ಫೇಸ್‌ಬುಕ್ ನಿಂದ ಸಾಕಷ್ಟು ಹಣಗಳಿಸಬಹುದು ಇಲ್ಲಿದೆ ಮಾಹಿತಿ

0
3172

ಫೇಸ್‌ಬುಕ್ ಒಂದು ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣ, ಇದರ ಕಾರ್ಯಾಚರಣೆ ನಿರ್ವಹಿಸುವ ಮತ್ತು ಖಾಸಗಿಯಾಗಿ ಮಾಲಿಕತ್ವ ಹೊಂದಿರುವ ಕಂಪನಿ Facebook, Inc. ಬಳಕೆದಾರರು ತಮ್ಮ ಮಿತ್ರರನ್ನು ಇಲ್ಲಿ ಸೇರಿಸಬಹುದು ಮತ್ತು ಅವರಿಗೆ ಸಂದೇಶಗಳನ್ನು ಕಳುಹಿಸಬಹುದು, ಮತ್ತು ತಮ್ಮ ವೈಯುಕ್ತಿಕ ವ್ಯಕ್ತಿಚಿತ್ರವನ್ನು ಸಹ ನವೀಕರಿಸಿ ಮಿತ್ರರಿಗೆ ತಮ್ಮ ಬಗ್ಗೆ ಪ್ರಕಟಿಸಬಹುದು. ಇದರ ಜೊತೆಗೆ,  ಬಹಳಷ್ಟು ಹಣಗಳಿಸಬಹುದಾಗಿದೆ.

ನಿಮ್ಮ ಸೇವೆ ಮತ್ತು ಉತ್ಪನ್ನಗಳನ್ನು ಪ್ರಸ್ತುತಪಡಿಸುವ ನಿಮ್ಮದೇ ಆದ ಫೇಸ್‌ಬುಕ್ ಪುಟವನ್ನು ನೀವು ಸಿದ್ಧಮಾಡಿಕೊಳ್ಳಬೇಕು. ನಿಮ್ಮ ಫೇಸ್‌ಬುಕ್ ಪುಟದ ಹೆಸರನ್ನು ಜಾಗರೂಕತೆಯಿಂದ ಆರಿಸಿಕೊಳ್ಳಿ ಇದು ಹೆಚ್ಚಿನ ಭೇಟಿದಾರರನ್ನು ಆಕರ್ಷಿಸುವಂತಿರಬೇಕು. ನಿಖರವಾದ ವರ್ಗವನ್ನು ಆರಿಸಿ, ಕವರ್ ಅಪ್‌ಲೋಡ್ ಮಾಡಿ ಮತ್ತು ನಿಮ್ಮ ಪುಟವನ್ನು ವೃತ್ತಿಪರವನ್ನಾಗಿಸಲು ಪ್ರೊಫೈಲ್ ಪೋಟೋವನ್ನು ಅಪ್‌ಲೋಡ್ ಮಾಡಿ.

ನಿಮ್ಮ ಫೇಸ್‌ಬುಕ್ ಪುಟದ ಅದೇ ಹೆಸರನ್ನೇ ಬಳಸಿಕೊಂಡು ಬ್ಲಾಗ್ ಅಥವಾ ವೆಬ್‌ಸೈಟ್ ಅನ್ನು ಇದೀಗ ರಚಿಸಿ. ಫೇಸ್‌ಬುಕ್ ಸಂಪೂರ್ಣ ಕಸ್ಟಮೈಸೇಶನ್ ಆಪ್ಶನ್ ಅನ್ನು ನೀಡುವುದಿಲ್ಲ, ನಿಮ್ಮದೇ ಆದ ವೆಬ್‌ಸೈಟ್ ಅನ್ನು ಹೊಂದುವುದು ಉತ್ತಮವಾಗಿದೆ ಇದರಿಂದ ನಿಮ್ಮ ಸೇವೆಯ ಸಂಪೂರ್ಣ ವಿವರ ದೊರೆಯುತ್ತದೆ. ವರ್ಡ್ ಪ್ರೆಸ್ ಅಥವಾ ಬ್ಲಾಗ್‌ಸ್ಪಾಟ್‌ನೊಂದಿಗೆ ಬ್ಲಾಗ್ ಅನ್ನು ಸುಲಭವಾಗಿ ನಿಮಗೆ ರಚಿಸಿಕೊಳ್ಳಬಹುದಾಗಿದೆ.

ನಿಮ್ಮ ಪುಟವನ್ನು ಪ್ರಮೋಟ್ ಮಾಡುವ ಮೂಲಕ ಫೇಸ್‌ಬುಕ್‌ನಲ್ಲಿ ನಿಮ್ಮ ದೈನಂದಿನ ಭೇಟಿದಾರರು ಮತ್ತು ಫ್ಯಾನ್ ಬೇಸ್ ಅನ್ನು ನಿರ್ಮಿಸಲು ಆರಂಭಿಸಬೇಕು. ಇದು ನಿಮ್ಮ ಯೋಜನೆಯನ್ನು ಇನ್ನಷ್ಟು ಜನರನ್ನು ತಲುಪುವಂತೆ ಮಾಡುತ್ತದೆ. ನಿಮ್ಮ ಪುಟವನ್ನು ಹೇಗೆ ಪ್ರಮೋಟ್ ಮಾಡಬಹುದು ಎಂಬುದಕ್ಕೆ ವಿಧಾನಗಳು ಇಲ್ಲಿವೆ.

1)ನಿಮ್ಮ ಪುಟವನ್ನು ಲೈಕ್ ಮಾಡಲು ನಿಮ್ಮ ಫೇಸ್‌ಬುಕ್ ಸ್ನೇಹಿತರನ್ನು ಆಮಂತ್ರಿಸಿ

2)ಮಲ್ಟಿಪಲ್ ಗ್ರೂಪ್‌ಗಳಲ್ಲಿ ನಿಮ್ಮ ಪುಟವನ್ನು ಹಂಚಿಕೊಳ್ಳಿ

3)ನಿಮ್ಮ ಸ್ನೇಹಿತರಿಗೆ ಪುಟದ ಲಿಂಕ್ ಅನ್ನು ಕಳುಹಿಸಿ ಮತ್ತು ಲೈಕ್ ಮಾಡಲು ಅವರನ್ನು ಕೇಳಿಕೊಳ್ಳಿರಿ

4)ನಿಮ್ಮ ಪುಟವನ್ನು ಪ್ರಮೋಟ್ ಮಾಡಲು ಫೇಸ್‌ಬುಕ್ ಜಾಹೀರಾತುಗಳನ್ನು ನಿಮಗೆ ನೀಡಬಹುದಾಗಿದೆ. ಒಂದೇ ದಿನದಲ್ಲಿ ಸಾವಿರ ಲೈಕ್‌ಗಳನ್ನು ನೀಡಲು ಅನುಕೂಲಕರವಾಗಿರುವ ಸರಳ ವಿಧಾನ ಇದಾಗಿದೆ.

ಫೇಸ್‌ಬುಕ್‌ನಿಂದ ಸಾಕಷ್ಟು ಹಣಗಳಿಸಲು ಅನುಕೂಲಕರವಾಗಿರುವ ವಿಧಾನ ಇದಾಗಿದೆ. ಅಫ್ಲಿಯೇಟ್ ಪ್ರೊಗ್ರಾಮ್‌ನೊಂದಿಗೆ ಸೈನ್ ಅಪ್ ಆಗಲು ನಿಮ್ಮನ್ನು ಫೇಸ್‌ಬುಕ್ ಕೇಳಿಕೊಳ್ಳುತ್ತದೆ. ಇದು ಯಾವುದೇ ಬ್ರಾಂಡ್ ಕೂಡ ಆಗಿಬಹುದು. ಪ್ರಮೋಟ್ ಮಾಡಲು ಪ್ರಮೋಶನಲ್ ಮೆಟೀರಿಯಲ್ ಅನ್ನು ಇದು ನೀಡಬಹುದು.

ಈ ಪ್ರೊಗ್ರಾಮ್ ಮೂಲಕ ಒಮ್ಮೆ ನೀವು ಸೈನ್ ಅಪ್ ಆದನಂತರ, ಉತ್ಪನ್ನ ಅಥವಾ ಸೇವೆಗಾಗಿ ನೀವು ವಿಷಯವನ್ನು ರಚಿಸಿಕೊಳ್ಳಬೇಕು. ನಿಮ್ಮ ಕಂಟೆಂಟ್ ಅನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಳ್ಳುವುದರೊಂದಿಗೆ ಪ್ರಮೊಶನಲ್ ಲಿಂಕ್ ಅನ್ನು ನೀಡಲಾಗುತ್ತದೆ. ನಿಮ್ಮ ಲಿಂಕ್ ಬಳಸಿಕೊಂಡು ಉತ್ಪನ್ನ ಅಥವಾ ಸೇವೆಗಳನ್ನು ಜನರು ಹೆಚ್ಚು ಖರೀದಿಸಿದಂತೆ ನಿಮಗೆ ಹೆಚ್ಚು ಪಾವತಿ ಮಾಡಲಾಗುತ್ತದೆ.