ಫೇಸ್ಬುಕ್’ನಲ್ಲಿರುವಂತೆ ವಾಟ್ಸಾಪ್’ನಲ್ಲಿಯೂ ಫ್ರೆಂಡ್’ಗಳ ಲೊಕೇಶನ್ ಟ್ರ್ಯಾಕ್ ಮಾಡುವ ಅವಕಾಶ

0
2514

ವಾಟ್ಸಾಪ್ ಪ್ರಪಂಚದ ಪ್ರಖ್ಯಾತ ಮೆಸೇಜಿಂಗ್‌ ಆಪ್‌ ಎಂಬುದು ಹೊಸ ವಿಷಯವೇನು ಅಲ್ಲ. ಬಹುತೇಕ ಸ್ಮಾರ್ಟ್ ಫೋನ್ ಬಳಕೆದಾರರ ಅವಿಭಾಜ್ಯ ಅಂಗವಾಗಿರುವ ವಾಟ್ಸಾಪ್’ನಲ್ಲಿ ಬರಲಿದೆ ಹೊಸ ಫೀಚರ್. ಈ ಹೊಸ ಫೀಚರ್’ಗಳು ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಲಭ್ಯವಿರಲಿದೆ ಎಂದು ಸಂಸ್ಥೆ ಹೇಳಿದೆ.

ವಾಟ್ಸಾಪ್‌ ಬಗೆಗಿನ ಇತ್ತೀಚಿನ ಅಪ್‌ಡೇಟ್‌ ಎಂದರೆ, ಫೇಸ್ಬುಕ್’ನಲ್ಲಿರುವಂತೆ ವಾಟ್ಸಾಪ್’ನಲ್ಲಿಯೂ ಫ್ರೆಂಡ್’ಗಳ ಲೊಕೇಶನ್ ಟ್ರ್ಯಾಕ್ ಮಾಡುವ ಅವಕಾಶ ಸಿಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಹೊಸ ಫೀಚರನ್ನು ವಾಟ್ಸಾಪ್ ಪರೀಕ್ಷಿಸುತ್ತಿದೆ. ಮುಂದಿನ ವಾಟ್ಸಾಪ್ ವರ್ಷನ್’ನಲ್ಲಿ ಈ ಫೀಚರ್ ಅಳವಡಿಸುವ ಸಾಧ್ಯತೆ ಇದೆ ಎಂದು “@WABetaInfo” ಎಂಬ ಟ್ವಿಟ್ಟರ್ ಅಕೌಂಟ್’ನಲ್ಲಿ ತಿಳಿಸಲಾಗಿದೆ.

ವಾಟ್ಸಾಪ್’ನಲ್ಲಿ ಲೈವ್ ಲೊಕೇಶನ್ ಟ್ರ್ಯಾಕಿಂಗ್ ಅನ್ನು ಆನ್ ಮಾಡಿದರೆ ಯಾರು ಬೇಕಾದರೂ ಸ್ಥಳವನ್ನು ನಿಮ್ಮ ಟ್ರ್ಯಾಕ್ ಮಾಡಬಹುದು. ನೀವು ಬೇರೆಯವರ ಲೊಕೇಶನನ್ನು ಪತ್ತೆ ಮಾಡಬಹುದು. ನಿಮಗೆ ಬೇಡವೆಂದಾಗ ಇದನ್ನು ಡಿಸೇಬಲ್ ಕೂಡ ಮಾಡಬಹುದು. ಫೇಸ್ಬುಕ್’ನಲ್ಲೂ ಈ ರೀತಿಯಾದಂತಹ option ಇದೆ. “Find friends Near Me” ಎಂಬುದನ್ನು ಆನ್ ಮಾಡಿದರೆ ನಮ್ಮ ಫೇಸ್ಬುಕ್ ಫ್ರೆಂಡ್ಸ್ ನಮ್ಮಿಂದ ಎಷ್ಟು ದೂರದಲ್ಲಿದ್ದಾರೆ ಎಂಬುದನ್ನು ಸ್ಥೂಲವಾಗಿ ತಿಳಿಸುತ್ತದೆ.

ಇತ್ತೀಚೆಗಷ್ಟೇ ವಾಟ್ಸಾಪ್ ಹೊಸದೊಂದು ಫೀಚರನ್ನು ತನ್ನ ಬೀಟಾ ವರ್ಷನ್’ನಲ್ಲಿ ಅಳವಡಿಸಿತ್ತು. ನಾವು ಕಳುಹಿಸಿದ ಸಂದೇಶವನ್ನು ಡಿಲೀಟ್ ಮಾಡುವ ಅಥವಾ ಎಡಿಟ್ ಮಾಡುವ ಅವಕಾಶವನ್ನು ವಾಟ್ಸಾಪ್ ನಮಗೆ ಒದಗಿಸಿದೆ. ನಾವು ತಪ್ಪಿ ಸಂದೇಶ ಕಳುಹಿಸಿ ಪರಿತಪಿಸುವ ಮುಜುಗರವನ್ನು ಇದರಿಂದ ತಪ್ಪಿಸಿಕೊಳ್ಳಬಹುದು.

ಅಷ್ಟೇ ಅಲ್ಲಾ ಇಷ್ಟು ದಿನ ನಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಸೇವ್ ಆಗಿರುವ ಫೋಟೊಗಳನ್ನು ಮಾತ್ರ ವಾಟ್ಸಪ್ ಮೂಲಕ ಶೇರ್ ಮಾಡಬಹುದಿತ್ತು. ಮೊಬೈಲ್ ಮೆಮೊರಿ ಅಲ್ಲದ ಇತರೆ ಶೇರಿಂಗ್ ಅಪ್ಶನ್ ಇರಲಿಲ್ಲಿ. ಇದೀಗ ಈ ಹೊಸ ವರ್ಷನ್ ನಲ್ಲಿ ಈ ಫೀಚರ್ ಸೇರಿಸಲಾಗಿದ್ದು. ಡ್ರಾಪ್ ಬಾಕ್ಸ್, ಗೂಗಲ್ ಡ್ರೈವ್, ಒನ್ ಡ್ರೈವ್ ಮೊದಲಾದ ಆ್ಯಪ್’ಗಳಿಗೆ ವಾಟ್ಸಾಪ್ ಸಪೋರ್ಟ್ ಮಾಡುತ್ತದೆ.