ಪುಲ್ವಾಮ ದಾಳಿ ಮಾಡಿಸಿದ್ದು ಬಿಜೆಪಿಯ ನಾಯಕರು ಎನ್ನುವ ಆಡಿಯೋ ಹಿಂದೆ ಇರುವ ಸತ್ಯ ಏನು ಗೊತ್ತಾ?

0
458

ದೇಶದಲ್ಲಿ ನಡೆದ ಪುಲ್ವಮದಾಳಿವು ಇನ್ನೂ ಸಾಕಷ್ಟು ಚರ್ಚೆ ಮತ್ತು ಅನುಮಾನಗಳನ್ನು ಸೃಷ್ಟಿಸುತ್ತಿದೆ. ಇದರ ಹಿಂದೆ ಇರುವ ಉಗ್ರರು ಈ ಕೃತ್ಯ ನಡೆಸಲು ಯಾರಾದ್ರೂ ಸಹಕಾರ ನೀಡಿದ್ದಾರೆ ಇಲ್ಲ ಯಾವುದಾದರು ರಾಜಕೀಯ ಪಕ್ಷಗಳು ಬರುವ ಲೋಕಸಭಾ ಚುನಾವಣೆಗೆ ತಮ್ಮ ಪಕ್ಷದ ಹೆಸರು ಗಳಿಸುವ ಸಲುವಾಗಿ ಉಗ್ರರನ್ನು ಚೂ ಬಿಟ್ಟಿದಾರ ಎನ್ನುವ ಅನುಮಾನಗಳು ಮೊದಲಿನಿಂದ ಹುಟ್ಟಿಕೊಂಡಿದವು. ಅದಕ್ಕೆ ಕಿಮ್ಮತ್ತು ನೀಡುವಂತ ವೀಡಿಯೊಂದನ್ನು ಫೆಬ್ರವರಿ 27ರಂದು ಅವಿ ದಾಂಡಿಯಾ ಎಂಬವರು ಪೋಸ್ಟ್ ಮಾಡಿದ್ದಾರೆ. ಅದನ್ನು ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದಾರೆ. ಇದರಲ್ಲಿ ಮುಖ್ಯವಾಗಿ ಬಿಜೆಪಿ ನಾಯಕರ ದ್ವನಿಗಳು ಕೆಳಿಬರುತ್ತಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿದೆ.

Also read: ನರೇಂದ್ರ ಮೋದಿ ಸರ್ಕಾರದಿಂದ ಕೇಂದ್ರ ನೌಕರರಿಗೆ ಗುಡ್ ನ್ಯೂಸ್: ಶೇ. 3ರಷ್ಟು ತುಟ್ಟಿ ಭತ್ಯೆ ಹೆಚ್ಚಳ..

ಏನಿದು ಫೇಸ್ಬುಕ್ ಲೈವ್?

ಹೌದು ಪುಲ್ವಾಮ ದಾಳಿಯನ್ನು ಬಿಜೆಪಿ ನಾಯಕರು ಸಂಚು ಮಾಡಿಸಿದ ದಾಳಿ ಎನ್ನುವ ವೀಡಿಯೊದಲ್ಲಿ ಅವಿ ದಾಂಡಿಯಾ ಫೇಸ್‍ ಬುಕ್ ಲೈವ್‍ ಪೋಸ್ಟ್-ನಲ್ಲಿ ಧ್ವನಿ ಮುದ್ರಿತ ತುಣುಕನ್ನು ಕೇಳಿಸಿದ್ದು. ಅದರಲ್ಲಿ ಆಘಾತಕರ ವಿಷಯಗಳು ಕೇಳಿ ಬಂದಿವೆ ಅವುಗಳು ಮುಖ್ಯವಾಗಿ ಮತ್ತು ಪ್ರಸುತ್ತ ದೇಶವಾಳುವ ನಾಯಕರ ದ್ವನಿಗಳು ಕೇಳಿಬಂದಿದ್ದು. ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಒಬ್ಬ ಅಪರಿಚಿತ ಮಹಿಳೆಯ ನಡುವಿನ ಸಂಭಾಷಣೆಯ ತುಣುಕು ಎಂದು ಹೇಳಲಾಗಿತ್ತು. ಇದನ್ನು ಕೇಳಿದ ಜನರು ಆಘಾತಕಕ್ಕೆ ಒಳಗಾಗಿದ್ದಾರೆ. ಮತ್ತು ದೇಶಾದ್ಯಂತ ರಾಷ್ಟ್ರೀಯತೆಯ ಭಾವನೆಯನ್ನು ಕೆದಕುವ ಸಲುವಾಗಿ ಯೋಧರ ಮೇಲೆ ದಾಳಿಗೆ ಬಿಜೆಪಿ ಯೋಜಿಸಿತ್ತು ಎಂದು ವಿಡಿಯೋ ಪೋಸ್ಟ್ ಮಾಡಿದ್ದ ದಾಂಡಿಯಾ ಆರೋಪಿಸಿದ್ದಾರೆ.

ರಾಜನಾಥ್ ಸಿಂಗ್ ಹಾಗೂ ಅಮಿತ್ ಶಾ ಸಂಚು?

ಪುಲ್ವಾಮ ದಾಳಿಯನ್ನು ಮಾಡಿದ್ದು ಬಿಜೆಪಿ ಮುಖಂಡರು ಎನ್ನುವ ವೀಡಿಯೊದಲ್ಲಿ ರಾಜನಾಥ್ ಸಿಂಗ್ ಹಾಗೂ ಅಮಿತ್ ಶಾ ಅವರ ಹಳೆಯ ಸಂದರ್ಶನಗಳ ಭಾಗಗಳನ್ನು ಎತ್ತಿಕೊಂಡು ಈ ನಕಲಿ ಆಡಿಯೋ ಸಿದ್ಧಪಡಿಸಲಾಗಿದೆ. ಈ ಮೂಲಕ ಭಾರತೀಯ ಸೈನಿಕರನ್ನು ಹತ್ಯೆ ಮಾಡಲು ರಾಜನಾಥ್ ಸಿಂಗ್ ಹಾಗೂ ಅಮಿತ್ ಶಾ ಸಂಚು ರೂಪಿಸಿದ್ದರು ಎಂದು ಸುಳ್ಳು ಸುದ್ದಿ ಹರಡುವ ಪ್ಲಾನ್ ನಡೆಸಲಾಗಿದೆ. ದಾಂಡಿಯಾ ಅವರ ಫೇಸ್‍ ಬುಕ್ ಲೈವ್‍ ಅನ್ನು thepost.com.pk, defence.pk, siasat.pk, zemtv.com, dailycapital.pk. ಸೇರಿದಂತೆ ಹಲವು ಪಾಕಿಸ್ತಾನಿ ವೆಬ್‍ ಸೈಟ್‍ಗಳು ಪ್ರಕಟಿಸಿತ್ತು. ಇದೆಲ್ಲ ಸುಳ್ಳು ಸುದ್ದಿ ಹರಡಿದ್ದಾರೆ ಎಂದು ತಿಳಿಸಿದೆ.

Also read: ನಮ್ಮ ಸೈನಿಕರ ಸುರಕ್ಷತೆಗೆ ಅಂತ ಕೇಂದ್ರ ಸರ್ಕಾರ ಹೊಸ ವಾಹನ ಪರಿಚಯಿಸಿದೆ; ಬಾಂಬ್ ಬಿದ್ದರೂ ಅಳುಕದ ಈ ವಾಹನದ ವಿಶೇಷತೆ ಹೇಳ್ತೀವಿ ಓದಿ!!

ಆಡಿಯೋದಲ್ಲಿ ಏನೇನ್ ಇದೆ?

ಅಮಿತ್ ಶಾ- ದೇಶದ ಜನರ ದಾರಿ ತಪ್ಪಿಸಲು ಚುನಾವಣೆ ಮುನ್ನ ಯುದ್ಧ ನಡೆಯಲೇಬೇಕು ಎನ್ನುವುದು ನಮ್ಮ ನಂಬಿಕೆ.

ಅಪರಿಚಿತ ಮಹಿಳೆ- “ಅಮಿತ್‍ ಜಿ, ನೀವು ಹಾಗೆ ಹೇಳಿದ ಮಾತ್ರಕ್ಕೆ ಅದು ಸಂಭವಿಸದು; ನಿರ್ದಿಷ್ಟ ಉದ್ದೇಶವಿಲ್ಲದೇ ಯುದ್ಧ ಮಾಡಲಾಗದು. ಉಗ್ರರು ದಾಳಿ ಮಾಡಿದರೆ ಉಗ್ರರ ದಾಳಿಯ ಬಗೆಗೆ ತನಿಖೆ ನಡೆಸಬಹುದು.

ರಾಜನಾಥ್ ಸಿಂಗ್- “ಸೈನಿಕರ ವಿಚಾರಕ್ಕೆ ಬಂದಾಗ ನಮ್ಮ ದೇಶದ ಜನರು ಕರುಣೆಯ ಭಾವನೆ ಹೊಂದಿದ್ದಾರೆ. ಅವರ ಬಗ್ಗೆ ಜನತೆಯಲ್ಲಿ ಸಾಕಷ್ಟು ಗೌರವ ವಿದೆ.

ಅಪರಿಚಿತ ಮಹಿಳೆ- “ಅದರೆ ದೇಶದ ಸೈನಿಕರನ್ನು ಬಲಿ ಕೊಡುವುದು ನಿಮ್ಮ ಉದ್ದೇಶನಾ?

ರಾಜನಾಥ್ ಸಿಂಗ್- “ಈ ಕೆಲಸಕ್ಕೆ ನಿಮ್ಮ ಒಪ್ಪಿಗೆ ಇಲ್ವ?

ಅಪರಿಚಿತ ಮಹಿಳೆ- “ಒಬ್ಬ ಅಥವಾ ಇಬ್ಬರು ಸೈನಿಕರಿಂದ ಏನೂ ಆಗದು. ನಾವು ಉರಿ ದಾಳಿ ಮಾಡಿದೆವು, ಅದರಿಂದ ಏನೂ ಪ್ರಯೋಜನ ವಿಲ್ಲ. ಚುನಾವಣೆ ಬರುತ್ತಿದೆ ಆದಕಾರಣ ದೇಶದ ಭದ್ರತೆಯ ಬಗ್ಗೆ ಗಮನಹರಿಸಿ ರಾಜಕೀಯ ಮಾಡಿ.

ರಾಜನಾಥ್ ಸಿಂಗ್- “ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಶ್ನೆಯನ್ನು ರಾಜಕೀಯಗೊಳಿಸಲೇಬೇಕು”.

ಅಪರಿಚಿತ ಮಹಿಳೆ- “ರಾಜಕೀಯಕ್ಕಾಗಿ ನೀವು ಯುದ್ಧ ಆರಂಭಿಸಲು ಇಚ್ಚಿಸಿದರೆ. ಎಲ್ಲಿ ಕಾಶ್ಮೀರ ಅಥವಾ ಕಾಶ್ಮೀರದ ಬಳಿ?

ರಾಜನಾಥ್ ಸಿಂಗ್- “ಜಮ್ಮು ಮತ್ತು ಶ್ರೀನಗರ”

ಅಪರಿಚಿತ ಮಹಿಳೆ- “ಸ್ಫೋಟ ನಡೆಸಿದರೆ ಅದರಲ್ಲಿ ಸೈನಿಕರು, ಅರೆಸೇನಾ ಪಡೆ ಸಿಬ್ಬಂದಿಗಳು, CRPF ಸೇರಿದಂತೆ 100-50 ಯೋಧರು ಸತ್ತರೆ ನಂತರ ದೇಶದ ರಾಷ್ಟ್ರೀಯತೆ ಒಗ್ಗೂಡುತ್ತದೆ.

ರಾಜನಾಥ್ ಸಿಂಗ್- “ಸೈನಿಕರ ಬಲಿಕೊಟ್ಟು ರಾಜಕೀಯ ಮಾಡ್ಬೇಕು.

ಮಹಿಳೆ- “ಅಮಿತ್‍ ಜೀ ಇದು ಹೊಲಸು ರಾಜಕೀಯ.

ಅಮಿತ್ ಶಾ- ಇದು ರಾಜಕೀಯವಲ್ಲ! ಏಕೆ ನೀವು ನನ್ನನ್ನು ನೇರವಾಗಿ ಕೇಳುತ್ತಿದ್ದೀರಿ? ಇದು ಹೇಗೆ ನಡೆಬೇಕು ಅಂತ ಕೇಳಿ.

ಮಹಿಳೆ- ನಿಮ್ಮ ಸಂಚಿನಂತೆ ಮಾಡಿದಿದ್ದರೆ ಅದನ್ನು ಬೇರೆಯರು ಮಾಡಬಹುದು. ಅದಕ್ಕೆ ನಾವು ಮಾಡುತ್ತೇವೆ. ಆದರೆ ಅದರಲ್ಲಿ ಸತ್ತ ಸೈನಿಕರ ಕುಟುಂಬದ ಗತಿ ಏನು? ಭಯ
ಹುಟ್ಟಿಸುತ್ತಿದೆ.

ಅಮಿತ್ ಶಾ- ಭೀತಿ ಹುಟ್ಟಿದರೆ ಏನು ಮಾಡಲು ಆಗದು, ಇದನ್ನು ಬಿಟ್ಟು ಅನ್ಯ ಮಾರ್ಗವಿಲ್ಲ.

ಮಹಿಳೆ- “ಅಮಿತ್ ಜೀ ಇದಕ್ಕೆ ಸಾಕಷ್ಟು ಬೇರೆ ದಾರಿಗಳು ಇವೆ. ನಿಮ್ಮಲ್ಲಿ ಇವಿಎಂ ಇದೆ. ನೀವು ಸೈನಿಕರನ್ನು ಯಾಕೆ ಬಲಿ ತೆಗೆದುಕೊಳ್ಳುತ್ತಿರ ತಿಳಿಯುತ್ತಿಲ್ಲ.

ಅಮಿತ್ ಶಾ- “ಇದು ಸಂಭವಿಸಿಯೇ ತೀರುತ್ತದೆ, ಇದನ್ನು ಹೇಗೆ ಬದಲಾಯಿಸಲು ಸಾಧ್ಯವಿಲ್ಲ.

ಮಹಿಳೆ- ನಿಮ್ಮೊಂದಿಗೆ ಹೆಚ್ಚಿನ ಮಾತುಗಳು ಬೇಡ! ಹಣ ಕಳುಹಿಸಿ ನೀವು ಹೇಳಿದಂತೆ ಸ್ಪೋಟವಾಗುತ್ತೆ.

ಈ ಎಲ್ಲ ಆಡಿಯೋಗಳು ಒಂದಕ್ಕೊಂದು ಜೋಡಿಸಿ ಮಾಡಿದ್ದು, ಅಮಿತ್ ಶಾ ಹೇಳಿಕೆಯ ಮಾತುಗಳನ್ನು ಅವರ ಭಾಷಣ ಅಥವಾ ಸಂದರ್ಶನದಿಂದ ಆರಿಸಿಕೊಳ್ಳಲಾಗಿದೆ ಎನ್ನುವುದು ಸ್ಪಷ್ಟವಾಗಿದೆ.

Also read: ಭಾರತ ಪಾಕ್ ಮೇಲೆ ದಾಳಿ ಮಾಡಿದರೆ ದೇಶದಲ್ಲಿ ಹಿಂದೂ-ಮುಸ್ಲಿಂ ಸಂಘರ್ಷಕ್ಕೆ ದಾರಿ; ದೇಶ ವಿರೋಧಿಗಳ ಪರ ಬ್ಯಾಟಿಂಗ್ ಮಾಡುತ್ತಿದ್ದಾರ ಮುಖ್ಯಮಂತ್ರಿ ಎಚ್.ಡಿ.ಕೆ??