ಬೆಂಗಳೂರಿನ ಈ ಮಾರುಕಟ್ಟೆಯಲ್ಲಿ ಕದ್ದ ಮೊಬೈಲ್-ಗಳ ವ್ಯಾಪಾರ ಜೋರ್ ಅಂತೆ; ಇಲ್ಲಿ ಸಿಗುವ ಮೊಬೈಲ್ ಖರೀದಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿಯಂತೆ.

0
546

ಎಲ್ಲಿನೋಡಿದರು ಸ್ಮಾರ್ಟ್ ಫೋನ್- ಗಳದೇ ಹವಾ ಆದಕಾರಣ ಪ್ರತಿಯೊಬ್ಬರೂ ಮೊಬೈಲ್ ಕೊಳ್ಳಲೇಬೇಕು ಎನ್ನುವ ಆತುರದಲ್ಲಿರುತ್ತಾರೆ. ಹಾಗಂತ ಮೊಬೈಲ್ ಫೋನ್ ಹೊಂದಿರುವ ಎಲ್ಲರ ಹತ್ತಿರ ವಿರುವ ಮೊಬೈಲ್-ಗಳು ಶೋರೂಂ ನಿಂದ ತಂದ ಮೊಬೈಲ್ ಅಂತ ತಿಳಿಯಬೇಡಿ. ಕಳ್ಳತನ ಮಾಡಿದ ಮೊಬೈಲ್ -ಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸರಾಗವಾಗಿ ಸಿಗುತ್ತೇವೆ. ಹೌದು ಬೆಂಗಳೂರಿನಲ್ಲಿ ಮೊಬೈಲ್ ಕಳ್ಳತನದ ಪ್ರಕರಣಗಳು ಹೆಚ್ಚುತ್ತಲೇ ಇವೆ. ನಗರದಲ್ಲಿ ದುಬಾರಿ ಸ್ಮಾರ್ಟ್‌ಫೋನ್‌ಗಳ ಕಳ್ಳತನ ನಡೆಯುತ್ತಲೆ ಇದ್ದು, ಮೊಬೈಲ್ ಖದೀಮರು ಕದ್ದ ಮೊಬೈಲ್ ಫೋನ್‌ಗಳ IMEI ನಂಬರಗಳನ್ನು ಬದಲಿಸಿ ಮರು ಮಾರಾಟ ಮಾಡುತ್ತಾರೆ. ಅದು ಎಲ್ಲಿ ಗೊತ್ತಾ?

ಎಲ್ಲಿದೆ ಚೋರ್ ಮೊಬೈಲ್ ಮಾರುಕಟ್ಟೆ?

ಬೇರೆ ಬೇರೆ ಸ್ಥಳಗಳಲ್ಲಿ ಕದ್ದ ಸ್ಮಾರ್ಟ್‌ಫೋನ್‌ಗಳನ್ನು ಒಂದು ಕಡೆ ತಂದು ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಕೆ ಆರ್ ಮಾರುಕಟ್ಟೆಯಲ್ಲಿ ಮೊಬೈಲ್ ಮಾರಟಕ್ಕೆಂದೇ ಪ್ರತ್ಯಕ ಜಾಗವನ್ನು ಮಾಡಿಕೊಂಡಿರುವ ಖದೀಮರು ಸ್ಮಾರ್ಟ್‌ಫೋನ್‌ IMEI ನಂಬರಗಳನ್ನು ಬದಲಿಸಿ ಇಲ್ಲವೇ ತೆಗೆದಿರುತ್ತಾರೆ. ಮತ್ತು ಕದ್ದ ಮೊಬೈಲ್‌ಗಳಲ್ಲಿ IMEI ನಂಬರನ್ನು ಮತ್ತು ಕಲವು ಬಿಡಿಭಾಗಗಳನ್ನು ಅದಲು ಬದಲು ಮಾಡಿ ಮಾರಲು ಮುಂದಾಗುತ್ತಾರೆ ಎಂದು ಹೇಳಲಾಗುತ್ತಿದೆ.

ಮೊಬೈಲ್ ಕಳ್ಳರ ದೊಡ್ಡ ಜಾಲವಿದ್ದು ಬೇರೆ, ಬೇರೆ ಸ್ಥಳಗಳಲ್ಲಿ ಮೊಬೈಲ್‌ಗಳನ್ನು ಖದೀಯುತ್ತಾರೆ, ಕದ್ದ ಸ್ಮಾರ್ಟ್‌ಫೋನ್‌ಗಳನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸಿ ಅವುಗಳ IMEI ನಂಬರಗಳನ್ನು ನಾಶಪಡಿಸುತ್ತಾರೆ. ಮತ್ತು ಪ್ರಮುಖ ಬ್ಯ್ರಾಂಡೆಡ್ ಮೊಬೈಲ್‌ಗಳಿಗೆ ಇನ್ಯಾವುದೊ ಕಂಪನಿಯ ಮದರ್ ಬೋರ್ಡ್‌ನ್ನು ಜೊಡಿಸುವುದು, ಕಳಪೆ ಗುಣಮಟ್ಟದ ಚಾರ್ಜರ್ ನೀಡುವುದು ಇಂತಹ ಬದಲಾವಣೆಗಳನ್ನು ಮಾಡಿ ಮಾರಲು ಮುಂದಾಗುತ್ತಾರೆ.

ಹಗಲು-ರಾತ್ರಿ ಕಳ್ಳತನ

ಖದೀಮರು ಮೊಬೈಲ್ ಕಳ್ಳತನವನ್ನು ರಾತ್ರಿ ಮತ್ತು ಹಗಲು ಮಾಡುತ್ತಿದ್ದು, ರಾತ್ರಿ ರಸ್ತೆಯಲ್ಲಿ ಒಬ್ಬರೇ ಹೋಗುತ್ತಿರುವವರೇ ಇವರ ಟಾರ್ಗೆಟ್ ಅವರನ್ನು ಹೆದರಿಸಿ ಅವರ ದುಬಾರಿ ಸ್ಮಾರ್ಟ್‌ಫೋನ್ ತೆಗೆದುಕೊಂಡು ಅಲ್ಲಿಂದ ಪರಾರಿಯಾಗುವುದು. ಇನ್ನೂ ಹಗಲಲ್ಲಿ ಸಹ ಕಳ್ಳರು ತಮ್ಮ ಕೈಚಳಕ ತೊರಿಸುತ್ತಿದ್ದು, ಹಗಲಲ್ಲಿ ಫೋನ್‌ನಲ್ಲಿ ಮಾತನಾಡುತ್ತಾ ಹೋಗುತ್ತಿರುವವರ ಪೋನ್‌ ಕಿತ್ತುಕೊಂಡು ಹೋಗುವುದು, ಜನನಿಬಿಡ ಸ್ಥಳಾದ ಬಸ್, ಟ್ರೈನ್, ಮಾರ್ಕೆಟ್‌ಗಳಲ್ಲಿ ಪೋನ್ ಕಳ್ಳತನ ಮಾಡಿ ಅಲ್ಲಿಂದ ಕಾಲ್ಕೀಳುತ್ತಾರೆ.

ಅಪಾಯಕಾರಿ ಚಾರ್ಜರ್!

ಕದ್ದ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಮಾರುವ ವೇಳೆ ಅವುಗಳಿಗೆ ಇನ್ಯಾವುದೋ ಚಾರ್ಜರ್ ನೀಡುತ್ತಾರೆ ಅವು ಸ್ಪೋಟ್‌ದಂತಹ ಅಪಾಯ ತರುವ ಸಾಧ್ಯತೆ ಇರುತ್ತವೆ. ಇದರೊಂದಿಗೆ ಆ ಪೋನ್‌ ಒಳಗಡೆ ಕೆಲವು ಭಾಗಗಳನ್ನು ಬದಲಿಸಿ ಇನ್ಯಾವುದೊ ಬೇರೆ ಕಂಪನಿಯ ಬಿಡಿಭಾಗಗಳನ್ನು ಜೋಡಿಸಿರುತ್ತಾರೆ ಎನ್ನಲಾಗುತ್ತಿದೆ.

ನಕಲಿ ದಾಖಲೆ;

ಖದೀಮರು ಕದ್ದ ಪೋನ್‌ಗಳನ್ನು ಮಾರಟ ಮಾಡುವಾಗ ಅವುಗಳಿಗೆ ನಕಲಿ ದಾಖಲೆಗಳನ್ನು ರೆಡಿ ಮಾಡಿಕೊಂಡಿರುತ್ತಾರೆ. ಆದರೆ ಅವರಲ್ಲಿ ಬಹುತೇಕರು ಯಾವ ದಾಖಲೆಗಳಿಲ್ಲದೇ ಪೋನ್‌ಗಳನ್ನು ಮಾರುತ್ತಿರುವುದು ತಿಳಿದುಬಂದಿದೆ.

Also read: ನೆಟ್ ವರ್ಕ್ ಬಳಸುವ ಮುನ್ನ ಜಾಗ್ರತೆ ಮಾಹಿತಿ