ಫೇಸ್ ಬುಕ್ ಬಳಕೆ: ಮಾಕ್ರ್ಸ್ ಕಡಿಮೆ ಆದೀತು !

0
593

Kannada News | kannada Useful Tips

ಫೇಸ್ ಬುಕ್ ಬಳಕೆ: ಮಾಕ್ರ್ಸ್ ಕಡಿಮೆ ಆದೀತು !
ಫೇಸ್ ಬುಕ್‍ನಂತಹ ಸಾಮಾಜಿಕ ತಾಣಗಳಲ್ಲೇ ಹೆಚ್ಚು ಸಮಯ ಕಳೆಯುವ ಮಕ್ಕಳಲ್ಲಿ ಮಾನಸಿಕ ದೋಷಗಳು ಕಂಡುಬರುತ್ತಿದ್ದು, ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ ಎಂದು ಅಮೆರಿಕದ ಸಂಶೋಧನಾ ವರದಿ ತಿಳಿಸಿದೆ. ಹೆಚ್ಚು ಸಮಯವನ್ನು ಸಾಮಾಜಿಕ ತಾಣಗಳಲ್ಲೇ ಕಳೆಯುವ ವಿದ್ಯಾರ್ಥಿಗಳ ಸ್ವಭಾವದಲ್ಲಿ ತೊಂದರೆಗಳು ಕಂಡುಬರುತ್ತಿದ್ದು, ಜಂಬ ಮತ್ತು ಕೀಳರಿಮೆಯನ್ನು ಒಳಗೊಂಡಂತಾ ವಿಚಿತ್ರ ಮಾನಸಿಕ ಸಮಸ್ಯೆಗಳು ಅವರನ್ನು ಬಾಧಿಸುತ್ತಿವೆ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧನೆ ತಿಳಿಸಿದೆ. ಸಂಶೋಧನೆಯಲ್ಲಿ ಭಾಗವಹಿಸಿದ್ದ ಫೇಸ್‍ಬುಕ್ ಗೀಳು ಹಚ್ಚಿಕೊಂಡಿರುವ ವಿದ್ಯಾರ್ಥಿಗಳು ಯಾವುದೇ ಒಂದು ವಿಷಯದಲ್ಲಿ 15 ನಿಮಿಷಗಳ ಕಾಲ ಮನಸ್ಸು ಕೇಂದ್ರೀಕರಿಸುವಲ್ಲಿ ವಿಫಲರಾಗಿದ್ದು, ಅವರೆಲ್ಲಾ ತಮ್ಮ ಫೇಸ್‍ಬುಕ್ ನೋಡಲೇಬೇಕೆಂಬ ಆತುರದಲ್ಲಿರುವುದು ಗೋಚರಿಸಿದೆ.

Image result for facebook academics

ತನಗೇ ಎಲ್ಲವೂ ತಿಳಿದಿರುವಂತಹಾ ಮನೋಭಾವದೊಂದಿಗೆ ವಿದ್ಯಾರ್ಥಿಗಳು ತುಂಬಾ ಕ್ರೂರಿಗಳಾಗಿ ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾಗುವಂತಹ ದುಷ್ಪರಿಣಾಮಗಳು ಕಂಡುಬರುತ್ತಿವೆ ಎಂದು ವಿಶ್ವವಿದ್ಯಾಲಯದ ಮನಃಶಾಸ್ತ್ರ ಪ್ರಾಧ್ಯಾಪಕ ಲಾರಿ ರೋಷನ್ ತಿಳಿಸಿದ್ದಾರೆ.

Image result for facebook hurting academics

ಪ್ರತೀ ದಿನ ಸಾಮಾಜಿಕ ತಾಣಗಳನ್ನು ಹೆಚ್ಚು ಬಳಸುತ್ತಿರುವ 13 ವರ್ಷದೊಳಗಿನ ಮಕ್ಕಳಲ್ಲಿ ನಿದ್ರಾಹೀನತೆ, ಹೊಟ್ಟೆ ನೋವು, ಮಾನಸಿಕ ಖಿನ್ನತೆ, ಗಡಿಬಿಡಿ ಸ್ವಭಾವಗಳು ಹೆಚ್ಚುವ ಸಾಧ್ಯತೆ ಇದೆ ಎಂದೂ ಅಧ್ಯಯನದಿಂದ ತಿಳಿದುಬಂದಿದೆ.

Also Read: ಉಚಿತ ಇಂಟರ್ನೆಟ್ ಪಡೆದುಕೊಳ್ಳಲು ಏನು ಮಾಡಬೇಕು….. ?