2019 ರ ಲೋಕಸಭಾ ಚುನಾವಣಾ ಮತದಾನೋತ್ತರ ಸಮೀಕ್ಷೆ ಪ್ರಕಟ; ಯಾವ ಸಮೀಕ್ಷೆ ಏನು ಹೇಳುತ್ತೆ? ಈ ಸಲ ಯಾರಿಗೆ ಸಿಗಲಿದೆ ಅಧಿಕಾರ? ಇಲ್ಲಿದೆ ನೋಡಿ ವಿವರ..

0
374

ದೇಶದಲ್ಲಿ ಲೋಕಸಭಾ ಚುನಾವಣೆಯ ಮತದಾನ ಸಂಪೂರ್ಣವಾಗಿ ಕೊನೆಗೊಂಡಿದ್ದು, ಈ ಕುರಿತು ಹಲವು ಸಮೀಕ್ಷೆಗಳು ನಡೆದು ಯಾವ ಪಕ್ಷ ಈ ಬಾರಿ ಜಯ ಗಳಿಸುತ್ತೆ, ಯಾರು ಪ್ರಧಾನಿ ಹುದ್ದೆಯನ್ನು ಅಲಂಕರಿಸಲ್ಲಿದ್ದಾರೆ. ಎನ್ನುವ ಬಗ್ಗೆ ಹಲವು ವಿವಿಧ ಸಂಸ್ಥೆಗಳು, ಏಜೆನ್ಸಿಗಳು ನಡೆಸಿದ ಮತದಾನೋತ್ತರ ಸಮೀಕ್ಷೆ ವರದಿಗಳನ್ನು ಹೊರಡಿಸಿದೆ. ಏಳು ಹಂತಗಳ ಚುನಾವಣೆಯಲ್ಲಿ ಒಂದು ಕ್ಷೇತ್ರ ಹೊರತುಪಡಿಸಿ ಉಳಿದ 542 ಕ್ಷೇತ್ರಗಳಿಗೆ ಮತದಾನ ಮುಕ್ತಾಯವಾಗಿದೆ. ಈ ಸಮೀಕ್ಷೆಗಳೆಲ್ಲವೂ ಬಹುತೇಕ ಎನ್​ಡಿಎ ಮೈತ್ರಿಕೂಟ ಬಹುಮತ ಪಡೆಯಬಹುದೆಂದು ಅಂದಾಜಿಸಿವೆ. ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿದ IPSOS ಸಂಸ್ಥೆ ತಿಳಿಸಿದ ಪ್ರಕಾರ ಎನ್​ಡಿಎ 336 ಸ್ಥಾನ ಗಳಿಸುವ ಸಾಧ್ಯತೆ ಇದೆ.

Also read: ಚುನಾವಣೆಯ ನಂತರ ಮಂಡ್ಯದಲ್ಲಿ ನಡೆದ ಸಮೀಕ್ಷೆಯ ವರದಿ; ಸುಮಾರು 80 ಸಾವಿರ ಅಂತರದಲ್ಲಿ ಸುಲಮತಾ ಗೆಲುವು ಸಾಧ್ಯತೆ, ಈ ಸಮೀಕ್ಷೆಯೇ ನಿಜವಾಗುತ್ತಾ??

ಕಳೆದ ಬಾರಿಯ ಚುನಾವಣೆಯಲ್ಲಿ ನಿಖರವಾಗಿ ಅಂದಾಜು ಮಾಡಿದ್ದ ಚಾಣಕ್ಯ ಸಂಸ್ಥೆ ಈ ಬಾರಿ ಎನ್​ಡಿಎಗೆ 350 ಸ್ಥಾನ ನೀಡಿದೆ. ಇದು ಎಲ್ಲಾ ಸಮೀಕ್ಷೆಗಳಲ್ಲಿ ಎನ್​ಡಿಎಗೆ ಸಿಕ್ಕಿರುವ ಅತಿ ಹೆಚ್ಚು ಸ್ಥಾನವಾಗಿದೆ. ಎಕ್ಸಿಸ್ ಸಮೀಕ್ಷೆಯಲ್ಲೂ ಎನ್​ಡಿಎಗೆ 350 ಸೀಟು ಸಿಗುವ ಅಂದಾಜು ವ್ಯಕ್ತವಾಗಿದೆ. ಇನ್ನು, ನ್ಯೂಸ್ಎಕ್ಸ್ ಮತ್ತು ನೇತಾ ಸಂಸ್ಥೆಗಳು ನಡೆಸಿರುವ ಸಮೀಕ್ಷೆಯಲ್ಲಿ ಎನ್​ಡಿಎಗೆ 242 ಸೀಟು ಸಿಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಸಮೀಕ್ಷೆಯೇ ಸತ್ಯವಲ್ಲ. ಎಲ್ಲಾ ಕಾಲಕ್ಕೂ ಸಮೀಕ್ಷೆಗಳು ನಿಜವಾಗಿಲ್ಲ. ಸಮೀಕ್ಷಾ ವರದಿಗಳು ಫಲಿತಾಂಶಕ್ಕೆ ಸಮೀಪ ಇರುವುದರಿಂದ ಸಾಮಾನ್ಯವಾಗಿ ಕುತೂಹಲ ಹೆಚ್ಚಾಗಿರುತ್ತದೆ.

Also read: ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಮುಂದಿದ್ದಾರೆ; ಚುನಾವಣೆ ಮುಗಿಯುವ ಒಳಗೆ ರಾಹುಲ್ ಗಾಂಧಿ ಮುಂದೆ ಬರಲು ಸಾಧ್ಯವಾ?

ಅದರಂತೆ ಕೇಂದ್ರದಲ್ಲಿ ಎನ್.ಡಿ.ಎ. ಮೈತ್ರಿಕೂಟ, ಇಲ್ಲವೇ ಯುಪಿಎ ಅಧಿಕಾರಕ್ಕೆ ಬರುತ್ತದೆಯೇ ಅಥವಾ ತೃತೀಯ ರಂಗ ಅಧಿಕಾರಕ್ಕೆ ಬರುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ಈಗಾಗಲೇ ಕೊನೆ ಹಂತದ ಮತದಾನ ಮುಗಿಯುತ್ತಲೇ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಲಿದ್ದು, ಮೇ 23 ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. 2014ರ ಚುನಾವಣೆಯಲ್ಲಿ ಎನ್‍ಡಿಎ 334, ಯುಪಿಎ 59, ಇತರರು 150 ಸ್ಥಾನಗಳನ್ನು ಗೆದ್ದಿದರು. ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು.

Also read: ಮತದಾನೋತ್ತರ ಸಮೀಕ್ಷೆಯಲ್ಲಿ ಅರಳಿದ ಕಮಲ; ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಾ..?

ವಿವಿಧ ಸಮೀಕ್ಷೆಗಳ ವಿವರ ಈ ಕೆಳಗಿದೆ

1. ಸಿವೋಟರ್ ಸಮೀಕ್ಷೆ ಪ್ರಕಾರ ಎನ್ ಡಿಎ 287 ಸ್ಥಾನಗಳನ್ನು ಗೆಲ್ಲಲಿದೆ, ಯುಪಿಎ 128 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು 127 ಸ್ಥಾನಗಳು ಇತರರ ಪಕ್ಷಗಳು ಗೆಲ್ಲಲಿವೆ.
2. ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಎನ್ ಡಿಎ 306 ಸ್ಥಾನಗಳಲ್ಲಿ, ಯುಪಿಎ 132 ಸ್ಥಾನಗಳಲ್ಲಿ, 104 ಸ್ಥಾನಗಳಲ್ಲಿ ಇತರರು ಗೆಲ್ಲಲಿದ್ದಾರೆ.
3. ನ್ಯೂಸ್ ನೇಶನ್ ಪ್ರಕಾರ 282-290 ಎನ್ ಡಿಎಗೆ, 118-126 ಯುಪಿಎಗೆ ಮತ್ತು 130-138 ಸ್ಥಾನಗಳು ಇತರರಿಗೆ ಲಭಿಸಲಿದೆ.
4. ಎಬಿಪಿ ಪ್ರಕಾರ 336 ಸ್ಥಾನಗಳಲ್ಲಿ ಎನ್ ಡಿಎ ಗೆಲ್ಲಲಿದ್ದು, 55 ಯುಪಿಎ ಮತ್ತು 148 ಸ್ಥಾನಗಳು ಇತರರ ಪಾಲಾಗಲಿದೆ.
5. ಇಂಡಿಯಾ ಟುಡೆ ಪ್ರಕಾರ ರಾಜ್ಯದಲ್ಲಿ ಬಿಜೆಪಿ ಕನಿಷ್ಠ 21 ಸ್ಥಾನಗಳನ್ನು ಗೆಲ್ಲಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಕೇವಲ 3ರಿಂದ 6 ಸ್ಥಾನಗಳಲ್ಲಿ ಮಾತ್ರ ಗೆಲ್ಲಲಿದೆ
6. ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ ಕೂಡ ಎನ್ ಡಿಎಗೆ ಬಹುಮತ ಎಂದು ಹೇಳಿದೆ. ಇದರ ಪ್ರಕಾರ ಎನ್ ಡಿಎ 306, ಯುಪಿಎ 132 ಮತ್ತು ಇತರರು 104 ಸ್ಥಾನಗಳಲ್ಲಿ ಜಯ ಗಳಿಸಲಿದ್ದಾರೆ.
7. ರಿಪಬ್ಲಿಕ್ ಜನ್ ಕಿ ಬಾತ್ ಪ್ರಕಾರ ಎನ್ ಡಿಎ 295-315, ಯುಪಿಎ 122-125 ಮತ್ತು ಇತರರು 125 ಸ್ಥಾನಗಳಲ್ಲಿ ಜಯ ಗಳಿಸಲಿದ್ದಾರೆ.
8. ನ್ಯೂಸ್ ನೇಶನ್ ಸಮೀಕ್ಷೆಯಲ್ಲಿ 280-290 ಸ್ಥಾನಗಳು ಎನ್ ಡಿಎ, 118-126 ಸ್ಥಾನಗಳು ಯುಪಿಎ, 130-138 ಸ್ಥಾನಗಳು ಇತರರ ಪಾಲಾಗಲಿದೆ
9. ನ್ಯೂಸ್ ಎಕ್ಸ್ –ನೇತಾ ಸಮೀಕ್ಷೆಯಲ್ಲಿ ಮಾತ್ರ ಎನ್ ಡಿಗೆ ಸ್ಥಾನಗಳು ಕಡಿಮೆಯಾಗಿವೆ. ಈ ಸಮೀಕ್ಷೆ ಪ್ರಕಾರ ಎನ್ ಡಿಎ 242 ಸ್ಥಾನಗಳನ್ನು, ಯುಪಿಎ 165 ಸ್ಥಾನಗಳನ್ನು ಮತ್ತು 136 ಸ್ಥಾನಗಳನ್ನು ಇತರರು ಗೆಲ್ಲಲಿದ್ದಾರೆ.