ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕಲ್ಯಾಣ್ ಜ್ಯೂವೆಲ್ಲರ್ಸ್ ನಕಲಿ ಚಿನ್ನ ಮಾರಲಾಗುತ್ತಿದೆ ಎಂಬ ವಿಡಿಯೋ ಶುದ್ಧ ಸುಳ್ಳು, ನಿಜಾಂಶ ತಿಳಿದುಕೊಳ್ಳಿ!!

0
555

ಕಲ್ಯಾಣ್ ಜ್ಯೂವೆಲ್ಲರ್ಸ್ ಸಂಸ್ಥೆಯ ಕುವೈತ್ ಮಳಿಗೆಯಲ್ಲಿ ಚಿಲ್ಲರೆ ವ್ಯಾಪಾರದ ಚಿನ್ನದ ಗುಣಮಟ್ಟವನ್ನು ಪ್ರಶ್ನಿಸುವ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ, ಈ ವಿಡಿಯೋ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದ ತೀರ ಮುಜುಗರಕ್ಕೆ ಒಳಗಾಗಿರುವ ಸಂಸ್ಥೆ, ಇದೆಲ್ಲ ಸುಳ್ಳು ಎನ್ನುತ್ತಿದ್ದಾರೆ, ಏನಿದೆ ವೀಡಿಯೋದಲ್ಲಿ, ಕಲ್ಯಾಣ್ ಸಂಸ್ಥೆ ಇದರ ಬಗ್ಗೆ ಏನು ಹೇಳುತ್ತಿದ್ದಾರೆ, ನೀವೇ ನೋಡಿ.

ಕಳೆದ ಎರಡು ದಿನಗಳಿಂದ, ಕಲ್ಯಾಣ್ ಸಂಸ್ಥೆಯ ಕುವೈತ್ ಮಳಿಗೆಯಲ್ಲಿ ಚಿಲ್ಲರೆ ವ್ಯಾಪಾರದ ಚಿನ್ನದ ಗುಣಮಟ್ಟವನ್ನು ಪ್ರಶ್ನಿಸುವ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಇದರಲ್ಲಿ ಚಿನ್ನ ಎಂದು ಸೂಚಿಸುತ್ತಿದೆ, ವೀಡಿಯೊದಲ್ಲಿ ಲೋಹದ ತಂತಿಗಳನ್ನು ಟೊಳ್ಳಾದ ಚಿನ್ನದ ಖಡ್ಗಗಳಲ್ಲಿ ಮರೆಮಾಡಿದ ಆಭರಣಗಳನ್ನು ಪರೀಕ್ಷಿಸುವ ಅಧಿಕಾರಿಗಳನ್ನು ತೋರಿಸುತ್ತಿವೆ ಈ ಕುರಿತು ಕಲ್ಯಾಣ್ ಸಂಸ್ಥೆಯ ಮಾಲೀಕರನ್ನು ಪ್ರಶ್ನಿಸಿದಾಗ ಅವರು ಹೀಗೆ ಹೇಳಿದರು, ಗುಣಮಟ್ಟ ನಿಯಂತ್ರಕ ಅಧಿಕಾರಿಗಳಿಂದ ಪ್ರತಿನಿಧಿಗಳು ಆಗಾಗ ವ್ಯಾಪಾರಿಗಳ ಗುಣಮಟ್ಟವನ್ನು ಮೌಲ್ಯೀಕರಿಸಲು ಆಭರಣ ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ನಮ್ಮ ಶೋ-ರೂಮ್ ನಲ್ಲಿ ನಕಲಿ ಚಿನ್ನ-ಸಿಗುತ್ತಿದೆ ಎಂಬುದನ್ನು ತೋರಿಸಿರುವುದು ಬರಿ ಸುಳ್ಳು, ಇದು ಸಂಸ್ಥೆಯ ಹೆಸರು ಕೆಡಿಸಲು ಮಾಡಿರುವ ಹುನ್ನಾರ ಅಷ್ಟೇ, ತಮ್ಮ ಶೋರೂಮ್ ಆಯ್ಕೆ ಮತ್ತು ಚಿನ್ನದ ಮಾರಾಟದಲ್ಲಿ ಅತ್ಯುನ್ನತ ಮಾನದಂಡ ಗುಣಮಟ್ಟ ಮತ್ತು ನೈತಿಕತೆಯನ್ನು ಹೊಂದಿದೆ ಎಂದು ಸಂಸ್ಥೆಯ ಮುಖ್ಯಸ್ಥ ಕಲ್ಯಾಣರಾಮನ್ ಹೇಳಿದರು.

ಭಾರತದಲ್ಲಿ ಬ್ಯೂರೊ ಆಫ್ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ಸ್ (BIS) ಮತ್ತು ಮಧ್ಯಪ್ರಾಚ್ಯದಲ್ಲಿ ಸಂಬಂಧಿಸಿದ ಸರ್ಕಾರಿ ಪ್ರಾಧಿಕಾರವು ನಮ್ಮ ಶೋರೂಮ್-ಗಳಲ್ಲಿನ ಎಲ್ಲಾ ವಸ್ತುಗಳನ್ನು ಸರಿಯಾಗಿ ಪರೀಕ್ಷಿಸಿ ಮತ್ತು ಶುದ್ಧತೆಗಾಗಿ ಪ್ರಮಾಣೀಕರಿಸಿದೆ. ಪ್ರತಿಯೊಂದು ಆಭರಣವು ಸೆಟ್ ಮಾನದಂಡಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಮ್ಮ ಪ್ರಕ್ರಿಯೆಗಳನ್ನು ನಿರ್ಮಿಸಲಾಗಿದೆ ಎಂದು ಕಲ್ಯಾಣ್ ಸಂಸ್ಥೆ ಹೇಳಿದೆ.

ನಮ್ಮ ಶೋರೂಮ್-ಗಳಲ್ಲಿ ಮಾರಾಟವಾದ ಪ್ರತಿ ಆಭರಣಗಳು ಸರ್ಕಾರದ ಗುಣಮಟ್ಟ ನಿಯಂತ್ರಣ ಇಲಾಖೆಯ ವಿಶಿಷ್ಟ ಲಕ್ಷಣಕ್ಕೆ ಅನುಗುಣವಾಗಿರುತ್ತವೆ. ಬ್ರಾಂಡ್ ಅನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ ಇಂತಹ ವೀಡಿಯೋಗಳನ್ನು ನಾವು ಖಂಡಿಸುತ್ತೇವೆ. ನಮ್ಮದು 108 ವರ್ಷ ಇತಿಹಾಸ ಮತ್ತು ಗ್ರಾಹಕ ಸ್ನೇಹಿ ಬ್ರಾಂಡ್ ಅದಲ್ಲದೆ ವೀಡಿಯೊದಲ್ಲಿ ಎಲ್ಲಿಯೂ ಸಂಸ್ಥೆಯ ಹೆಸರು ಇಲ್ಲ, ಇದು ಒಂದು ವೇಳೆ ಸತ್ಯವಾಗಿದ್ದರೆ ಈಗಾಗಲೇ UAE ಯಲ್ಲಿ ನಮ್ಮ ಮಳಿಗೆಗಳು ಮುಚ್ಚಲ್ಪಡುತ್ತಿದ್ದವು ಮತ್ತು ಅದರ ಮಾಲೀಕರು ಜೈಲುಸೇರುತ್ತಿದರು ಎಂದರು.

ಈ ತರಹದ ವೀಡಿಯೋದಿಂದ ಜನರು ವಿಚಾಲಿತರಾಗುವುದು ಸಹಜ, ಅವರು ಹೇಳುವ ಪ್ರಕಾರ ಈ ವಿಡಿಯೋ ಕಲ್ಯಾಣ್ ಜ್ಯೂವೆಲ್ಲರ್ಸ್ ಸಂಸ್ಥೆಯದಲ್ಲ, ಇನ್ನ್ಯಾವುದೋ ಮಳಿಗೆಯ ವಿಡಿಯೋಗೆ ನಮ್ಮ ಸಂಸ್ಥೆಯ ಹೆಸರು ಸೇರಿಸಿ ನಮ್ಮ ಹೆಸರಿಗೆ ಮಸಿ ಬಳಿಯುವ ಪಿತೂರಿ ಮಾಡಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ ಕಲ್ಯಾಣ್ ಜ್ಯೂವೆಲ್ಲರ್ಸ್-ನ ಪ್ರತಿನಿಧಿಗಳು. ಇದು ಕೇವಲ ಒಂದು ಪಿತೂರಿ ಅಷ್ಟೇ ಎಂದ ಕಲ್ಯಾಣ್-ರಾಮನ್, ಯಾವಾಗ ಬೇಕಾದರು ಸಂಸ್ಥೆಯ ಯಾವುದೇ ಮಳಿಗೆಯಲ್ಲಿ ನಾವು ಪರೀಕ್ಷೆಗೆ ಸಿದ್ದ ಎಂದು ಸವಾಲ್ ಹಾಕಿದ್ದಾರೆ.