ಮತ್ತೆ ಗೊಂದಲದಲ್ಲಿ ಇವಿಎಂ ಯಂತ್ರಗಳು; 120 ದೇಶಗಳಲ್ಲಿ ಬ್ಯಾನ್ ಮಾಡಲಾದ ಯಂತ್ರ ಭಾರತದಲ್ಲೇಕೆ ಜೀವಂತವಾಗಿದೆ..

0
126

ಚುನಾವಣೆಯಲ್ಲಿ ಮತದಾನ ಮಾಡಲು ತಯಾರಿಸಿದ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಬಂದಾಗಿನಿಂದ ಹಲವು ವಾದ -ವಿವಾದಗಳು ನಡೆಯುತ್ತಾನೆ ಇದೆ. ಕೆಲವೇ ದಿನಗಳ ಹಿಂದೆ ಬಂದ ಸುದ್ದಿಯಂತೆ ಇವಿಎಂ ಹ್ಯಾಕ್ ಮಾಡಬಹುದು ಎಂದು ಲಂಡನ್​ನಲ್ಲಿ ಭಾರತ ಮೂಲದ ಸೈಬರ್ ತಜ್ಞ ಸೈಯ್ಯದ್ ಶುಜಾ ನೀಡಿದ ಹೇಳಿಕೆ ವಿರುದ್ಧ ಕೇಂದ್ರ ಚುನಾವಣಾ ಸುಳ್ಳು ಆರೋಪ ಮಾಡಿರುವ ಶುಜಾ ವಿರುದ್ಧ ಎಫ್​ಐಆರ್ ದಾಖಲಿಸಿತ್ತು. ಈಗ ಅದೇ ಗೊಂದಲ ಎದಿದ್ದು ಲೋಕಸಭಾ ಮೊದಲ ಹಂತದ ಚುನಾವಣೆಯಲ್ಲಿ ಅಂಧ್ರಪ್ರದೇಶ ಒಂದರಲ್ಲೆ ಸುಮಾರು 350ಕ್ಕೂ ಹೆಚ್ಚು ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

Also read: ರಾಜಕೀಯ ಪಕ್ಷಗಳಿಗೆ ಸುಪ್ರೀಂ ಆದೇಶ; ಮೇ 30 ರ ಒಳಗೆ ಎಲ್ಲಾ ದೇಣಿಗೆ ಹಣದ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲು ಸೂಚನೆ..

ತಾಂತ್ರಿಕ ದೋಷದಿಂದ 150 ಮತಗಟ್ಟೆಗಳಲ್ಲಿ ಮತದಾನ ಅರ್ಧಕ್ಕೆ ಸ್ತಬ್ಧವಾಗಿದೆ. ಪರಿಣಾಮ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಮತಗಟ್ಟೆಗಳಲ್ಲಿ ಮರುಮತದಾನ ನಡೆಸುವಂತೆ ಚುನಾವಣಾ ಆಯೋಗವವನ್ನು ಆಗ್ರಹಿಸಿದ್ದಾರೆ. ಆದರೆ, ಭಾರತದಲ್ಲಿ ಚುನಾವಣೆ ಸಂದರ್ಭದಲ್ಲಿ ಇವಿಎಂ ಯಂತ್ರಗಳು ಗೊಂದಲಕ್ಕೆ ಒಳಗಾಗುವುದು ಇದೇ ಮೊದಲ ಸಾರಿ ಅಲ್ಲ. ಅಷ್ಟೇ ಅಲ್ಲದೆ. ಈ ಯಂತ್ರಗಳನ್ನು ಹ್ಯಾಕ್ ಮಾಡಬಹುದು ಎನ್ನುವ ಗಂಭೀರ ಆರೋಪಗಳು ಆಗಿಂದಾಗ್ಗೆ ಕೇಳಿಬರುತ್ತಲೇ ಇದೆ. ಈ ಎಲ್ಲ ವಿಷಯದಿಂದ ವಿಶ್ವದ ಸುಮಾರು 120 ರಾಷ್ಟ್ರಗಳು ಈ ಯಂತ್ರವನ್ನು ಬ್ಯಾನ್ ಮಾಡಿದೆ. ಆದರೂ, ಭಾರತದಲ್ಲಿ ಈ ಯಂತ್ರಗಳನ್ನು ಬಳಸುತ್ತಿರಲು ಕಾರಣವೇನು ಎನ್ನುವ ಪ್ರಶ್ನೆಗಳು ಹುಟ್ಟುತ್ತಿವೆ.

120 ರಾಷ್ಟ್ರಗಳಲ್ಲಿ ಇವಿಎಂ ಬ್ಯಾನ್?

Also read: ಹೈವೋಲ್ಟೇಜ್ ಕಣವಾಗಿರುವ ಮಂಡ್ಯಕ್ಕೆ ನಾಳೆ ರಾಹುಲ್ ಗಾಂಧಿ; ಇದು ನಿಖಿಲ್-ಗೆ ಸಾಹಾಯವಾಗುತ್ತಾ??

120 ದೇಶಗಳಲ್ಲಿ ಮತಚಲಾವಣೆ ಮೂಲಕ ತಮ್ಮ ಪ್ರಭುತ್ವವನ್ನು ಆಯ್ಕೆ ಮಾಡುವ 120 ರಾಷ್ಟ್ರಗಳಲ್ಲಿ ಇಂದು ಅಧೀಕೃತವಾಗಿ ಇವಿಎಂ ಯಂತ್ರವನ್ನು ಬ್ಯಾನ್ ಮಾಡಲಾಗಿದೆ. ಪಾರದರ್ಶಕತೆ ಕೊರತೆ ಕಾರಣಕ್ಕೆ ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಇವಿಎಂ ಯಂತ್ರವನ್ನು ಬ್ಯಾನ್ ಮಾಡಿದ ದೇಶ ನೆದರ್​ಲ್ಯಾಂಡ್. ಈ ಯಂತ್ರಗಳನ್ನು ಬ್ಯಾನ್ ಮಾಡುವ ಮುಂಚೆ ಐರ್​ಲ್ಯಾಂಡ್ ಸುಮಾರು 51 ಮಿಲಿಯನ್ ಪೌಂಡ್ ವೆಚ್ಚ ಮಾಡಿ ಸಂಶೋಧನೆ ನಡೆಸಿತ್ತು. ಈ ಸಂಶೋಧನೆಯ ಆಧಾರದಲ್ಲಿ ಐರ್​ಲ್ಯಾಂಡ್ ಸಹ ತನ್ನ ದೇಶದಲ್ಲಿ ಇವಿಎಂ ಯಂತ್ರವನ್ನು ಬ್ಯಾನ್ ಮಾಡಿದೆ. ಅದರಂತೆ ಈ ಯಂತ್ರಗಳು ಸಂವಿಧಾನಕ್ಕೆ ವಿರುದ್ಧವಾದದ್ದು ಎಂಬ ಕಾರಣಕ್ಕೆ ಜರ್ಮನಿ, ವೆನಿಜುವೆಲಾ, ಉಕ್ರೇನ್, ಇಂಗ್ಲೆಂಡ್, ಪ್ರಾನ್ಸ್ ಹಾಗೂ ಅಮೇರಿಕಾ ದಂತಹ ತಾಂತ್ರಿಕ ದಿಗ್ಗಜ ದೇಶಗಳು ಸೇರಿದಂತೆ ವಿಶ್ವದ ಒಟ್ಟು 120 ದೇಶಗಳು ಈ ಯಂತ್ರಗಳು ನಂಬಿಕಾರ್ಹವಲ್ಲ ಎಂಬ ಕಾರಣಕ್ಕೆ ಮತ್ತೆ ಬ್ಯಾಲೆಟ್​ ಪೇಪರ್​ ಚುನಾವಣೆ​ಗೆ ನಡೆಸುತ್ತಿವೆ.

ಇವಿಎಂ ಇತಿಹಾಸ?

Also read: ಮೋದಿ ವಿರುದ್ದ ಮಾತನಾಡಲು ಹೋಗಿ ಪಾಕಿಸ್ತಾನವನ್ನು ಹಾಡಿ ಹೊಗಳಿದ ಕೈ ಶಾಸಕ; ಆಡಿಯೋ ಬಗ್ಗೆ ಜಾಲತಾಣದಲ್ಲಿ ಬಾರಿ ಚರ್ಚೆ..

ಭಾರತದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಕೇಂದ್ರಕ್ಕೆ ತಂದವರು ಎಂ.ಬಿ. ಹನೀಫ ಎಂಬವರು. ‘ಎಲೆಕ್ಟ್ರಾನಿಕಲಿ ಆಪರೇಟೆಡ್ ವೋಟ್​​ ಕೌಂಟಿಂಗ್ ಮಷೀನ್’ ಎಂದು ಕರೆಯಲಾದ ಈ ಉಪಕರಣವನ್ನು ಹನೀಫ 1980ರಲ್ಲಿ ಮೊದಲ ಬಾರಿಗೆ ಸರಕಾರಿ ಪ್ರದರ್ಶನವೊಂದರಲ್ಲಿ ಪ್ರದರ್ಶಿಸಿದ್ದರು. ನಂತರ ಚುನಾವಣಾ ಆಯೋಗ 1982ರಲ್ಲಿ ಕೇರಳದ ಎರ್ನಾಕುಲಂ ಜಿಲ್ಲೆಯ ‘ಪಾರೂರ್’ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕೆಲವೇ ಮತಗಟ್ಟೆಗಳಲ್ಲಿ ಮೊದಲ ಬಾರಿಗೆ ಈ ಯಂತ್ರವನ್ನು ಪರಿಚಯಿಸಿತ್ತು. ನಂತರ 1999ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೆಲ ಕ್ಷೇತ್ರಗಳಲ್ಲಿ ಇವಿಎಂ ಯಂತ್ರಗಳನ್ನು ಬಳಸಲಾಗಿತ್ತು. ನಂತರ 2004ರ ಲೋಕಸಭಾ ಚುನಾವಣೆಯಲ್ಲಿ ಭಾರತದಾದ್ಯಂತ ಎಲ್ಲಾ ಕ್ಷೇತ್ರಗಳಲ್ಲೂ ಇವಿಎಂ ಬಳಕೆಗೆ ಬಂದಿತು.

2014 ರಿಂದ ಕೇಳಿಬರುತ್ತಿವ ದೂರುಗಳು

Also read: ಒಂದು ನಾಯಿಗೆ 5 ಸಾವಿರಬೇಕು; 500 ರೂ. ಗೆ ಮತಹಾಕಬೇಡಿ ಹಾಕಿದರೆ ಪ್ರಾಣಿಗಳಿಗಿಂತ ಕೀಳಾಗುತ್ತೇವೆ; ಮಂಡ್ಯದ ಮತದಾರರಿಗೆ ನಟ ದರ್ಶನ್ ವಿಶೇಷ ಮನವಿ..

2014ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಮಾಡಿದ್ದು ನರೇಂದ್ರ ಮೋದಿ ಗೆಲುವಿಗೆ ಕಾರಣವಾಯಿತು ಎನ್ನುವ ಪ್ರತಿಪಕ್ಷಗಳ ದೂರಿನಿಂದ 2017ರಲ್ಲಿ ಉತ್ತರಪ್ರದೇಶ ಹಾಗೂ ಗುಜರಾತಿನ ವಿಧಾನಸಭೆ ಚುನಾವಣೆಯವರೆಗೆ ಎಲ್ಲಾ ಸಂದರ್ಭದಲ್ಲೂ ಇವಿಎಂ ಹ್ಯಾಕಿಂಗ್​ ಸದ್ದು ಕೇಳಿಬರುತ್ತಲೇ ಇದೆ. ಇತ್ತೀಚೆಗೆ ನಡೆದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಅನುಮಾನಗಳು ಮೂಡಿವೆ. ಇದೇ ಕಾರಣಕ್ಕೆ ದೇಶದ ಪ್ರಮುಖ ನಾಯಕರಾದ ಮಾಯಾವತಿ, ಅಖಿಲೇಶ್ ಯಾದವ್, ಅರವಿಂದ ಕೇಜ್ರಿವಾಲ್ ಹಾಗೂ ಬಿಜೆಪಿ ಪಕ್ಷದ ಆದ ಸುಬ್ರಮಣಿಯನ್ ಸ್ವಾಮಿ ಇವಿಎಂ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಈ ಯಂತ್ರದ ತಂತ್ರಜ್ಞಾನ ಅತ್ಯಂತ ಸರಳವಾಗಿದ್ದು ಯಾರು ಬೇಕಾದರೂ ಹ್ಯಾಕ್ ಮಾಡಬಹುದು ಎಂದು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ನಡುವೆ ಚುನಾವಣಾ ಸಂದರ್ಭದ ಮಧ್ಯದಲ್ಲೇ ಮತಯಂತ್ರಗಳು ಆಗಾಗ್ಗೆ ಕೈಕೊಡುತ್ತಿರುವುದು ಭಾರತೀಯ ಚುನಾವಣಾ ಆಯೋಗಕ್ಕೆ ಮತ್ತೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.