ಸಮಾಜವನ್ನು ಬದಲಾಯಿಸಲು ರಾಜಕೀಯ ಪಕ್ಷ ಸ್ಥಾಪನೆ ಮಾಡಿದ ಅನುಪಮ ಶೆಣೈ ಪಕ್ಷ ಸೇರಲು 2 ಲಕ್ಷ ರೂಪಾಯಿ ಕೊಡಬೇಕಂತೆ!!

0
570

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಡಕ್ ಅಧಿಕಾರಿ ಎಂದೇ ಹೆಸರು ಮಾಡಿದ್ದ ಮಾಜಿ ಡಿವೈಎಸ್​ಪಿ ಅನುಪಮಾ ಶೆಣೈ ರಾಜಕೀಯ ಪ್ರವೇಶಿಸಿ ಹೊಸ ಪಕ್ಷ ಸ್ಥಾಪಿಸಿರುವುದು ನಿಮಗೆ ಗೊತ್ತಿರುವ ವಿಚಾರ. ಈಗ ಅವರ, ಭಾರತೀಯ ಜನಶಕ್ತಿ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗುವವರು 2 ಲಕ್ಷ ಸಂಗ್ರಹಿಸಿ ಪಕ್ಷಕ್ಕೆ ದೇಣಿಗೆಯಾಗಿ ಕೊಡಬೇಕು ಎಂದು ಹೇಳಿರುವುದು ಕುತೂಹಲ ಮೂಡಿಸಿದೆ.

ಹೌದು, ಭಾರತೀಯ ಜನಶಕ್ತಿ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಲು ಇಚ್ಚಿಸುವವರು ಪಕ್ಷದ ನಿಧಿ ಎಂದು 2 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಬೇಕಂತೆ, ಹೀಗೆಂದು ಸ್ವತಃ ಅನುಪಮಾ ಶೆಣೈ ಅವರೇ ಹೇಳಿದ್ದಾರೆ. ಇದೇನಿದು, ಇವರಿಗೂ ಬೇರೆ ರಾಜಕಾರಣಿಗಳಿಗೂ ಏನು ವ್ಯತ್ಯಾಸವಿದೆ, ಎಲ್ಲರು ಅದನ್ನೇ ಮಾಡುತ್ತಿದ್ದಾರೆ ಅಂತೀರ, ಅದಕ್ಕೂ ಒಂದು ಕಾರಣವಿದೆ.

ರಾಜಕೀಯ ಪಕ್ಷಗಳು ಚುನಾವಣೆಗೆ ಸ್ಪರ್ದಿಸಲು ಇಚ್ಚಿಸುವ ಅಭ್ಯರ್ಥಿಗಳಿಂದ ಪಕ್ಷದ ದೇಣಿಗೆ ಎಂದು ಹಣ ಕೀಳುವುದು ಸಹಜ, ಅದನ್ನು ಪಕ್ಷದ ಪ್ರಚಾರ ಮತ್ತು ಇನ್ನಿತರ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ಆದರೆ, ಅನುಪಮಾ ಶೆಣೈ ಅವರು, ತಮ್ಮ ಪಕ್ಷದಿಂದ ಶಾಸಕರಾದ ನಂತರ ಅಭ್ಯರ್ಥಿಗಳು, ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಅನುದಾನ ಬಿಡುಗಡೆ ತಡವಾದರೆ, ದೇಣಿಗೆ ಎತ್ತಿಯಾದರೂ ಜನರ ಬೇಡಿಕೆ ಈಡೇರಿಸಲು ಸಮರ್ಥರೇ ಎಂದು ಪರೀಕ್ಷಿಸಲು ಈ ನಿರ್ಧಾರ ಕೈಗೊಂಡಿದ್ದರಂತೆ.

ಸುದ್ದಿ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, ಖಾಕಿಗಳ ಕೆಲಸದಲ್ಲಿ ಖಾದಿಯ ಹಸ್ತಕ್ಷೇಪ ಹೆಚ್ಚಳವಾಗಿದೆ. ನನಗೂ ಬೆದರಿಕೆ ಎದುರಾಗಿತ್ತು. ಆಗ ಎದೆಗುಂದಿದ್ದರೆ ಕಲ್ಲಪ್ಪ ಹಂಡಿಭಾಗ, ಎಂ.ಕೆ. ಗಣಪತಿ ರೀತಿ ನಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಆದರೆ, ಇವರನ್ನು ಮಟ್ಟ ಹಾಕಬೇಕು ಎಂದು ರಾಜಕೀಯದತ್ತ ಹೆಜ್ಜೆ ಇಟ್ಟಿದ್ದೇನೆ ಎಂದಿದ್ದಾರೆ.

ಇದೆ ವೇಳೆ, IPS, KPS ಸೇವೆಗೆ ಸೇರುವಾಗ ದೇಶದ ಸಂವಿಧಾನಕ್ಕೆ ನಿಷ್ಠರಾಗಿರುವುದಾಗಿ ಪ್ರಮಾಣ ಮಾಡುತ್ತಾರೆ. ಅದರ ಬದಲಾಗಿ, ಅಧಿಕಾರದಲ್ಲಿರುವ ಪಕ್ಷ, ರಾಜಕಾರಣಿಗಳಿಗೆ ನಿಷ್ಠರಾಗಿರುವುದಾಗಿ ಪ್ರಮಾಣ ವಚನ ಸ್ವೀಕರಿಸಲಿ ಎನ್ನವ ಮೂಲಕ ಸದ್ಯದ ರಾಜ್ಯ ರಾಜಕೀಯದ ಪರಿಸ್ಥಿಯನ್ನು ಅಣುಕಿಸಿದ್ದಾರೆ.