ಐದು ಕೋಟಿ ಫೇಸ್ ಬುಕ್‌ ಖಾತೆಗಳು ಹ್ಯಾಕ್‌..? ನಿಮ್ಮ ಖಾತೆಗಳ ಖಾಸಗಿ ಮಾಹಿತಿ ಕೇವಲ 200 ರೂ.ಗೆ ಸೇಲ್.!

0
449

ಇತ್ತೀಚೆಗಷ್ಟೇ ಐದು ಕೋಟಿ ಫೇಸ್ ಬುಕ್‌ ಬಳಕೆದಾರರಲ್ಲಿ ಭದ್ರತಾ ಸಮಸ್ಯೆಯನ್ನು ಪತ್ತೆಹಚ್ಚಲಾಗಿದೆ ಎಂದು ಫೇಸ್ ಬುಕ್‌ ಒಪ್ರಿಕೊಂಡಿತ್ತು. ಖಾತೆಗಳು ಹ್ಯಾಕ್ ಆಗಿರುವ ಸಾಧ್ಯತೆಗಳಿವೆ ಎಂದು ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಹೇಳಿಕೆ ನೀಡಿರುವುದರ ಬೆನ್ನಲ್ಲೆ ಮತ್ತೊಂದು ಶಾಕಿಂಗ್ ನ್ಯೂಸ್ ಹೊರ ಬಂದಿದೆ.

Also read: ಮೋದಿಯಿಂದ ಮಹಾ ಮೋಸ; ಜನಸಾಮಾನ್ಯರ ಉಳಿತಾಯದ ಹಣದಿಂದ ಖಾಸಗಿ ಸಂಸ್ಥೆಯ 90 ಸಾವಿರ ಕೋಟಿ ಸಾಲ ತೀರಿಸಿದ ಮೋದಿ ಸರ್ಕಾರ!!

ಹ್ಯಾಕ್ ಆದ 50 ಮಿಲಿಯನ್ ಫೆಸ್’ಬುಕ್ ಖಾತೆಗಳನ್ನು ಹ್ಯಾಕರ್ಸ್’ಗಳು ಕೇವಲ $3 ಡಾಲರ್’ಗೆ ಮಾರಿದ್ದಾರೆ ಎಂಬುದು ತಿಳಿದು ಬಂದಿದೆ. ಡಾರ್ಕ್ ವೆಬ್’ನಲ್ಲಿರುವ ಮಾರುಕಟ್ಟೆಗಳಲ್ಲಿ ಇಂಥಹ ಹಲವಾರು ಪಟ್ಟಿಗಳನ್ನು ಪತ್ತೆಹಚ್ಚಿದೆ ಎಂದು ‘’ದಿ ಇಂಡಿಪೆಂಡೆಂಟ್’ ವರದಿ ಮಾಡಿದೆ. ಈ ಹ್ಯಾಕ್ ಮಾಡಿದ ಖಾತೆಗಳನ್ನು $ 3 ರಿಂದ $ 12 ರವರೆಗೆ ಮಾರಾಟ ಮಾಡಲಾಗುತ್ತಿದೆ ಎಂದು ವೆಬ್’’ಸೈಟ್ ತಿಳಿಸಿದೆ. ಖರೀದಿದಾರರು ಈ ಬಳಕೆದಾರರ ಡೇಟಾವನ್ನು ಬಿಟ್ಕೋಯಿನ್’’ಗಳಂತಹ ಕ್ರಿಪ್ಟೋ ಕರೆನ್ಸಿಗಳ ಮೂಲಕ ಖರೀದಿಸುತ್ತಿದ್ದಾರೆ. ಇದು $ 150 ಮಿಲಿಯನ್ ಮತ್ತು $ 600 ಮಿಲಿಯನ್ ಮೊತ್ತದ ಕದ್ದಿದ್ದ ಮಾಹಿತಿಯ ಮೌಲ್ಯವನ್ನು ಅಂದಾಜಿಸಿದೆ ಎನ್ನಲಾಗಿದೆ.

Also read: ಹಣದ ಸಮಸ್ಯೆಯಿಂದ ಹೊರಬರಲು ಎಷ್ಟೇ ಪ್ರಯತ್ನ ಪಟ್ಟರೂ ಪ್ರಯೋಜನವಾಗುತ್ತಿಲ್ಲ ಅಂದ್ರೆ ಈ ಸುಲಭ ವಾಸ್ತುವನ್ನು ಅಳವಡಿಸಿಕೊಳ್ಳಿ, ನಿಮ್ಮ ಸಮಸ್ಯೆ ದೂರವಾಗುತ್ತೆ!!

ಬಳಕೆದಾರರ ಸೂಕ್ಷ್ಮ ಡೇಟಾವನ್ನು ಒಳಗೊಂಡಂತೆ ಸೋರಿಕೆಯಾದ ಡಿಜಿಟಲ್ ಟೋಕನ್’’ಗಳನ್ನು ಕದ್ದು ಅಪರಾಧಗಳಿಗಾಗಿ ಸೈಬರ್ ಅಪರಾಧಿಗಳು ದುರುಪಯೋಗಪಡಿಸಬಹುದು. ಸಾಮಾನ್ಯವಾಗಿ ಸ್ಪ್ಯಾಮ್ ಮತ್ತು ನಕಲಿ ಇಮೇಲ್’’ಗಳನ್ನು ಗುರಿಯಾಗಿಸಿಕೊಂಡು ಇಮೇಲ್ ID ಗಳು ಮತ್ತು ಫೋನ್ ನಂಬರ್’ಗಳು ಹಾಗೂ ನಿಮ್ಮ ಲಾಗ್ ಇನ್ ಗಳನ್ನು ಕದ್ದಿದ್ದಾರೆ. ಅಲ್ಲದೇ ಮತ್ತೊಂದು ವೆಬ್’ಸೈಟ್ ಮನಿಗುರು ಪ್ರಕಾರ, ಯಾವುದೇ ಚೆಕ್ ಇಲ್ಲದೆ ಖತೆಗಳು ಮಾರಾಟವಾಗುತ್ತಿದೆ ಎಂದು ತಿಳಿಸಿದೆ. ಸಂಶೋಧನೆಯ ಪ್ರಕಾರ, ಬಳಕೆದಾರರ ವೈಯಕ್ತಿಕ ಡೇಟಾವನ್ನು ಪ್ರವೇಶಿಸಲು ಮತ್ತು ಭೂಗತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ರಕ್ರಿಯೆಯು 10 ನಿಮಿಷಗಳಿಗಿಂತ ಕಡಿಮೆ ಅಂತರದಲ್ಲಿ ನಡೆಯುತ್ತಿದೆ ಎಂದು ಹೇಳಿದೆ.

Also read: ಸುಧಾರಣೆಯಾಗದ ರಾಜಕಾಲುವೆಗಳು; ಸಾರ್ವಜನಿಕರಲ್ಲಿ ನಿಲ್ಲದ ಆತಂಕ..!

ಅನಾಮಧೇಯ ಖಾತೆಯನ್ನು ಸೃಷ್ಟಿಸಲು 10 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಬೇರೆಯವರ ಡೇಟಾವನ್ನು ಆಯ್ಕೆ ಮಾಡಿ ಮತ್ತು ಪಾವತಿ ಪರದೆಯನ್ನು ತಲುಪಲು 10 ನಿಮಿಲ ಸ್ಕು. ಆದರೆ ಇದು ಜನರಿಗೆ ಗೊತ್ತಿಲ್ಲ. ಎಲ್ಲಾ ಕ್ರಿಮಿನಲ್’’ಗಳಿಗೆ ಡಾರ್ಕ್ ವೆಬ್ ಅನ್ನು ಪ್ರವೇಶಿಸುವುದು ಟಾರ್ ಬ್ರೌಸರ್ಸ್, ವಿಪಿಎನ್ ಮತ್ತು ಅಂತರ್ಜಾಲ ಸಂಪರ್ಕ” ಎಂದು ವರದಿ ಮಾಡಲಾಗಿದೆ.