ಮಗ ಪ್ರೀತಿಸಿ ಮೋಸ ಮಾಡಿ ಬಿಟ್ಟು ಹೋದ ಹುಡುಗಿಗೆ ಅವನ ತಂದೆ-ತಾಯಿಗಳು ಏನು ಮಾಡಿರಬಹುದು??

0
997

ಓದುವ ವಯಸ್ಸಿನಲ್ಲಿ ಮಕ್ಕಳು ಪ್ರೀತಿ- ಪ್ರೇಮವೆಂದು ಜೀವನ ಹಾಳು ಮಾಡಿಕೊಳ್ಳುವುದು ಯಾವ ತಂದೆ ತಾಯಿಗಳಿಗೆ ಇಷ್ಟ ವಿರುವುದಿಲ್ಲ, ಒಂದು ವೇಳೆ ಇನ್ನೂ ಅಪ್ರಾಪ್ತ ವಯಸ್ಸಿನಲ್ಲೇ ಇಂತಹ ತಪ್ಪುಗಳನ್ನು ಮಾಡಿ ಮನೆ ಬಿಟ್ಟು ಓಡಿ ಹೋಗಿ, ಈ ಸಂಬಂಧ ಕೋರ್ಟ್ ಮೆಟ್ಟಿಲೇರಿದರೆ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಏನು ಮಾಡಲು ಬಯಸುತ್ತಾರೆ? ಕೆಲಯೋಬ್ಬರಂತು ಸಾವಿನಂತ ಶಿಕ್ಷೆ ನೀಡುತ್ತಾರೆ. ಇನ್ನೂ ಕೆಲವೊಬ್ಬರು ತಮ್ಮ ಮಕ್ಕಳನ್ನು ಮನೆಯಿಂದ ಹೊರಹಾಕುತ್ತಾರೆ. ಇದೆ ತರಹ ಇಲ್ಲೊಂದು ಘಟನೆ ನಡೆದಿದ್ದು ಮಗ ಪ್ರೀತಿಸಿ ಓಡಿ ಹೋಗಿ ಮನೆಗೆ ಕರೆದುಕೊಂಡು ಮೋಸ ಮಾಡಿದ, ಆದರೆ ಅವನ ತಂದೆ ತಾಯಿಗಳು ಆ ಹುಡಿಗಿ ಜೀವನಕ್ಕೆ ಮಾಡಿರುವ ಪುಣ್ಯದ ಕೆಲಸ ಇಡಿ ದೇಶದ ತುಂಬೆಲ್ಲ ವೈರಲ್ ಆಗಿದೆ.

Also read: ಪ್ರೇಮಿಗಳು ಓದಲೇ ಬೇಕಾದ ಸ್ಟೋರಿ; ಲವ್ ಮಾಡಿ ಮದುವೆಯಾದ ಒಂದೇ ವರ್ಷದಲ್ಲಿ ಹೆಂಡತಿಗೆ ಕ್ಯಾನ್ಸರ್ ಆದರೆ ಈ ವೇಳೆ ಪ್ರಿಯತಮ ತೋರಿಸುವ ಪ್ರೀತಿ ಹೇಗಿದೆ ನೋಡಿ..

ಏನಿದು ಘಟನೆ?

ಹೌದು ಕೇರಳದ ಕೊಟ್ಟಯಂನಲ್ಲಿ ಘಟನೆ ನಡೆದಿದ್ದು ತಂದೆಯೊಬ್ಬರು ತಮ್ಮ ಮಗ ಪ್ರೀತಿಸಿ ಮೋಸ ಮಾಡಿದ್ದ ಯುವತಿಯನ್ನು ಮಗಳಂತೆ ಸಾಕಿದ್ದು, ಬೇರೆ ಹುಡುಗನೊಂದಿಗೆ ಮದುವೆ ಮಾಡಿಸಿರುವ ಅಪರೂಪದ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ಸಂಧ್ಯಾ ಪಲ್ಲವಿ ಅವರು ಫೇಸ್‍ಬುಕ್‍ನಲ್ಲಿ ಬರೆದು ಪೋಸ್ಟ್ ಮಾಡಿದ್ದರು. ಇದೀಗ ಆ ಫೋಸ್ಟ್ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆದ ನಂತರ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಆ ಪೋಸ್ಟ್- ನಲ್ಲಿರುವ ಸ್ಟೋರಿ ನೋಡಿ ಕಣ್ಣಲ್ಲಿ ನೀರು ಬಂತು ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಪೋಸ್ಟ್ ನಲ್ಲಿ ಬರೆದಿರುವಂತೆ. ಇಂದು ನಾನು ಸ್ನೇಹಿತರೊಬ್ಬರ ಒಂದು ವಿಶೇಷ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಈ ಮದುವೆ ಕೊಟ್ಟಯಂ ಜಿಲ್ಲೆಯ ತಿರುನಕ್ಕರ ಗ್ರಾಮದಲ್ಲಿ ನಡೆದಿದೆ. ಆದರೆ ಮಾಂಗಲ್ಯಧಾರಣೆ ವೇಳೆ ಕಣ್ಣೀರು ಬಂದಿತ್ತು ಎಂದು ಹೇಳಿಕೊಂಡಿರುವ ಅವರು.

Also read: ಮನೆಯವರು ಇವರಿಬ್ಬರ ಪ್ರೇಮ ವಿವಾಹಕ್ಕೆ ಒಪ್ಪದಿದ್ದಾಗ ಈ ಪ್ರೇಮಿಗಳು ರಾಜ್ಯಪಾಲರ ಬಳಿಯೇ ಹೋಗಿ ಪ್ರೀತಿ ಹೇಗೆ ಗೆದ್ದುಕೊಂಡರು ಗೊತ್ತೇ?

ತಿರುನಕ್ಕರ ನಿವಾಸಿ ಶಾಜಿ ಮತ್ತು ಅವರ ಪತ್ನಿ ಅತಿಥಿಗಳನ್ನು ಬರಮಾಡಿಕೊಳ್ಳುವ ಕಾರ್ಯದಲ್ಲಿ ಬ್ಯುಸಿಯಾಗಿದ್ದರು. ಆರು ವರ್ಷಗಳ ಹಿಂದೆ ಶಾಜಿ ಅವರ ಮಗ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಈ ವೇಳೆ ತನ್ನ ಸಹಪಾಠಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ನಂತರ ಇಬ್ಬರು ಮನೆಬಿಟ್ಟು ಓಡಿಹೋಗಿದ್ದರು. ಇತ್ತ ಮಗಳ ಕಾಣೆಯಾಗಿದ್ದಳು ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಅವರಿಬ್ಬರನ್ನು ಪತ್ತೆಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ಹುಡುಗನ ಜೊತೆ ಓಡಿ ಹೋದ ಮಗಳು ನಮಗೆ ಬೇಡ ಎಂದು ಹುಡುಗಿಯನ್ನು ಆಕೆಯ ಪೋಷಕರು ಬಿಟ್ಟು ಹೋದರು. ಕೊನೆಗೆ ಮಕ್ಕಳಿಗೆ 18 ವರ್ಷ ತುಂಬಿದ ಮೇಲೆ ಮದುವೆ ಮಾಡುತ್ತೇವೆ ಎಂದು ಹುಡುಗನ ಪೋಷಕರು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು.

Also read: ಹೈದೆರಬಾದ್ ಹೋಟೆಲ್-ನಲ್ಲಿ ಕನ್ನಡ ಚಾನೆಲ್ ಬರುತ್ತಿಲ್ಲ ಎಂದು ಹೋಟೆಲ್-ನವರಿಗೆ ಕ್ಲಾಸ್ ತಗೊಂಡು, ಕನ್ನಡ ಪ್ರೀತಿ ಮೆರೆದ ದರ್ಶನ್

ತಂದೆ ಶಾಜಿ ಮಗನನ್ನು ಹಾಸ್ಟೆಲಿಗೆ ಸೇರಿಸಿ ವಿದ್ಯಾಭ್ಯಾಸವನ್ನು ಮುಂದುರಿಸಿದ್ದರು. ಇತ್ತ ಮಗ ಕರೆದುಕೊಂಡು ಬಂದ ಹುಡುಗಿಯನ್ನು ಮನೆಯಲ್ಲಿರಿಸಿ ಓದು ಮುಂದುವರಿಯುವಂತೆ ನೋಡಿಕೊಂಡಿದ್ದರು. ಈ ಮಧ್ಯೆ ಮಗ ಬೇರೊಂದು ಹುಡುಗಿಯನ್ನು ಪ್ರೀತಿ ಮಾಡಿದ್ದಾನೆ. ಅಷ್ಟೇ ಅಲ್ಲದೇ ಕಳೆದ ವರ್ಷ ಮಗ ಊರಿಗೆ ಮರಳಿ ಬರುವಾಗ ಬೇರೊಂದು ಹುಡುಗಿಯನ್ನು ಮದುವೆಯಾಗಿ ಬಂದಿದ್ದಾನೆ. ಪ್ರೀತಿಸಿದ್ದ ಹುಡುಗಿಗೆ ಮೋಸ ಮಾಡಿದ್ದಕ್ಕಾಗಿ ಮಗನನ್ನು ತಮ್ಮ ಕುಟುಂಬದಿಂದ ಹೊರಹೋಗುವಂತೆ ಹೇಳಿದ್ದಾರೆ. ಇತ್ತ ಆತನಿಗಾಗಿ ಕಾಯುತ್ತಿದ್ದ ಯುವತಿಗೆ ತನ್ನ ಮಗನಿಗೆ ಸೇರಬೇಕಿದ್ದ ಆಸ್ತಿಯನ್ನು ಆಕೆಯ ಹೆಸರಿಗೆ ಬರೆದಿದ್ದಾರೆ. ಅಷ್ಟೇ ಅಲ್ಲದೇ ಕರುನಾಗಪಳ್ಳಿ ನಿವಾಸಿ ಅಜಿತ್ ಜೊತೆ ಆ ಹುಡುಗಿಯ ಮದುವೆ ಮಾಡಿಸಿದ್ದಾರೆ. ತಂದೆ-ತಾಯಿ ಸ್ಥಾನದಲ್ಲಿ ನಿಂತು ಮಗಳಂತೆ ಸಾಕಿದ್ದ ಯುವತಿಯನ್ನು ತಿರುನಕ್ಕರ ದೇವಾಲಯದಲ್ಲಿ ಕನ್ಯಾದಾನ ಮಾಡಿಕೊಟ್ಟಿದ್ದಾರೆ. ಇದನ್ನು ನೋಡಿದ ಜನರು ಎಂತಹ ಮಹಾನ್ ಕೆಲಸವೆಂದು ಕಣ್ಣಲಿ ನೀರು ತಂದಿದ್ದಾರೆ.