ನೀವು LIC ಯಲ್ಲಿ ಜೀವ ವಿಮಾ ಮಾಡಿಸಿದ್ದೀರಾ, ಹಾಗಾದರೆ ನಿಮ್ಮ ವಿಮಾ ಹಣ ನಷ್ಟವಾಗಬಾರದು ಎಂದರೆ ಇದನ್ನು ಖಂಡಿತ ಓದಬೇಕು…!

0
4316

ನೀವು ಭಾರತೀಯ ಜೀವ ವಿಮಾ ನಿಗಮದಲ್ಲಿ ಪಾಲಿಸಿ ಹೊಂದಿದ್ದೀರ ಹಾಗಿದ್ದರೆ ನಿಮ್ಮ ವಿಮಾ ಹಣ ನಷ್ಟವಾಗಬಾರದೆಂದರೆ ಇದನ್ನು ಓದಲೇಬೇಕು. ಈ ಸೂಚನೆಗಳನ್ನು ಖುದ್ಧು ಭಾರತೀಯ ಜೀವ ವಿಮಾ ನಿಗಮದವರೇ ನೀಡಿದ್ದಾರೆ. LIC ಯವರ ಈ ನೋಟೀಸ್ ಅಥವಾ ಸೂಚನೆಯನ್ನು ಓದಿದ ಮೇಲೆ ನಿಮಗೆ ಒಂದು ಕ್ಷಣ ಅಚ್ಚರಿ ಆಗಬಹುದು. ಅಂತಹುದೇನು ಸೂಚನೆ ನೀಡಿದೆ ಅಂತೀರಾ ಮುಂದೆ ನೋಡಿ.

ಕೆಲದಿನಗಳಿಂದ ಜನರು ಆಧಾರ್ ನಂಬರ್ ಅನ್ನು ಮೊಬೈಲ್ ನಂಬರ್-ಗೆ, ಬ್ಯಾಂಕ್ ಖಾತೆಗೆ, ಸಿಲಿಂಡರ್-ಗೆ, ಡ್ರೈವಿಂಗ್ ಲೈಸೆನ್ಸ್, ಪ್ಯಾನ್-ಕಾರ್ಡ್ ಗೆ ಹೀಗೆ ಹಲವು ಸರ್ಕಾರದ ಗುರುತಿನ ಚೀಟಿಗಳಿಗೆ ಲಿಂಕ್ ಮಾಡುವುದು ಸರ್ಕಾರ ಕಡ್ಡಾಯ ಮಾಡಿತ್ತು, ಸರ್ಕಾರದ ನಿಯಮವನ್ನು ಬಂಡವಾಳವಾಗಿ ಇಟ್ಟುಕೊಂಡು ಖದೀಮರು, ಎಷ್ಟೋ ಗ್ರಾಹಕರಿಂದ ಅವರ ಆಧಾರ್ ನಂಬರ್, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಮೊಬೈಲ್ ನಂಬರ್ ಪಡೆದು ಅಮಾಯಕ ಜನರ ಹಣ ಲಪಟಾಯಿಸಿತ್ತು ಈಗ ಇದಕ್ಕೆ ಇನ್ನೊಂದು ಸೇರ್ಪಡೆಯೇ LIC ಅಥವಾ ವಿಮೆ ಖಾತೆಗೆ ಆಧಾರ್ ನಂಬರ್ ಸೇರ್ಪಡೆ ಗೊಳಿಸುವುದು.

ಅರೆ ಇದರಲ್ಲೇನು ತಪ್ಪಿದೆ, ಇದರಿಂದ ಪಾಲಿಸಿದಾರರ ಹಣ ಸುರಕ್ಷಿತವಾಗಿರುತ್ತದೆ ಹಾಗು ನಕಲಿ ಖಾತೆಗೆ ಬ್ರೇಕ್ ಬೀಳುತ್ತದೆ ಅಂತೀರಾ, ಹೌದು, ನೀವು ಹೇಳುತ್ತಿರುವುದು ಸರಿಯಾಗಿದೆ, ಆದರೆ ಇದನ್ನು ಮಾಡಿರುವುದು LIC ಯವರಲ್ಲ, ಖದೀಮರು ಅಥವಾ ಹ್ಯಾಕರ್ಗಳು, ಇವರು LIC ಯವರ ಹೆಸರಿನಲ್ಲಿ ಅವರ ಲೋಗೋ ಬಳಸಿ ನಿಮ್ಮ ಮೊಬೈಲ್ ನಂಬರ್-ಗೆ ಸಂದೇಶವನ್ನು ಕಳಿಸಿ ಅದರಲ್ಲಿ ಇರುವ ನಂಬರಿಗೆ ನಿಮ್ಮ ಪಾಲಿಸಿ ನಂಬರ್, ಮೊಬೈಲ್ ನಂಬರ್ ಹಾಗು ಇತರೆ ವಿವರ ಕಳುಹಿಸಲು ತಿಳಿಸುತ್ತಾರೆ, ಒಂದು ವೇಳೆ ಅವರು ಹೇಳಿದ ಹಾಗೆ ಮಾಡಿದರೆ ನೀವು ಕಷ್ಟಪಟ್ಟು ದುಡಿದು, ನಿಮ್ಮ ಅಥವಾ ನಿಮ್ಮ ಮನೆಯವರ ಭವಿಷ್ಯಕ್ಕಾಗಿ ಎಂದು ಕೂಡಿಟ್ಟ ಹಣ ಮುಳುಗೋದಂತು ನಿಶ್ಚಿತ.

ಈ ಬಗ್ಗೆ ಭಾರತೀಯ ಜೀವ ವಿಮಾ ನಿಗಮ ಸೂಚನಾ ಫಲಕದ ಮೂಲಕ ತನ್ನ ಗ್ರಾಹಕರಿಗೆ ಸ್ಪಷ್ಟವಾಗಿ ಹೇಳಿದೆ. ಒಂದು ವೇಳೆ ಆಧಾರ್ ಲಿಂಕ್ ಮಾಡುವ ಅವಶ್ಯಕತೆ ಬಂದರೆ ಅದು ನಮ್ಮ ಕಚೇರಿಗಳಲ್ಲಿ ಅಥವಾ ನಮ್ಮ ಅಫೀಷಿಯಲ್ ವೆಬ್-ಸೈಟ್ ನಲ್ಲಿ ಪ್ರಕಟಿಸುತ್ತೇವೆ ಎಂದು LIC ಯವರು ಹೇಳಿದ್ದಾರೆ.

ಒಟ್ಟಿನಲ್ಲಿ ನಿಮಗೆ ಇಂತಹ ಯಾವುದೇ ಸಂದೇಶ ಅಥವಾ ಕರೆ ಬಂದರೆ ಅದರ ಬಗ್ಗೆ ಒಂದು ಬಾರಿ ಯೋಚಿಸುವುದು ಒಳ್ಳೆಯದು…!