ಸ್ತ್ರೀಯರಲ್ಲಿ ವ್ಯಾಯಮದಿಂದ ಸಮಸ್ಯೆಗಳ ಪರಿಹಾರ

0
600

ವಯಸ್ಕರ ಸ್ತ್ರೀಯರಿಗೆ ಎದುರಾಗುವ ಸಮಸ್ಯೆಗಳಲ್ಲಿ ಬಹಳಷ್ಟನ್ನು ಮುಂಜಾಗಾರೂಕತೆಯಿಂದಲೇ ಪರಿಹರಿಸಬಹುದು. ಹಾರ್ಮೋನಿನ ಚಿಕಿತ್ಸೆಗೆ ಬದಲಾಗಿ ವಹಿಸಬಹುದಾದ ಜಾಗ್ರತೆಯಲ್ಲಿ ಉತ್ತಮ ಫಲಿತಾಂಶ ಕಂಡುಬರುತ್ತದೆ. ಅಂತಹುಗಳಲ್ಲಿ ವ್ಯಾಯಮ ಹಾಗೂ ಪೋಷಕಾಂಶಗಳನ್ನು ಕುರಿತು ವಿಶೇಷವಾಗಿ ಹೇಳಬೇಕು.

ಬೆಳಗ್ಗೆ ಐದು ಗಂಟೆಗೆ ಮತ್ತು ಎದ್ದು ಕೆಲಸವನ್ನೆಲ್ಲ ಮಾಡುತ್ತಿರುತ್ತೇನೆ. ಆಫೀಸ್’ನಲ್ಲಿಯೂ ಅಷ್ಟೇ ಚುರುಕಾಗಿರುತ್ತೇನೆ. ಆದರೆ ತೂಕ ಮಾತ್ರ ಕಡಿಮೆಯಾಗಲಿಲ್ಲವೆಂದು ಕೆಲವರು ಹೇಳುತ್ತಿರುತ್ತಾರೆ. ಈ ರೀತಿ ಹೇಳುವವರು ಕೆಲಸವು ವ್ಯಾಯಮಕ್ಕೆ ಸಮನಲ್ಲವೆಂದು ಮೊದಲು ತಿಳಿಯಬೇಕು.

ಅಧ್ಯಯನಗಳ ಪ್ರಕಾರ. ಕ್ರಮಬದ್ಧವಾಗಿ, ನಿಯಮಿತವಾದಿ ವ್ಯಾಯಾಮ ಮಾಡುವ ಮಹಿಳೆಯರ ಆಯಸ್ಸು ಹೆಚ್ಚುವುದೆಂದು ತಿಳಿದುಬಂದಿದೆ. ಕನಿಷ್ಠ ಪಕ್ಷ ವಾರಕ್ಕೆ ಒಂದು ಸಲ ಮಾಡಿದರೆ ಸಾಕು. ವ್ಯಾಯಾಮ ಮಾಡದೇ ಇರುವವರಿಗಿಂತ ಇದು ಎಷ್ಟೋ ವಾಸಿ.

ನಡಿಗೆ, ಟ್ರೆಡ್ ಮಿಲ್, ಈಜು, ಕನಿಷ್ಠ ಪಕ್ಷ ಸೈಕಲ್ ತುಳಿಯುವುದು ಹೀಗೆ  ಯಾವುದಾದರೂ ಸರಿ ಆ ವ್ಯಾಯಾಮ ಮಾಡಬಹುದು. ಇದರಿಂದ ಹೃದಯ, ರಕ್ತನಾಳಕ್ಕೆ ಬಹಳಷ್ಟು ಪ್ರಯೋಜನಗಳುಂಟಾಗುತ್ತವೆ. ತೂಕವು ತಗ್ಗುತ್ತದೆ.

ಪ್ರತಿದಿನವೂ ಕನಿಷ್ಠ ಅರ್ಧಗಂಟೆಯ ಸಮಯ ಕಡ್ಡಾಯವಾಗಿ ವ್ಯಾಯಾಮಕ್ಕೆ ಮೀಸಲಾಗಿಡಬೇಕು. ಪರಿಣಾಮವಾಗಿ ಅನೇಕ ಬಗೆಯ ಅನಾರೋಗ್ಯವನ್ನು ತಡೆಗಟ್ಟಹುದು. ಅಲ್ಲದೆ, ಉತ್ತಮ ಮಾನಸಿಕ ಆರೋಗ್ಯವೂ ನಿಮ್ಮದಾಗುತ್ತದೆ. ಒಂದು ಸಲ ಕಷ್ಟ ಪಟ್ಟು ಅಭ್ಯಾಸ ಮಾಡಿಕೊಂಡರೆ ಅನಂತರ ಮಾಡದೆ ಇರಲು ಕಷ್ಟವಾಗುತ್ತದೆ.

*ಕ್ಯಾಲ್ಸಿಯಂ ಎಲುಬುಗಳನ್ನು ದೃಢವಾಗಿ, ಗಟ್ಟಿಯಾಗಿಸುತ್ತದೆ.

*ಆಸ್ಟ್ರಿಯೊ ಫೋರೋಸಿಸ್, ಮೂಳೆಗಳ ಫ್ರಾಕ್ಷರ್ ಉಂಟಾಗದಂತೆ ಕಾಪಾಡುವುದರಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ದಿನಕ್ಕೆ 1000-1500 ಮಿಲಿ ಗ್ರಾಂಗಳಷ್ಟು ತಪ್ಪದೆ ಇದನ್ನು ತೆಗೆದುಕೊಳ್ಳಬೇಕು.

*ವಿಟಮಿನ್ ಡಿ ಸಹ ಎಲುಬುಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಬಿಸಿಲಿನಲ್ಲಿ ಕುಳಿತುಕೊಳ್ಳುವುದಷ್ಟೇ ಅಲ್ಲದೆ ಆಹಾರ ರೂಪದಲ್ಲಿಯೂ ಇದನ್ನು ತೆಗೆದುಗೊಳ್ಳಬಹುದು.

*ಹೃದಯದ ಕಾಯಿಲೆಗಳು ಬರದಿರಬೇಕಾದರೆ ವಿಟಮಿನ್ ಇ ಅನ್ನು ತಪ್ಪದೆ ಬಳಸಬೇಕು.

*ಬಿ ವಿಟಮಿನ್ ಗ್ರೂಪಿನಲ್ಲಿ ಬಿ6, ಬಿ18 ಫಾಲಿಕ್ ಆ್ಯಸಿಡ್ ಗಳಂತಹವುಗಳು ಆರೋಗ್ಯಕ್ಕೆ ರಕ್ಷಣೆಯನ್ನು ನೀಡುವುದರ ಜೊತೆಗೆ ಎಲುಬುಗಳಿಗೆ ಆರೋಗ್ಯವನ್ನು ಒದಗಿಸುತ್ತವೆ.

*ಮೆಗ್ನೀಷಿಯಂ ಸಿ. ಕೆ ವಿಟಮಿನ್ ಗಳು, ಬೋರಾನ್, ಮ್ಯಾಂಗನಿಸ್ ಗಳು ದೇಹದ ಆರೋಗ್ಯಕ್ಕೆ ಬಹಳಷ್ಟು ಅಗತ್ಯವಿದೆ.