44 ನಕಲಿ ಖಾತೆಯಲ್ಲಿ ೧೦೦ ಕೋಟಿ: ಎಕ್ಸಿಸ್ ಬ್ಯಾಂಕ್ ನಲ್ಲಿ ಪತ್ತೆ

0
628

ದೆಹಲಿಯ ಚಾಂದಿನಿ ಚೌಕ್ ನಲ್ಲಿರುವ ಎಕ್ಸಿಸ್ ಬ್ಯಾಂಕ್ ಮೇಲೆ ಶುಕ್ರವಾರ ದಾಳಿ ಮಾಡಿದ ತೆರಿಗೆ ಇಲಾಖೆ ಅಧಿಕಾರಿಗಳು ೪೪ ನಕಲಿ ಖಾತೆಗಳಲ್ಲಿ ಹಳೆಯ ೫೦೦ ಮತ್ತು ೧೦೦೦ ಮುಖಬೆಲೆಯ ೧೦೦ ಕೋಟಿ ಜಮಾ ಆಗಿರುವುದನ್ನು ಪತ್ರೆಹಚ್ಚಿದ್ದಾರೆ.

ವಿಡಿಯೋ ನೋಡಿ ಗೊತ್ತಾಗುತ್ತೆ

ಕೃಪೆ : NDTV

ಪ್ರಧಾನಿ ನರೇಂದ್ರ ಮೋದಿ ನವೆಂಬರ್ ೮ ರಂದು ನೋಟ್ ಬ್ಯಾನ್ ಘೋಷಿಸಿದ ನಂತರ ಎಕ್ಸಿಸ್ ಬ್ಯಾಂಕ್ ನ ಈ ಶಾಖೆಯಲ್ಲಿ ಈ ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ೪೪ ನಕಲಿ ಖಾತೆಯಲ್ಲಿ ೧೦೦ ಕೋಟಿ ಜಮೆ ಆಗಿದ್ದರೆ, ಇತರೆ ಖಾತೆಗಳಲ್ಲಿ ನ.೮ರ ನಂತರ ಸುಮಾರು ೪೫೦ ಕೋಟಿ ಒಟ್ಟಾರೆ ಜಮೆ ಆಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

೪೪ ನಕಲಿ ಖಾತೆಗಳನ್ನು ತೆರೆಯಲು ನಕಲಿ ದಾಖಲೆ ಒದಗಿಸಿರುವ ಶಂಕೆ ಇದ್ದು, ಜಮೆ ಆಗಿದ್ದ ೧೦೦ ಕೋಟಿಯನ್ನು ಚಿನ್ನ ಖರೀದಿಗೆ ಬಳಕೆ ಅಗಿರಬಹುದು ಎಂದು ಶಂಕಿಸಲಾಗಿದೆ. ದೆಹಲಿಯ ಎಕ್ಸಿಸ್ ಬ್ಯಾಂಕ್ ಮೇಲೆ ನಡೆದ ಎರಡನೇ ದಾಳಿ ಇದಾಗಿದ್ದು, ಇದಕ್ಕೂ ಮುನ್ನ ಪೊಲಿಸರು ಇಬ್ಬರನ್ನು ಬಂಧಿಸಿ ೩.೫ ಕೋಟಿ ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ದರು.