ಚುನಾವಣಾ ನಂತರದ ಸಮೀಕ್ಷೆ; ಮತ್ತೊಮ್ಮೆ ದೆಹಲಿ ಗದ್ದುಗೆ ಮೇಲೆ ಅರವಿಂದ ಕೇಜ್ರಿವಾಲ್ ಅವರ ಆಪ್ ದ್ವಜ, ಬಿಜೆಪಿಗೆ ಮತ್ತೆ ಮುಖಭಂಗ.?

0
88

ದೇಶದಲ್ಲಿ ಭಾರೀ ಸದ್ದು ಮಾಡಿರುವ ದೆಹಲಿ ಚುನಾವಣೆಯ ಮತದಾನ ಮುಗಿದು ಒಂದು ಹಂತಕ್ಕೆ ತಲುಪಿದರೆ, ಫಲಿತಾಂಶದ ಆತಂಕ ಎಲ್ಲ ಪಕ್ಷಗಳಲ್ಲಿದೆ, ಅದರಲ್ಲಿ ಬಿಜೆಪಿ ಪಕ್ಷ 20 ವರ್ಷಗಳ ಅಧಿಕಾರವನ್ನು ಪಡೆಯಲೇಬೇಕು ಎನ್ನುವ ಪ್ರಯತ್ನದಲ್ಲಿದರೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಜಯಗಳಿಸಲಿದೆ ಎಂದು ಎಲ್ಲ ಚುನಾವಣಾ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಇದೀಗ ಮತದಾನದ ಬಳಿಕವೂ ಇದೇ ಅಭಿಪ್ರಾಯ ಹೊರಬಿದ್ದಿದ್ದು, ಬಹುತೇಕ ಎಲ್ಲಾ ಮತದಾನೋತ್ತರ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷವೇ ಬಹುಮತದೊಂದಿಗೆ ದೆಹಲಿಯಲ್ಲಿ ಮರಳಿ ಅಧಿಕಾರದ ಗದ್ದುಗೆ ಪಡೆಯಲಿದೆ ಎಂದು ಸಮೀಕ್ಷೆಗಳು ಹೇಳುತಿವೆ.

ಹೌದು ರಾಷ್ಟ್ರರಾಜಧಾನಿಯ ಗದ್ದುಗೆಗಾಗಿನ ರಾಜಕೀಯ ಪಕ್ಷಗಳ ನಡುವಿನ ಜಟಾಪಟಿ ಒಂದು ನಿರ್ಣಾಯಕ ಹಂತವನ್ನು ತಲುಪಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ ಹಾಗೂ ಭಾರತೀಯ ಜನತಾ ಪಕ್ಷದ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದ ಇಲ್ಲಿ ಆಮ್ ಆದ್ಮಿ ಪಕ್ಷವೇ ಮರಳಿ ಅಧಿಕಾರಕ್ಕೇರುವ ವಿಶ್ವಾಸವನ್ನು ಚುನಾವಣಾ ಪೂರ್ವದ ಮತದಾನ ಸಮೀಕ್ಷೆಗಳು ನೀಡಿದ್ದವು. ಇದೀಗ ಮತದಾನದ ಬಳಿಕವೂ ಇದೇ ಅಭಿಪ್ರಾಯ ಹೊರಬಿದ್ದಿದ್ದು, ಬಹುತೇಕ ಎಲ್ಲಾ ಮತದಾನೋತ್ತರ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷವೇ ಬಹುಮತದೊಂದಿಗೆ ದೆಹಲಿಯಲ್ಲಿ ಮರಳಿ ಅಧಿಕಾರದ ಗದ್ದುಗೆ ಪಡೆಯಲಿದೆ ಹಾಗೂ ಹಾಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರೇ ಮುಖ್ಯಮಂತ್ರಿಯಾಗಿ ಪುನರಾಯ್ಕೆಗೊಳ್ಳುವ ನಿರೀಕ್ಷೆಯನ್ನೂ ವ್ಯಕ್ತಪಡಿಸಿವೆ.

ಸಮೀಕ್ಷೆಗಳು ಹೇಳೋದು ಏನು?

ಟೈಮ್ಸ್ ನೌ: ಆಪ್- 44 , ಬಿಜೆಪಿ- 26, ಕಾಂಗ್ರೆಸ್- 00, ಇತರೆ – 00
ಜನ್ ಕೀ ಬಾತ್: ಆಪ್- 48-61, ಬಿಜೆಪಿ – 09-21, ಕಾಂಗ್ರೆಸ್- 0-1, ಇತರೆ – 00-00
ನ್ಯೂಸ್ ಎಕ್ಸ್: ಆಪ್- 53-57, ಬಿಜೆಪಿ- 11-17, ಕಾಂಗ್ರೆಸ್ – 00-02, ಇತರೆ – 00-00
ಸಿಸಿರೋ: ಆಪ್ – 54, ಬಿಜೆಪಿ – 15, ಕಾಂಗ್ರೆಸ್ – 01, ಇತರೆ – 00
ನ್ಯೂಸ್ ನೇಷನ್: ಆಪ್- 55, ಬಿಜೆಪಿ- 14, ಕಾಂಗ್ರೆಸ್- 01, ಇತರೆ – 00

ಭ್ರಷ್ಟಾಚಾರ ಆಂದೋಲನದಿಂದ ಹುಟ್ಟಿದ “ಅಮ್ ಆದ್ಮಿ:

ಭ್ರಷ್ಟಾಚಾರದ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ಸಂಘಟಿಸಿದ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಹುಟ್ಟಿದ “ಅಮ್ ಆದ್ಮಿ” ಪಕ್ಷ ತಾನು ಎದುರಿಸಿದ ಮೊದಲ ಚುನಾವಣೆಯಲ್ಲೇ ದೆಹಲಿಯ ಗದ್ದುಗೆಗೆ ಏರಿತ್ತು. 2015ರಲ್ಲಿ ನಡೆದ ವಿಧಾನಸಣಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ದೆಹಲಿ ಮತದಾರ 70 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ಮನ್ನಣೆ ನೀಡಿದ್ದ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಆಮ್ ಆದ್ಮಿಗೆ ಪ್ರಬಲ ಪೈಪೋಟಿ ನೀಡುವ ಎಲ್ಲಾ ಸಾಧ್ಯತೆಯೂ ಇದೆ ಎನ್ನಲಾಗಿತ್ತು. ಆದರೆ, ಕಳೆದ ಐದು ವರ್ಷದ ಆಡಳಿತ ಅವಧಿಯಲ್ಲಿ ಶಿಕ್ಷಣ ಕ್ಷೇತ್ರ ಸೇರಿದಂತೆ ದೆಹಲಿಯ ಮೂಲಭೂತ ಸೌಲಭ್ಯ ವಿಭಾಗದಲ್ಲಿ ಆಮ್​ ಆದ್ಮಿ ಅಕ್ಷರಶಃ ಕ್ರಾಂತಿಯನ್ನೇ ನಡೆಸಿದ್ದು, ಇದರ ಪರಿಣಾಮ ಮಧ್ಯಮ ವರ್ಗದ ಸಮಾಜ ಮತ್ತೊಮ್ಮೆ ಆಪ್ ಸರ್ಕಾರವನ್ನೇ ಬೇಕೆಂದು ಹೇಳುತ್ತಿವೆ ಎಂದು ಸಮೀಕ್ಷೆ ಹೇಳಿದೆ.

ಇನ್ನು 2015ರಲ್ಲಿ ಮತದಾನಕ್ಕೆ ಕಂಡುಬಂದಿದ್ದ ಉತ್ಸಾಹ ಈ ಬಾರಿ ಕಂಡುಬರಲಿಲ್ಲ. ಕಳೆದ ಚುನಾವಣೆಗೆ ಹೋಲಿಸಿದ್ರೆ ಈ ಬಾರಿ ಕಡಿಮೆ ಮತದಾನ ಆಗಿದೆ. 2015ರಲ್ಲಿ ಶೇ.65 ರಷ್ಟು ಮತದಾನ ಆಗಿದ್ದರೆ ಈ ಬಾರಿ ಸಂಜೆ ಶೇ.55ರಷ್ಟು ಮತದಾನ ನಡೆದಿದೆ. ಫೆಬ್ರವರಿ 11ಕ್ಕೆ ಫಲಿತಾಂಶ ಹೊರಬೀಳಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಬಿಎಲ್ ಸಂತೋಷ್ ಸೇರಿದಂತೆ ಹಲವು ಗಣ್ಯರು ಮತಚಲಾಯಿಸಿದರು. ಚಿನ್ಹೆ ಧರಿಸಿ ಮತದಾನಕ್ಕೆ ಬಂದಿದ್ದನ್ನು ಪ್ರಶ್ನೆ ಮಾಡಿದ ಆಪ್ ಕಾರ್ಯಕರ್ತನಿಗೆ ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಂಬಾ ಕಪಾಳಕ್ಕೆ ಬಾರಿಸಿದ್ದಾರೆ. ಮಧುಮಗನೊಬ್ಬ ಕುಟುಂಬದೊಂದಿಗೆ ಬಂದು ಮತ ಚಲಾಯಿಸಿ ಕುಣಿದುಕುಪ್ಪಳಿಸಿದ್ದಾನೆ. 100ಕ್ಕೂ ಹೆಚ್ಚು ಶತಾಯಷಿಗಳು ಮತ ಚಲಾಯಿಸಿದ್ದಾರೆ.

Also read: ಸರ್ಕಾರಿ ನೌಕರರಿಗೆ ಕಡ್ಡಾಯ ನಿಯಮಗಳನ್ನು ಜಾರಿಗೊಳಿಸಿದ ಸರ್ಕಾರ; ಕರ್ತವ್ಯದ ಸಮಯದಲ್ಲಿ ಟೀ, ಕಾಫಿ ಬ್ರೇಕ್ ನೆಪದಲ್ಲಿ ಕಾಲ ಹರಣ ಮಾಡಿದರೆ ಹುಷಾರ್.!