ಯಾವ ಯಾವ ನಕ್ಷತ್ರ ಯಾವ ರಾಶಿಗಳಿಗೆ ಬರುತ್ತದೆ ಎಂಬ ವಿವರ ಇಲ್ಲಿದೆ ನೋಡಿ..

0
5197

ಸಾಮಾನ್ಯವಾಗಿ ಯಾವ ಯಾವ ನಕ್ಷತ್ರ ಯಾವ ಯಾವ ರಾಶಿಯವರಿಗೆ ಬರುತ್ತದೆ ಎಂದು ಕೆಲವರಿಗೆ ತಿಳಿದಿರುವುದಿಲ್ಲ.. ನಿಮಗಾಗಿ ಈ ವಿಶೇಷ ಅಂಕಣ.. ಓದಿ ಶೇರ್ ಮಾಡಿ ಇತರರಿಗೂ ಉಪಯೋಗವಾದೀತು..

ಮೇಷ ರಾಶಿ
ಅಶ್ವಿನಿ ನಕ್ಷತ್ರ ಭರಣಿ ನಕ್ಷತ್ರ ಹಾಗೂ ಕೃತಿಕೆ ನಕ್ಷತ್ರದ ಮೊದಲನೇ ಪಾದ ದಲ್ಲಿ ಹುಟ್ಟಿರುವವರೆಲ್ಲರೂ ಮೇಷ ರಾಶಿಗೆ ಸೇರಿದವರಾಗಿರುತ್ತಾರೆ..

ವೃಷಭ ರಾಶಿ
ಕೃತಿಕೆ ನಕ್ಷತ್ರದ 2,3,4 ನೇ ಪಾದದವರು ಹಾಗೂ ರೋಹಿಣಿ ನಕ್ಷತ್ರ ಮತ್ತು ಮೃಗಶಿರಾ ನಕ್ಷತ್ರದ 1,2 ನೇ ಪಾದದವರು ವೃಷಭ ರಾಶಿಗೆ ಸೇರಿರುತ್ತಾರೆ..

ಮಿಥುನ ರಾಶಿ
ಮೃಗಷಿರಾ ನಕ್ಷತ್ರದ 3,4 ನೇ ಪಾದ ಹಾಗೂ ಅರಿದ್ರ ನಕ್ಷತ್ರದವರು ಮತ್ತು ಪುನವ ನಕ್ಷತ್ರದ 1,2,3 ನೇ ಪಾದದವರು ಮಿಥುನ ರಾಶಿಗೆ ಸೇರಿರುತ್ತಾರೆ..

ಕಟಕ ರಾಶಿ
ಪುನರ್ವಸು 4 ನೇ ಪಾದದಲ್ಲಿ ಹುಟ್ಟಿದವರು ಹಾಗೂ ಪುಷ್ಯ ಮತ್ತು ಆಶ್ಲೇಷ ನಕ್ಷತ್ರದವರು ಕಟಕ ರಾಶಿಗೆ ಸೇರುತ್ತಾರೆ..

ಸಿಂಹ ರಾಶಿ
ಮಖ ನಕ್ಷತ್ರ, ಪುಬ್ಬ ನಕ್ಷತ್ರ ಮತ್ತು ಉತ್ತರ ನಕ್ಷತ್ರದ 1 ನೇ ಪಾದದಲ್ಲಿ ಹುಟ್ಟಿರುವವರು ಸಿಂಹ ರಾಶಿಗೆ ಸೇರಿರುತ್ತಾರೆ..

ಕನ್ಯಾ ರಾಶಿ
ಉತ್ತರ ನಕ್ಷತ್ರದ 2,3,4 ನೇ ಪಾದ ಹಾಗೂ ಹಸ್ತ ನಕ್ಷತ್ರದವರು ಮತ್ತು ಚಿತ್ತಾ ನಕ್ಷತ್ರದ 1,2 ನೇ ಪಾದದಲ್ಲಿ ಹುಟ್ಟಿದವರು ಕನ್ಯಾ ರಾಶಿಗೆ ಸೇರಿದವರಾಗಿರುತ್ತಾರೆ…

ತುಲಾ ರಾಶಿ
ಚಿತ್ತಾ ನಕ್ಷತ್ರದ 3,4 ನೇ ಪಾದದವರು ಹಾಗೂ ಸ್ವಾತಿ ನಕ್ಷತ್ರದವರು ಮತ್ತು ವಿಶಾಖ ನಕ್ಷತ್ರದ 1,2,3 ನೇ ಪಾದದಲ್ಲಿ ಹುಟ್ಟಿದವರು ತುಲಾ ರಾಶಿಗೆ ಸೇರಿರುತ್ತಾರೆ..

ವೃಶ್ಚಿಕ ರಾಶಿ
ವಿಶಾಖ ನಕ್ಷತ್ರದ 4 ನೇ ಪಾದ ಹಾಗೂ ಅನುರಾಧ ನಕ್ಷತ್ರ ಮತ್ತು ಜ್ಯೇಷ್ಠ ನಕ್ಷತ್ರದಲ್ಲಿ ಹುಟ್ಟಿದವರು ವೃಶ್ಚಿಕ ರಾಶಿಗೆ ಸೇರುತ್ತಾರೆ..

ಧನಸ್ಸು ರಾಶಿ
ಮೂಲ ನಕ್ಷತ್ರ ಹಾಗೂ ಪೂರ್ವಾಷಾಡ ನಕ್ಷತ್ರ ಮತ್ತು ಉತ್ತರಾಷಾಡ ನಕ್ಷತ್ರದ 1ನೇ ಪಾದದಲ್ಲಿ ಹುಟ್ಟಿದವರು ಧನಸ್ಸು ರಾಶಿಯವರಾಗಿರುತ್ತಾರೆ..

ಮಕರ ರಾಶಿ
ಉತ್ತರಾಷಾಡ ನಕ್ಷತ್ರದ 2,3,4 ನೇ ಪಾದ ಹಾಗೂ ಶ್ರವಣ ನಕ್ಷತ್ರ ಮತ್ತು ಧನಿಷ್ಟ ನಕ್ಷತ್ರದ 1,2 ನೇ ಪಾದದವರು ಮಕರ ರಾಶಿಗೆ ಸೇರುತ್ತಾರೆ..

ಕುಂಭ ರಾಶಿ
ಧನಿಷ್ಟ ನಕ್ಷತ್ರದ 3,4 ನೇ ಪಾದದಲ್ಲಿ ಹುಟ್ಟಿದವರು ಶತಭಿಷ ನಕ್ಷತ್ರದವರು ಮತ್ತು ಪೂರ್ವಭಾದ್ರ 1,2,3 ನೇ ಪಾದದಲ್ಲಿ ಹುಟ್ಟಿದವರು ಕುಂಭ ರಾಶಿಗೆ ಸೇರುತ್ತಾರೆ..

ಮೀನ ರಾಶಿ
ಪೂರ್ವಭಾದ್ರ 4 ನೇ ಪಾದ ಹಾಗೂ ಉತ್ತರಭಾದ್ರ ಮತ್ತು ರೇವತಿ ನಕ್ಷತ್ರದವರು ಮೀನಾ ರಾಶಿಗೆ ಸೇರುತ್ತಾರೆ..

source: getbackyourlostlove.files.wordpress.com

ನಿಮಗೂ ನಿಮ್ಮ ರಾಶಿ ನಕ್ಷತ್ರ ತಿಳಿಯಿತು ಎನ್ನುವ ಭಾವನೆ ನಮ್ಮದು.. ಶೇರ್ ಮಾಡಿ ಸ್ನೇಹಿತರಿಗೂ ಉಪಯೋಗವಾಗಲಿ.