ಅಮೆರಿಕಾ ಅಧ್ಯಕ್ಷರ ಮಗಳು ಇವಾಂಕ ಟ್ರಂಪ್ ಭಾರತಕ್ಕೆ ಬಂದಿರೋದು ಎಲ್ಲೆಲ್ಲೂ ಸುದ್ದಿ, ಇವಾಂಕ ಟ್ರಂಪ್-ರವರ ಬಗ್ಗೆ ಕುತೂಹಲ ಮಾಹಿತಿ ಇಲ್ಲಿದೆ ನೋಡಿ..

0
561

ಮುತ್ತಿನ ನಗರಿಯಲ್ಲಿ ಟ್ರಂಪ್ ಮುದ್ದಿನ ಮಗಳು ಇವಾಂಕಾ

ಇವಾಂಕಾ ಟ್ರಂಪ್.. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುದ್ದಿನ ಮಗಳು. ಈಕೆ ಡೊನಾಲ್ಡ್ ಟ್ರಂಪ್‌ಗೆ ಸಲಹೆಗಾರಳೂ ಹೌದು. ಆದ್ರೆ ಇತ್ತೀಚೆಗೆ ಮಾಧ್ಯಮಗಳಲ್ಲಷ್ಟೇ ಅಲ್ಲ, ಎತ್ತ ನೋಡಿದ್ರೂ ಇವಾಂಕಾ ಟ್ರಂಪ್‌ಗೆ ಸಂಬಂಧಿಸಿದ ಸುದ್ದಿಗಳೇ ಹರಿದಾಡ್ತಿವೆ. ಇವಾಂಕಾ ಕೇವಲ ಟ್ರಂಪ್ ಮಾತ್ರ ಅಲ್ಲ. ಮೂವರು ಮಕ್ಕಳ ತಾಯಿಯೂ ಹೌದು ಇದರ ಜತೆಗೆ ಜಗತ್ತಿನಲ್ಲಿ ಅತ್ಯಂತ ಪ್ರಭಾವಿ ಮಹಿಳೆಯರಲ್ಲಿ ಒಬ್ಬರು.

ಇವಾಂಕಾ ಟ್ರಂಪ್ 1981, ಅಕ್ಟೋಬರ್ 30 ರಂದು ಅಮೆರಿಕದ ನ್ಯೂಯಾರ್ಕ್ ನ ಮ್ಯಾನ್ಹಟ್ಟನ್ ನಲ್ಲಿ ಜನಿಸಿದರು. ಇವಾಂಕಾ ಟ್ರಂಪ್, ಡೊನಾಲ್ಡ್ ಟ್ರಂಪ್ ಮತ್ತು ಇವಾನಾ ಜೆನಿಕೊವಾ ಅವರ ಪುತ್ರಿ. 1991 ರಲ್ಲಿ ಟ್ರಂಪ್ ಜೊತೆ ಇವಾನಾ ವಿಚ್ಛೇದನ ಪಡೆದ ಮೇಲೆ ಬೋರ್ಡಿಂಗ್ ಶಾಲೆಯಲ್ಸಿ ಓದಿದರು. ಇವಾಂಕಾಗೆ ಸ್ಕೂಲ್ ಅಂದ್ರೆ ಜೈಲು ಇದ್ದಂತೆ ಅಂತ ತುಂಬಾ ಸಲ ಅವರೇ ಹೇಳಿದ್ದಾರೆ. ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಯಲ್ಲಿ ಸುಸಲಿತವಾಗಿ ಮಾತನಾಡುತ್ತಾರೆ.

ಮಾಡೆಲಿಂಗ್ ಕ್ಷೇತ್ರದ ಬಗ್ಗೆ ಸಾಕಷ್ಟು ಒಲವಿರುವ ಇವಾಂಕಾ ಓದುವಾಗಲೇ ಮಾಡೆಲಿಂಗ್ ಆರಂಭಿಸಿದ್ದರು. ಡೊನಾಲ್ಡ್ ಟ್ರಂಪ್ ಆರ್ಗನೈಸೇಶನ್ ಗೆ ಸೇರಿಕೊಳ್ಳೋವರೆಗೂ ಇವಾಂಕಾ ಮಾಡೆಲಿಂಗ್ ಮಾಡ್ತಿದ್ರು. ಆಮೇಲೆ ಇವಾಂಕಾ ಅವರೇ ವಿನ್ಯಾಸಗೊಳಿಸಿದ ಆಭರಣ ಮತ್ತು ಬಟ್ಟೆಗಳ ಜಾಹೀರಾತುಗಳ ಪ್ರಚಾರಕ್ಕೆ,ರೂಪದರ್ಶಿಯಾದ್ರು. ಇವಾಂಕಾ ಫಾರೆಸ್ಟ್ ಸಿಟಿ ಎಂಟರ್ ಪ್ರೈಸಸ್ ನಲ್ಲಿ ಕೆಲಸ ಮಾಡುತ್ತಿದ್ದರು. ನಂತ್ರ 2007 ರಲ್ಲಿ ವಜ್ರ ಮತ್ತು ಚಿನ್ನದ ವ್ಯಾಪಾರ ಶುರು ಮಾಡಿದ್ರು. ಕೆನಡಾ, ಕುವೈತ್, ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳೊಂದಿಗೆ ವ್ಯವಹಾರ ಮಾಡುವಲ್ಲಿ ಇವಾಂಕಾ ಬಲು ನಿಪುಣರು ಅನ್ನಬಹುದು.

2009ರಲ್ಲಿ ಜುರೆಡ್ ಕುಶ್ನರ್ ಎಂಬ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಪ್ರೀತಿಸಿ ವರಿಸಿದರು. ಈಗ ಈ ದಂಪತಿಗಳಿಗೆ ಮುತ್ತಿನಂಥಾ ಮೂವರು ಮಕ್ಕಳಿದ್ದಾರೆ. 2016ರಲ್ಲಿ ಅಪ್ಪನ ಗೆಲುವಿಗಾಗಿ ಹಲವು ಅತ್ಯುತ್ತಮ ಸಲಹೆಗಳನ್ನೂ ನೀಡಿ ತಂದೆಗೆ ಮತ್ತಷ್ಟು ಆಪ್ತ ಮಗಳಾದವರು ಇವಾಂಕಾ. ಟ್ರಂಪ್ ಗೆ ಇವಾಂಕಾ ಅಂದ್ರೆ ಪ್ರೀತಿ ಮಗಳಷ್ಟೇ ಅಲ್ಲ ಪ್ರಾಣ; ಅತ್ತ ಇವಾಂಕಾಗೂ ಅಪ್ಪ ಅಂದ್ರೆ ಜೀವ. ಹಲವು ಪುಸ್ತಕಗಳನ್ನೂ ಬರೆದಿರುವ ಇವಾಂಕಾ ಟಿವಿ ಕಾರ್ಯಕ್ರಮದಲ್ಲೂ ಕೆಲಸ ಮಾಡಿದ್ದಾರೆ. ಪ್ರಮುಖವಾಗಿ ದಿ ಎಪ್ರಂಟೈಸ್ 5 ನ ಕೆಲವು ಎಪಿಸೋಡ್ ಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಈಗ ಎಲ್ಲರ ಬಾಯಲ್ಲೂ ಈ ಚೆಲುವೆ ಬಗ್ಗೇನೇ ಮಾತನಾಡ್ತಿರೋದಕ್ಕೆ ಕಾರಣ, ಹೈದರಾಬಾದಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಜಾಗತಿಕ ಉದ್ಯಮಶೀಲತೆ ಶೃಂಗಸಭೆಗೆ ಆಗಮಿಸಿರೋದು. ನಿನ್ನೆ ಭಾರತದ ಹೈದರಾಬಾದಿಗೆ ಬಂದ ಇವಾಂಕಾ ಮುತ್ತಿನ ನಗರಿಯ ಮತ್ತೇರಿಸಿದ್ದಾರೆ ಅಂದ್ರೆ ತಪ್ಪಾಗಲಾರದು.