ಪ್ಲ್ಯಾಸ್ಟಿಕ್ ಅಕ್ಕಿ ವದಂತಿ: ಅಲ್ಲಗಳೆದ ರಾಜ್ಯ ಆಹಾರ ಪ್ರಯೋಗಾಲಯ.

0
631

‘ಪ್ಲ್ಯಾಸ್ಟಿಕ್’ ಅಕ್ಕಿ’ ಎಂದು ಕರೆಯಲ್ಪಡುವ ವಿಷಯವಿದೆಯೇ?

ತೆಲಂಗಾಣ ಮತ್ತು ಆಂಧ್ರದಲ್ಲಿ ‘ಪ್ಲಾಸ್ಟಿಕ್ ಅಕ್ಕಿ’ಯ ಹಲವಾರು ದೂರುಗಳು ಮತ್ತು ವದಂತಿಗಳು ಜನರನ್ನು ಕೆಲ ಕಾಲ ಗೊಂದಲ ಉಂಟುಮಾಡಿತ್ತು.

ಟೆಲಿವಿಷನ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚಿಗೆ ತೆರಿಸುತ್ತಿರುವ ಪ್ಲಾಸ್ಟಿಕ್ ಅಕ್ಕಿಗಳ ವದಂತಿಗಳು ತೆಲಂಗಾಣ ಮತ್ತು ಆಂಧ್ರದ ಜನರಲ್ಲಿ ಹಲವಾರು ಪ್ರಶ್ನೆಗಳಿಗೆ ಚಿಂತಿತರಾಗಿದ್ದು. ವಿಜಯವಾಡಾದ ಇಂದಿರಾ ಗಾಂಧಿ ಮುನಿಸಿಪಲ್ ಕ್ರೀಡಾಂಗಣದಲ್ಲಿ ಕೆಲವು ಮಳಿಗೆಗಳು ಕಳೆದ ಐದು ದಿನಗಳ ಕಾಲ ಕಳಪೆ ಮಾರಾಟದ ನಂತರ ಬಿರಿಯಾನಿ ಮಾರಾಟವನ್ನು ನಿಲ್ಲಿಸಿದವು. ಈ ವಿಷಯದ ಬಗ್ಗೆ ವಿಶಾಖಪಟ್ಟಣಂ ಜಿಲ್ಲೆಯ ಕೆಲವರು ಬುಧವಾರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಚಾರ್ಮಿನಾರ್, ಯೂಸುಫ್ಗುಡ, ಸರೋನೋರ್ಗರ್ ಮತ್ತು ಮೀರ್ಪೇಟ್ ಪ್ರದೇಶಗಳಿಂದ ಹೈದರಾಬಾದ್ ‘ಪ್ಲಾಸ್ಟಿಕ್ ಅಕ್ಕಿ’ ದೂರುಗಳು ಬಂದಿರುವುದು ಕಂಡುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ತೆಲಂಗಾಣ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ವಿಷಯವನ್ನು ಗಮನಕ್ಕೆ ತೆಗೆದುಕೊಂಡು ಶಂಕಿತ ‘ಪ್ಲಾಸ್ಟಿಕ್ ಅಕ್ಕಿ’ ಯ ವಿವಿಧ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.

ಪ್ಲಾಸ್ಟಿಕ್ ಅಕ್ಕಿ ಎಂದರೇನು?

“ಮೊದಲನೆಯದಾಗಿ ಪ್ಲ್ಯಾಸ್ಟಿಕ್ ಅಕ್ಕಿ ಎಂದು ಕರೆಯಲ್ಪಡುವ ವಿಷಯ ಏನೂ ಇಲ್ಲ, ಚೀನಾದಿಂದ ವೀಡಿಯೊ ಕಳೆದ ವರ್ಷ ಸೋಶಿಯಲ್ ಮಾಧ್ಯಮದಲ್ಲಿ ವೈರಲ್ ಹೋದ ನಂತರ ಈ ಪದವು ಬಂದಿತು. ಹೊಸ ಸಂಶೋಧನೆ ಇಂದ ಇಂತಹ ವಿಷಯ ಅಸ್ತಿತ್ವದಲ್ಲಿಲ್ಲ ಎಂದು ಸಾಬೀತಾಗಿದೆ,” ಗುಣಮಟ್ಟದ ನಿಯಂತ್ರಣ ವಿಶ್ಲೇಷಕ ರಾಜ್ಯ ಇಲಾಖೆಯಿಂದ ಓಸ್ಮಾನ್ ಮೊಹಿಯುದ್ದೀನ್ ರವರು ಟಿಎನ್ಎಮ್ ಗೆ ತಿಳಿಸಿದ್ದಾರೆ.

ವಾಸ್ತವವಾಗಿ ಅಕ್ಕಿಯಲ್ಲಿ ಕೇವಲ ಕಲಬೆರಕೆ ಮಾಡಬಹುದು, ಅದರಕ್ಕಿಂತ ಹೆಚ್ಚು ಏನೂ ಮಾಡಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ.

ಹೈದರಾಬಾದಿನ ವರದಿಗಳ ಪ್ರಕಾರ, ಸೋಶಿಯಲ್ ಮಾಧ್ಯಮದಲ್ಲಿ ವೈರಲ್ ನಲ್ಲಿ ಹೋದ ವಿಡಿಯೋ, ಇಬ್ಬ ಯುವಕ ಒಂದು ಅಕ್ಕಿ ಪ್ಯಾಕೆಟ್ ತೆರೆದು ಆ ಅಕ್ಕಿಯೆಂದ ಅನ್ನವನ್ನು ಮಾಡುತ್ತಾನೆ. ಅದರ ನಂತರ, ಮಡಿದ ಅನ್ನದಿಂದ ಯುವಕ ಚೆಂಡನ್ನು ಮಾಡಿ ಮೇಜಿನ ಮೇಲೆ ‘ಚೆಂಡನ್ನು’ ಬೌನ್ಸ್ ಮಾಡಿದ್ದಾರೆ, ಮತ್ತು ಅದು ‘ಪ್ಲಾಸ್ಟಿಕ್’ ಅಕ್ಕಿಯಾಗಿರುವುದರಿಂದ ಅದು ಬೌನ್ಸ್ ಆಗುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

“ನಾವು ಪರೀಕ್ಷಿಸಿದ ಕೆಲವು ಅಕ್ಕಿಯನ್ನ ನಾವು ಬೇಯಿಸಿದ್ದೇವೆ. ಸಾಮಾನ್ಯವಾಗಿ ಇದು ಬೇಯಿಸಿದ ನಂತರ ಸ್ವಲ್ಪ ಪೇಸ್ಟ್ ಗತೆ ಆಗುತ್ತದೆ. ನೀವು ಬೇಯಿಸಿದ ಪೇಸ್ಟ್ ಅನ್ನದಿಂದ ಚೆಂಡುಗಳನ್ನು ತಯಾರಿಸಿದಾಗ ಮತ್ತು ಅದನ್ನು ಮೇಲ್ಮೈ ಮೇಲೆ ಇಳಿಸಿದಾಗ, ಅದು ಸ್ವಲ್ಪಮಟ್ಟಿಗೆ ಪುಟಿಯುತ್ತದೆ. ಇದು ಸಾಮಾನ್ಯವಾದುದು” ಎಂದು ಮೊಹಿಯುದ್ದೀನ್ ಹೇಳುತ್ತಾರೆ.

ಇದೀಗ, ವೈಜ್ಞಾನಿಕ ಪ್ರಯೋಗಾಲಯದಲ್ಲಿ ನೆಡೆಸಿದ ಪರಿಶೀಲನೆ ಇಂದ ಸಾಬೀತಾದ ವಿಷಯವೇನೆಂದರೆ ‘ಪ್ಲ್ಯಾಸ್ಟಿಕ್’ ಅಕ್ಕಿ’ ಯಿಂದ ಸಾಮಾನ್ಯ ಜನರು ಪ್ಯಾನಿಕ್ ಆಗುವ ಯಾವುದೇ ಕಾರಣವಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

“ಮುಂದಿನ ಪರೀಕ್ಷೆಗಾಗಿ ನಾವು ರಾಜ್ಯ ಆಹಾರ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಿದ್ದೇವೆ, ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ” ಎಂದು ಮೋಹಿದುದ್ದೀನ್ ತಿಳಿಸಿದ್ದಾರೆ.