ಖೋಟಾ ನೋಟುಗಳ ಹಾವಳಿ ಜಾಸ್ತಿಯಾಗ್ತಿದೆ, ಖೋಟಾ ನೋಟನ್ನು ಪತ್ತೆ ಹಚ್ಚುವುದು ಹೇಗೆ ಅಂತ ಹೇಳ್ತೀವಿ ನೋಡಿ!!

0
1509

ಕಪ್ಪು ಹಣವನ್ನು ದೇಶದಿಂದ ಹೊರಗಿಡಲು, ಖೋಟಾ ನೋಟುಗಳ ಹಾವಳಿ ನಿಲ್ಲಿಸಿ ಬ್ರಷ್ಟಚಾರಿಗಳನ್ನು ಮಟ್ಟ ಹಾಕಲು 2016 ನ.8 ರಂದು, ಪ್ರಧಾನಿ ನರೇಂದ್ರ ಮೋದಿಯವರು ಹಳೆಯ 500 ರೂ. ಮತ್ತು 1000 ರೂ. ಮುಖ ಬೆಳೆಯ ನೋಟುಗಳನ್ನು ನಿಷೇಧಿಸಿ ಹೊಸ ನೋಟುಗಳನ್ನು ಪರಿಚಯಿಸಿದ್ದರು. ಆದರೆ, ಮತ್ತೆ ಖೋಟಾ ನೋಟುಗಳು ಶುರುವಾಗಿವೆ ಅದು ಬೇರೆಲ್ಲೂ ಅಲ್ಲ ನಮ್ಮ ಕರ್ನಾಟಕದಲ್ಲಿಯೇ.

ಹೌದು, ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ಖೋಟಾ ನೋಟುಗಳು ಪತ್ತೆಯಾಗಿವೆ. ಆದರೆ, ಸಂತಸದ ವಿಷಯವೇನೆಂದರೆ ಶಿವಮೊಗ್ಗ ಜಿಲ್ಲೆಯ ಎಸ್ ಪಿ ನೇತೃತ್ವದ ಕರ್ನಾಟಕ ಪೊಲೀಸರು ಈ ಖ್ಹೋತ ನೋಟುಗಳನ್ನು ವಿಲೇವಾರಿ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಜಿಲ್ಲಾ ಎಸ್ ಪಿ ಅಭಿನವ್ ಖರೆ ಅವರು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗು ಈ ಸಮಸ್ಯೆಯನ್ನು ತಳದಿಂದ ಮಟ್ಟ ಹಾಕಲು ಪಶ್ಚಿಮ ಬಂಗಾಳಕ್ಕೆ ವಿಶೇಷ ತನದವನ್ನು ಕಳಿಸುತ್ತಿದ್ದಾರೆ. ಜನರಿಗೆ ಹೊಸ ನೋವುಗಳ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಈ ನೋಟುಗಳಲ್ಲಿ ಅಸಲಿ ಯಾವುದು ನಕಲಿ ಯಾವುದು ಎಂದು ಪತ್ತೆ ಹಚ್ಚುವುದು ತುಂಬಾ ಸುಲಭ ಎಂದಿದ್ದಾರೆ.

ಎಸ್ಪಿ ಅಭಿನವ್ ಖರೆ ಅವರು ಖೋಟಾ ನೋಟುಗಳನ್ನು ಹೇಗೆ ಪತ್ತೆ ಹಚ್ಚಬಹುದು ಎಂದು ಕೆಲವು ಸಲೆಹೆಗಳನ್ನು ಸಹ ನೀಡಿದ್ದಾರೆ. ಫೋಟೋ ಕಾಪಿ ನೋಟ್‍ಗಳು ಅಸಲಿ ನೋಟಿಗಿಂತ ಸ್ವಲ್ಪ ದಪ್ಪವಾಗಿರುತ್ತವೆ. ಅಸಲಿ ನೋಟ್ ಮುಟ್ಟಿದರೆ ಆಗುವ ಅನುಭವ ಖೋಟಾ ನೋಟನ್ನು ಮುಟ್ಟುವುದರಿಂದ ಸಿಗುವುದಿಲ್ಲ.

ನಿಮ್ಮಲ್ಲಿರುವ ನೋಟು ಅಸಲಿಯೇ ಅಥವಾ ನಕಲಿ ಎಂದು ತಿಳಿಯಲು ಹೀಗೆ ಮಾಡಿ. ನಿಮ್ಮಲಿರುವ ನೋಟು ನಕಲಿಯಾಗಿದ್ದರೆ ಅದರ ಮೇಲಿನ ಚಿಹ್ನೆ ಹಾಗೂ ಅಕ್ಷರಗಳು ಅಸಲಿ ನೋಟಿನಷ್ಟು ಸ್ಪಷ್ಟತೆ ಇರುವುದಿಲ್ಲ. ಅಸಲಿ ನೋಟ್ ಮೇಲಿನ ಮಾರ್ಕ್ ನೇರವಾಗಿ ನೋಡಿದರೆ ಹಸಿರು ಬಣ್ಣದಿಂದ ಕೂಡಿರುತ್ತದೆ ಅದೇ ನೀವು ಶೇ. 40 ರಷ್ಟು ಬಾಗಿಸಿ ಅಥವಾ ಇಳಿಮುಖ ಮಾಡಿ ನೋಡಿದರೆ ನೀಲಿ ಬಣ್ಣವಾಗಿ ಮಿನುಗುತ್ತದೆ, ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಈಗ ಹೊರಬಂದಿರುವ ಹೊಸ ನೋಟುಗಳಲ್ಲಿ ಅಸಲಿ ಯಾವುದು ನಕಲಿ ಯಾವುದು ಎಂದು ತಿಳಿಯುವುದು ತುಂಬಾ ಸುಲಭ. ನೀವು ಕೈಯಲ್ಲಿ ಹಿಡಿದ ತಕ್ಷಣ ಅಸಲಿ ನೋಟು ಹಿಡಿದಾಗ ಆಗುವ ಅನುಭವ ನಕಲಿ ನೋಟಿನಲ್ಲಿ ಆಗುವುದಿಲ್ಲ. ಇದರಿಂದ ಕೇವಲ ಒಂದು ಕ್ಷಣದಲ್ಲಿ ನೀವು ಇದನ್ನು ಕಂಡುಹಿಡಿಯಬಹುದಾಗಿದೆ.