ನಿಮ್ಮ ಫೇಸ್ಬುಕ್-ಅನ್ನು ಯಾರು ಬೇಕಾದರೂ ಹ್ಯಾಕ್ ಮಾಡಬಹುದು, ಎಚ್ಚರಿಕೆ ವಹಿಸಿ!!

0
1091

ಫೇಸ್ಬುಕ್ ನಲ್ಲಿ ಏಷ್ಟು ಮನೋರಂಜನೆ ಸಿಗುತ್ತೂ,ಸ್ವಲ್ಪಾ ಏಡವಿದರೂ ಸಂಪೊರ್ಣ ನಿಮ್ಮ ಜೀವನವನ್ನೆ ಹಾಳು ಮಾಡುವ ಶಕ್ತಿ ಫೇಸ್ಬುಕ್ಕಿಗೆ ಇದೆ.ಹಾಗೆಂದು ನೀವು ಅಥವಾ ಫೇಸ್ಬುಕ್ ಕಂಪನಿ ನಿಮ್ಮ ಜೀವನ ಹಾಳು ಮಾಡುತ್ತಿದೆ ಎಂದು ಅಲ್ಲ.ಅದು ಬೇರೆ ಯಾರು ಅಲ್ಲ ಯಾರಿಗೂ ಕಾಣದ ಆ ಮೂರನೇ ವ್ಯಕ್ತಿ.

1. ಯಾರೂ ಈ ಮೂರನೇ ವ್ಯಕ್ತಿ.?

Also read: ಫೇಸ್ಬುಕ್’ನಲ್ಲಿರುವಂತೆ ವಾಟ್ಸಾಪ್’ನಲ್ಲಿಯೂ ಫ್ರೆಂಡ್’ಗಳ ಲೊಕೇಶನ್ ಟ್ರ್ಯಾಕ್ ಮಾಡುವ ಅವಕಾಶ

ಈ ಮೂರನೇ ವ್ಯಕ್ತಿಯನ್ನು ಎಲ್ಲರೂ ‘ಹ್ಯಾಕರ್’ ಎಂದು ಕರೆಯುತ್ತೇವೆ. ಹ್ಯಾಕರ್ ಅಂದರೇ ನಿಮ್ಮ ಫೇಸ್ಬುಕ್ ಖಾತೆಯ ಪಾಸ್ವರ್ಡ್ ಹಾಗೂ ಮೈಲ್ ಐಡಿ ಕದುವ ಕಳ್ಳ.ಹ್ಯಾಕರ್ ಅಂದರೇ ಏನು.? ಹೇಗೆ ? ಎತ್ತಾ.? ಎಂಬುವುದರ ಬಗ್ಗೆ ನಾವು ನಮ್ಮ ಈ ಮುಂಚಿನ್ ಪೋಸ್ಟ್ ನಲ್ಲಿ ಪ್ರಕಟಿಸಿದ್ದೇವೆ.

ಈಗ ನಮ್ಮ ಮುಂದಿರುವ ಪ್ರಶ್ನೆ
ನಮ್ಮ ಫೇಸ್ಬುಕ್ ಖಾತೆಯನ್ನು ಸುರಕ್ಷಿತವಾಗಿ ಇಟ್ಟುಕೋಳ್ಳುವುದು ಹೇಗೆ.?

2. ಲಾಗಿನ್ ಆಗುವ್ ಮುಂಚೆ ಜಾಗ್ರತೆ

ಲಾಗಿನ್ ಮಾಡುವಾಗ ನಿಮ್ಮ ಸುತ್ತಮುತ್ತ ಯಾರದರು ಇದ್ದರಾ ಎಂದು ಖಾತ್ರಿ ಮಾಡಿಕೊಳ್ಳಿ.ಇದು ಸಿಲ್ಲಿ ಅನಿಸಿದರು ಅದಕ್ಕೆ ಕಾರಣ ಕೆಳಗೆ ಓದಿ.ಅವರು ನಿಮ್ಮ ಫೇಸ್ಬುಕ್ ಪಾಸ್ವರ್ಡ್ ಉಪಯೋಗಿಸಿ ನಿಮ್ಮ ಖಾತೆಯನ್ನು ಲಾಗಿನ್ ಮಾಡ್ತರೇ.ನಿಮ್ಮ ಪ್ರೈವೆಸಿ ಸಾವಿರಾರು ಜನ ಕನ್ ತೆರೆದು ನೋಡ್ತರೆ.ಅಲ್ಲಿ ನಿಮ್ಮ ಸ್ನೇಹಿತನ ಪಾತ್ರಕೂಡ ಇರಬುಹುದು.

3. ಬೇಕಾ-ಬಿಟ್ಟಿ ಎಲ್ಲಾ ವೆಬ್ಸೈಟ್ಗೆ ಲಾಗಿನ್ ಆಗ್ಬೇಡಿ(ಪಿಶಿಂಗ್)

ಈ ತರ ಹ್ಯಾಕ್ ಮಾಡುವುದನ್ನು ಪುಶಿನ್ಗ್ ಎಂದು ಕರೆಯುತ್ತಾರೆ. ಅಂದರೇ ಆ ವ್ಯಾಪ್ ಪೇಜ್ ಅಥವಾ ವೆಬ್ಸೈಟ್ ನಿಮಗೆ ಉಚಿತ ಹಣ ಅಥವಾ ರಿಚಾರ್ಜ್ ಆಸೆ ತೊರಿಸುತ್ತಾರೆ. ಆಗ ಅವರು ಹೇಳುವ್ ಪ್ರಕಾರ ನೀವು ಲಾಗಿನ್ ಆಗ್ತಿರಿ ಆದರೆ ಅಲ್ಲಿ ರಿಚಾರ್ಜ್ ಇಲ್ಲಾ ಮಣ್ಣು ಇಲ್ಲ..ಆದುದರಿಂದ ನೀವು ಸುಮ್ಮನೇ ಇರ್ತಿರಿ.ಇಲ್ಲೇ ಆಗೋದು ಎಡವಟ್ಟು,ಅವರಿಗೆ ನೀವು ನಿಮ್ಮ ಪಾಸ್ವರ್ಡ್ ಕೊಟ್ಟು ಬಂದು ಸುಮ್ಮನೇ ಕುಳಿತಿದ್ದಿರಿ.??!!

ಅವರು ನಿಮ್ಮ ಖಾತೆಯನ್ನು ಬೇಕಾ-ಬಿಟ್ಟಿ ಉಪಯೋಗಿಸುತ್ತಾರೆ. ನೋಡಲು ಥೇಟ್ ಫೇಸ್ಬುಕ್ ಲಾಗಿನ್ ಪೇಜ್ ತರ ಕಾಣುವ ಇವುಗಳು HTML ಸಹಾಯದಿಂದ ಮಾಡಿದ್ದಾಗಿರುತ್ತದೆ,ಇವುಗಳು ಹೆಚ್ಚಾಗಿ ಕಾಣಸಿಗುವುದು example.wapka.com ನಲ್ಲಿ. ಆದುದರಿಂದ wapka ಪೇಜ್ ಗಳ ಲಿಂಕನ್ನು ಫೇಸ್ಬುಕ್ನಲ್ಲಿ ಶೆರ್ ಮಾಡುವುದನ್ನು ಫೇಸ್ಬುಕ್ ಕಂಪನಿ ತನ್ನ ಸದಸ್ಯರ ಹಿತ ದೃಷ್ಟಿ ಹಾಗೂ ಭದೃತೆಯ ದೃಷ್ಟಿಯಿಂದ ನೀಷೆದಿಸಿದೆ.ಆದುದರಿಂದ wapka ಹಾಗು ಫೇಸ್ಬುಕ್ ಲಾಗಿನ್ ಪೇಜ್ ತರಹ ಕಾಣುವ ವೆಬ್ಸೈಟ್ನಲ್ಲಿ ಲಾಗಿನ್ ಆಗ್ಬೇಡಿ ಕೇವಲ www.facebook.comನಲ್ಲಿ ಮಾತ್ರ ಲಾಗಿನ್ ಆಗಿ

4. ಫೇಸ್ಬುಕ್ ಸ್ನೇಹಿತರ ಬಗ್ಗೆ ನಿಗವಿರಲಿ

ಫೇಸ್ಬುಕ್ ಇರೋದೆ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ನಿಜ.ಆದರೆ ನೊರರು ರಿಕ್ವೆಸ್ಟ್ ಬಂದಿದೆ ಎಂದು ಬೇಕಾ-ಬಿಟ್ಟಿ accept ಮಾಡಬೇಡಿ.ಕಾರಣ ಒಂದೇ ವ್ಯಕ್ತಿ ಮೂರು ಖಾತೆಯನ್ನು ಮಾಡಿಕೊಂಡು ನಿಮಗೆ ರಿಕ್ವೇಸ್ಟ್ ಕಳುಹಿಸಿದರೆ,ನೀವು ಅದನ್ನು ಗಮನಿಸದೆ accept ಮಾಡಿದರೆ ಅವರಿಗೆ ನಿಮ್ಮ ಪಾಸ್ವರ್ಡ್ ಹ್ಯಾಕ್ ಮಾಡುವುದು ಸುಲಭ.ಆದುದರಿಂದ್ ರಿಕ್ವೆಸ್ಟ್ accept ಮಾಡುವ ಮೊದಲು ವ್ಯಕ್ತಿಯ ಊರೂ,ಸ್ನೇಹಿತರು,ಏನು ಎತ್ತ ಎಂದು ನೋಡಿ accept ಮಾಡಿ.

5. App ಪರ್ಮಿಶನ್ ಕೂಡುವ ಮೊದಲು ಸರಿಯಾಗಿ ಓದಿ.

ಕೆಲವು ಸಲ ಕೆಲವುapp, website ಗಳಿಗೆ ನಾವು ಫೇಸ್ಬುಕ್ ನಿಂದ್ ಲಾಗಿನ್ ಆಗಿ ನಂತರ ಉಪಯೋಗಿಸಬಹುದು. ಆದರೆ ಗಮನವಿಡಿ app ಪರ್ಮಿಶನ್ ಕೂಡುವ ಮುನ್ನ ಅವರು ಹೇಳುವುದನ್ನು ಸರಿಯಾಗಿ ಓದಿ.

ಉದಾಹರಣೆಗೆ ನಮಗೆಲ್ಲರಿಗೂ Gaana app(music app) ಗೊತ್ತು ಅದರಲ್ಲಿ ನಮಗೆ ಸೇವೆ ಬೇಕೆಂದರೆ ನಾವು ಮೊದಲು ಫೇಸ್ಬುಕ್ ಲಾಗಿನ್ ಆಗುವುದು ಕಡ್ಡಯಾ.ಮೊದಲಿಗೆ ಫೇಸ್ಬುಕ್ ಲಾಗಿನ್ ಪೇಜ್ ಬರುತ್ತದೆ ನಾವು ಪಾಸ್ವರ್ಡ್ ಮೈಲ್ ಐಡಿ ಹಾಕ್ತೀವಿ.ನಂತರ app permission ಬರುತ್ತದೆ.”ನಾವು ನಿಮ್ಮ ಹೆಸರು,ಮೈಲ್ ಐಡಿ,ಹುಟ್ಟಿದ ದಿನಾಂಕ ಪಡೆಯಲು ಬಯಸುತ್ತವೆ” ಎಂದು ಬರುತ್ತದೆ ನೀವು Agree(continue) ಕೊಟ್ಟು ಮುಂದುವರೆಯಬಹುದು.ಆದರೆ ಕೆಲವು app ಅಥವಾ ವೆಬ್ಸೈಟ್,”ನಾವು,ನಿಮ್ಮ ಹೆಸರು,ಮೈಲ್ ಐಡಿ, ಹುಟ್ಟಿದ ದಿನಾಂಕ ಬಯಸುತ್ತೇವೆ”ಎಂದು ಆಂಗ್ಲದಲ್ಲಿ ಬರುತ್ತದೆ.ಮುಂದುವರೆಸಿ ಆದರೆ ಮಸ್ಲತ್ ಇರೋದು ಇಲ್ಲಿ “ನಾವು ನಿಮ್ಗೋಸ್ಕರ ನಿಮ್ಮ ಫೇಸ್ಬುಕ್ ನಲ್ಲಿ ಎನಾದರೂ ಪೋಸ್ಟ್ ಮಾಡುತ್ತೇವೆ” ಎಂದು ಬಂದು ನೀವು I agree ಬಟನ್ ಒತ್ತಿದರೆ ನಿಮ್ಮ ಕಥೆ ಮುಗಿಯಿತು.ಅವರು ಬೇಕಾದದ್ದು ಬೇಡಾದದ್ದು ಎಲ್ಲವನ್ನು ನಿಮ್ಮ ಹೇಸರಿನಲ್ಲಿ ಪೊಸ್ಟ್ ಮಾಡ್ತರೆ.ಆದುದರಿಂದapp permission ಕೊಡುವ ಮುನ್ನ ಕೇವಲ ಹೆಸರು ಮೈಲ್ ಐಡಿ, ಹುಟ್ಟಿದ ದಿನ ಕೇಳಿದರೆ ಮಾತ್ರ I agree ಬಟನ್ ಒತ್ತಿ.ನಿಮ್ಮ ಪ್ರೈವೆಸಿಗೆ ದಕ್ಕೆ ಬರುವ ವಿಚಾರ ಬಂದರೆ ರಿಜೇಕ್ಟ್ ಮಾಡಿ.

Source: kachaguli

Also read: ನಿಮ್ಮ ಫೇಸ್ಬುಕ್ ಖಾತೆ ರಕ್ಷಣೆಯ ಬಗ್ಗೆ ನಿಮಗೆ ಗೊತ್ತಿರದ 5 ಸಂಗತಿಗಳು..