ಇದು ಪಿಕ್ನಿಕ್ ಅಲ್ಲ ಪರೀಕ್ಷೆ ಅಂದ್ರೆ ನೀವು ನಂಬಲೇಬೇಕು !

0
594

ಈ ಫೋಟೋ ನೋಡಿದರೆ ಯಾರೋ ಪಿಕ್ನಿಕ್ ಗೆ ಬಂದಿರಬೇಕೆಂದು ಭಾಸವಾಗುತ್ತದೆ. ಶಾಕಿಂಗ್ ಸಂಗತಿಯೆಂದರೆ ಇವರೆಲ್ಲ ಕಾಲೇಜು ವಿದ್ಯಾರ್ಥಿಗಳು. ಅಲ್ಲದೇ ಇವರೆಲ್ಲ ಗುಂಪಾಗಿ ಕುಳಿತು ಪರೀಕ್ಷೆ ಬರೆಯುತ್ತಿದ್ದಾರೆಂದರೆ ನೀವು ನಂಬಲೇಬೇಕು. ಇಂತದೊಂದು ದೃಶ್ಯ ಕಂಡು ಬಂದಿರುವುದು ಜಾರ್ಖಂಡ್ ನಲ್ಲಿ.

ಬಿಹಾರದ 12 ನೇ ತರಗತಿ ಪರೀಕ್ಷೆಯಲ್ಲಿ ನಡೆದ ಗೋಲ್ಮಾಲ್ ಮಾಧ್ಯಮಗಳಲ್ಲಿ ಬಹಿರಂಗಗೊಂಡ ಬಳಿಕ ಅಕ್ರಮ ಎಸಗಿದ ವಿದ್ಯಾರ್ಥಿಗಳೂ ಸೇರಿದಂತೆ ಇದಕ್ಕೆ ಸಹಕರಿಸಿದವರು ಈಗ ಜೈಲು ಪಾಲಾಗಿದ್ದಾರೆ. ಈಗ ಜಾರ್ಖಂಡ್ ನ ಧನಬಾದ್ ನ ಆರ್.ಎಸ್. ಮೊರ್ ಕಾಲೇಜು ವಿದ್ಯಾರ್ಥಿಗಳು ಈ ರೀತಿ ಪರೀಕ್ಷೆ ಬರೆಯುತ್ತಿರುವ ಫೋಟೋ ಈಗ ಮಾಧ್ಯಮಗಳಲ್ಲಿ ಬಹಿರಂಗವಾಗಿದೆ.

ಸುಮಾರು 1000 ಮಂದಿ ವಿದ್ಯಾರ್ಥಿಗಳು ತಲಾ ಮೂರ್ನಾಲ್ಕು ವಿದ್ಯಾರ್ಥಿಗಳಂತೆ ಒಟ್ಟಿಗೆ ಕುಳಿತು ಪರೀಕ್ಷೆ ಬರೆದಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಈ ಸಂದರ್ಭದಲ್ಲಿ ಪರೀಕ್ಷಾ ಮೇಲ್ವಿಚಾರಕರೇ ಹಾಜರಿರಲಿಲ್ಲವೆನ್ನಲಾಗಿದೆ. ಮಾಧ್ಯಮಗಳಲ್ಲಿ ಫೋಟೋ ಪ್ರಕಟಗೊಂಡ ನಂತರ ಅದಕ್ಕೆ ಸ್ಪಷ್ಟೀಕರಣ ಕೊಟ್ಟಿರುವ ಕಾಲೇಜು ಆಡಳಿತ ಮಂಡಳಿ, ಕಾಲೇಜಿನಲ್ಲಿ ಕೊಠಡಿಯ ಕೊರತೆಯಿರುವ ಕಾರಣ ವಿದ್ಯಾರ್ಥಿಗಳಿಂದ ಬಯಲಿನಲ್ಲಿ ಪರೀಕ್ಷೆ ಬರೆಸಲಾಗಿದೆ ಎಂದಿದ್ದಾರೆ.

Source: dailyhunt