ಮೈಸೂರಿನ ಪುಟ್ಟ ರಾಜಕುಮಾರನಿಗೆ ವಿಶೇಷವಾದ ಹೆಸರನ್ನಿಟ್ಟರು ರಾಜಮಾತೆ.. ಇಲ್ಲಿದೆ ನೋಡಿ Exclusive Photos

0
631

Kannada News | Karnataka News

ಮೈಸೂರಿನ ಪುಟ್ಟ ರಾಜಕುಮಾರನಿಗೆ ರಾಜಮಾತೆಯಿಂದ ವಿಶೇಷ ಹೆಸರಿನಲ್ಲಿ ನಾಮಕರಣವಾಗಿದೆ.. ಹೌದು ರಾಜಮನೆತನಕ್ಕೆ ವಾರಸ್ದಾರನ ಆಗಮನದ ಸಂತೋಷ ನಿನ್ನೆ ನಡೆದ ನಾಮಕರಣ ಸಂಭ್ರಮದಿಂದ ಇನ್ನೂ ಹೆಚ್ಚಾಗಿದೆ ಎನ್ನಬಹುದು….

ಬೆಂಗಳೂರಿನ ಅರಮನೆಯಲ್ಲಿ ಸರಳವಾಗಿ ಶಾಸ್ತ್ರೋಕ್ತವಾಗಿ ನಡೆದ ನಾಮಕರಣ ಸಂಭ್ರಮದಲ್ಲಿ ಆಪ್ತರಿಗಷ್ಟೇ ಅಹ್ವಾನವಿತ್ತು.. ಮಾಧ್ಯಮದವರಿಗು ಕೂಡ ಪ್ರವೇಶವಿರಲಿಲ್ಲ..

ರಾಜಮಾತೆಯಿಂದ ವಾರಸ್ದಾರನಿಗೆ ವಿಶೇಷವಾದ ಹೆಸರು..

ಹಲವಾರು ದಿನಗಳಿಂದ ಜನರಿಗಿದ್ದ ಕುತೂಹಲಕ್ಕೆ ನಿನ್ನೆ ತೆರೆಬಿದ್ದಿದೆ.. ರಾಜ ಮಾತೆ ಪ್ರಮೋದದೇವಿ ರವರಿಂದ ಪುಟ್ಟ ರಾಜಕುಮಾರನಿಗೆ “ಆಧ್ಯವೀರ್ ನರಸಿಂಹರಾಜ ಒಡೆಯರ್” ಎಂಬ ವಿಶೇಷವಾದ ಹೆಸರಿನಿಂದ ನಾಮಕರಣವಾಗಿದೆ..

ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ರವರ ನಂತರ ರಾಜಮನೆತನದಲ್ಲಿ ಹುಟ್ಟಿದ ಪುಟ್ಟ ಕಂದನ ನಾಮಕರಣಕ್ಕೆ ಆಪ್ತ ಸಂಬಧಿಕರು ಆಗಮಿಸಿ ಹಾರೈಸಿದ್ದಾರೆ..

ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ರವರ ಜನ್ಮದಿನದಂದು ಮೈಸೂರಿನ ಅರಮನೆಯಲ್ಲಿ ನಡೆಯಬೇಕಿದ್ದ ನಾಮಕರಣದ ಕಾರ್ಯಕ್ರಮ ಕಾರಣಾಂತರಗಳಿಂದ ನಿನ್ನೆ ಬೆಂಗಳೂರಿನ ಅರಮನೆಯಲ್ಲಿ ಸರಳವಾಗಿ ನಡೆಯಿತು..

ಏನೇ ಆಗಲಿ “ಆಧ್ಯವೀರ್ ನರಸಿಂಹರಾಜ ಒಡೆಯರ್” ರವರಿಗೆ ನಿಮ್ಮ ಕಡೆಯಿಂದಲೂ ಶುಭಾಶಯವನ್ನು ತಿಳಿಸಿ..ನಾಡಿಗೆ ಅಪಾರ ಕೊಡುಗೆ ನೀಡಿದ ಕುಟುಂಬದ ಕುಡಿ ಕೀರ್ತಿವಂತನಾಗಿ ಬಾಳಲಿ..

Also Read: ಮೆದುಳಿನ ಅಪ್ರತಿಮ ಸಾಮರ್ಥ್ಯದ ಹತ್ತು ವಿಸ್ಮಯಕಾರಿ ವಿಷಯಗಳ ಬಗ್ಗೆ ತಿಳಿಯೋಣ :