ಮುಂಬೈ ಫೇಸ್ ಬುಕ್ ಕಚೇರಿ ಮೇಲೆ ಮಂಗಳೂರು ಪೊಲೀಸರ ದಾಳಿ

0
1078

ತನಿಖೆಗೆ ಸಹಕರಿಸಲಿಲ್ಲವೆಂಬ ಕಾರಣಕ್ಕೆ ಮಂಗಳೂರು ಪೊಲೀಸರು ಮುಂಬಯಿ ಫೇಸ್ ಬುಕ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ಕಟೀಲು ದುರ್ಗಾ ಪರಮೇಶ್ವರಿ ದೇವರ ಬಗ್ಗೆ ಪೇಶ್ ಬುಕ್ ನಲ್ಲಿ ಅವಹೇಳನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದ ಪ್ರಕರಣದ ಬಗ್ಗೆ ಮಂಗಳೂರು ಪೊಲೀಸರು ತನಿಖೆ ನಡೆಸುಪತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಸಹಕರಿಸಬೇಕು ಎಂದು ಮುಂಬಯಿ ಫೇಸ್ ಬುಕ್ ಕಚೇರಿ ಮಂಗಳೂರು ಪೊಲೀಸ್ ತಂಡ ಕೇಳಿದೆ.

ದುಬೈನಲ್ಲಿರುವ ಪ್ರಮುಖ ಆರೋಪಿ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸ್ ತಂಡ ಕೋರಿಗೆ, ಆದರೆ ಸಹಾಯ ಮಾಡಲು ಫೇಸ್ ಬುಕ್ ಕಚೇರಿ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಈ ಸಂಬಂಧ ಫೇಸ್ ಬುಕ್ ಕಚೇರಿ ವಿರುದ್ಧ ದೂರು ದಾಖಲಿಸಲಾಗಿದೆ.ಮುಂಬಯಿ ಪೊಲೀಸರು ಹಾಗೂ ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರನ್ನೊಳಗೊಂಡ ತಂಡ ರಚಿಸಲಾಗಿದೆ.