ ಮಂದಿರದ ನೆಲ.
ಕಲ್ಲಡ್ಕದ ಪಕ್ಕದ 3 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಬರುವ ಸುಮಾರು 15ಕ್ಕೂ ಹೆಚ್ಚು ಭಜನಾ ಮಂದಿರಗಳೂ ಇಂದು ಇದೇ ಮಂದಿರದ ಚಟುವಟಿಕೆಗಳ ಮಾದರಿಗಳನ್ನು ಇಟ್ಟುಕೊಂಡು ಕಾರ‌್ಯಪ್ರವೃತ್ತವಾಗಿದೆ. ಊರಿನಲ್ಲಿದ್ದ ಜಾತಿಯ ಗೋಡೆಗಳ ಕಲ್ಲು ನಿಧಾನವಾಗಿ ಬಿದ್ದುಹೋಯಿತು. ಸಾಮರಸ್ಯದ ಭಾವ ಜಾಗೃತವಾಯಿತು. ಅನ್ಯಾಯದ ವಿರುದ್ಧ ಹಲವು ಪ್ರತಿಭಟನೆಗಳು ನಡೆದವು. ಎಲ್ಲ ಚಟುವಟಿಕೆಗಳ ಕೇಂದ್ರವಾಗುತ್ತಾ ಇದ್ದ ಭಜನಾ ಮಂದಿರದ ವಿಸ್ತರಣೆಯ ಕಾರ‌್ಯ ನಡೆದಿದ್ದು ಇಂದು ಮೊದಲಿದ್ದ ಮಂದಿರದ ಜಾಗದಲ್ಲಿ ಭವ್ಯ ಶಿಲಾಮಯ ಗರ್ಭಗುಡಿ ಹಾಗೂ ಹಿಂದು ಚಟುವಟಿಕೆಗಳು ವ್ಯಾಪಾರೀ ಕ್ಷೇತ್ರದಲ್ಲೂ ಪಸರಿಸಬೇಕೆಂಬ  ಕಾರಣದಿಂದ ವಾಣಿಜ್ಯ ಸಂಕೀರ್ಣಗಳನ್ನು ಒಳಗೊಂಡ ಮಳಿಗೆಗಳು ಸಿದ್ಧಗೊಂಡಿವೆ.

ಸಾಮಾಜಿಕ ಪರಿವರ್ತನೆಯ ಕ್ಷೇತ್ರ:

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಮಂದಿರದ ಪ್ರತಿಷ್ಠಾ ಕಾರ‌್ಯಕ್ರಮವೂ ಕಳೆದ ವರ್ಷ ನಡೆದಿದ್ದು, ಅದೊಂದು ದಾಖಲೆಯನ್ನೇ ಬರೆಯಿತು. ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ಹೊಸ ಅಧ್ಯಾಯವನ್ನೇ ಬರೆದು ಇತಿಹಾಸ ನಿರ್ಮಿಸಿದ ಪ್ರತಿಷ್ಠಾ ಕಾರ‌್ಯಕ್ರಮವನ್ನು ಚಿತ್ರದುರ್ಗದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ನೆರವೇರಿಸಿದರು. ಅಂದು ಜಾತಿ, ವರ್ಗ, ಮೇಲು, ಕೀಳು ಭಾವನೆ ಮರೆತು ಎಲ್ಲಾ ಹಿಂದು ಬಾಂಧವರಿಗೆ ಪ್ರತಿಷ್ಠಾಪನೆಗೊಂಡ, ಸಪರಿವಾರ ಶ್ರೀರಾಮಚಂದ್ರ ದೇವರ ವಿಗ್ರಹಗಳಿಗೆ ಅಭಿಷೇಕ ಮಾಡುವ  ಅವಕಾಶ ನೀಡಲಾಗಿತ್ತು. ಇಂದೂ ಎಲ್ಲರಿಗೂ ಮಂದಿರದ ಗರ್ಭಗುಡಿಯೊಳಗೆ ಮುಕ್ತ ಪ್ರವೇಶಕ್ಕೆ ಅವಕಾಶವಿದೆ.
ಶ್ರೀರಾಮ ಮಂದಿರದ ಶಿಲಾನ್ಯಾಸಕ್ಕೂ ಮುನ್ನ ಸುತ್ತಮುತ್ತಲಿನ 3500 ಮನೆಗಳಿಂದ ಜ್ಯೋತಿ ತೆಗೆದುಕೊಂಡು ಭವ್ಯ ಮೆರವಣಿಗೆಯಲ್ಲಿ ಮಂದಿರಕ್ಕೆ ಬಂದು ಗರ್ಭಗುಡಿಯ ನಂದಾದೀಪದ ಬೆಳಕಿನಲ್ಲಿ ಐಕ್ಯಗೊಳಿಸುವ ಕಾರ‌್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ‘ರಾಮ ನಿಮ್ಮೆಡೆಗೆ – ನೀವು ನಮ್ಮೆಡೆಗೆ’ ಎಂಬ ಈ ಕಾರ‌್ಯಕ್ರಮ ಮತ್ತೊಂದು ಬಾಂಧವ್ಯ-ಬೆಸುಗೆಯನ್ನು ಸಮಾಜದಲ್ಲಿ ಹುಟ್ಟುಹಾಕಿತು