ವಾಸ್ತು ಹೇಳುವ ಜ್ಯೋತಿಷಿಗಳನ್ನು, ಕರೆಸುವ ಮುನ್ನ ಎಚ್ಚರ; ಆಪ್ತಮಿತ್ರ ಸಿನಿಮಾ ಕತೆ ಕಥೆಕಟ್ಟಿ ಯುವತಿಯ ಹೆಸರಲ್ಲಿ 30 ಲಕ್ಷ ವಂಚನೆ ಮಾಡಿದ ಸ್ವಾಮೀಜಿ..

0
128

ಜನರು ಎಷ್ಟೇ ವಿಜ್ಞಾನಿಕವಾಗಿ ಬೆಳೆದರು ಜ್ಯೋತಿಷರ, ಸ್ವಾಮಿಜಿಗಳ ಮೊರೆ ಹೋಗುವುದು ತಪ್ಪಿಲ್ಲ. ಇದರಿಂದ ಅದೇಷ್ಟು ಪ್ರಯೋಜನವಾಗುತ್ತೆ ಎನ್ನುವುದು ಅವರವರ ಭಾವಕ್ಕೆ ಬಿಟ್ಟಿದ್ದು, ಆದರೆ ಜ್ಯೋತಿಷಿಗಳಿಂದ ಆಗುತ್ತಿರುವ ಮೋಸಗಳಂತೂ ಹೆಚ್ಚಾಗುತ್ತಿವೆ, ಇದರಿಂದ ಲಕ್ಷಾಂತರ ಹಣ ಕಳೆದುಕೊಳ್ಳುವುದರ ಜೊತೆಗೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡವರು ಹೆಚ್ಚಿದ್ದಾರೆ. ಇಂತಹದೆ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಜ್ಯೋತಿಷಿಯೊಬ್ಬ ಸಿನಿಮಾ ಕತೆ ಹೇಳಿ ಲಕ್ಷಾಂತರ ಹಣ ಗುಳುಂ ಮಾಡಿದ್ದಾನೆ.

ಏನಿದು ಘಟನೆ?

ಸ್ವಾಮೀಜಿಯೋರ್ವ ಯುವತಿಯೊಬ್ಬಳಿಗೆ ನಾವಿಬ್ಬರು ಕಳೆದ ಮೂರು ಜನ್ಮದಿಂದ ಪತಿ, ಪತ್ನಿಯಾಗಿದ್ದವರು ಎಂದು ಪೂರ್ವ ಜನ್ಮದ ಕಥೆಕಟ್ಟಿ ನಂಬಿಸಿ, ಆಕೆಯ ಹೆಸರಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಹಣವನ್ನು ಬ್ಯಾಂಕುಗಳಲ್ಲಿ ಲೋನ್ ಪಡೆದು ಮೋಸ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ವೆಂಕಟ ಕೃಷ್ಣಾಚಾರ್ಯ(28) ಬಂಧಿತ ಸ್ವಾಮೀಜಿ. ವಾಸ್ತುದೋಷ ನಿವಾರಣೆ ಮಾಡುತ್ತೇನೆ ಎಂದು ಬೆಂಗಳೂರಿನ ವಿಜಯನಗರದ ನಿವಾಸಿ ಚಾರ್ಟೆಡ್ ಅಕೌಂಟೆಂಟ್ ಮನೆಗೆ ಬಂದ ಸ್ವಾಮೀಜಿ ಮೋಸ ಮಾಡಿದ್ದಾನೆ. ನಿಮ್ಮ ಮನೆಯಲ್ಲಿ ವಾಸ್ತು ದೋಷವಿದೆ ಎಂದು ಸ್ವಾಮೀಜಿ ಮನೆಯವರಿಗೆ ಪರಿಯಚವಾಗಿದ್ದಾನೆ.

@publictv.in

ದೋಷ ನಿವಾರಣೆ ಮಾಡುತ್ತೇನೆ ಎಂದು ಮನೆಯಲ್ಲಿ ಹೋಮ ಹವನ ಮಾಡಿದ್ದಾನೆ. ನಂತರ ಮನೆಯಲ್ಲಿದ್ದ ಯುವತಿಯೊಂದಿಗೆ ಮೊಬೈಲ್-ನಲ್ಲಿ ಚಾಟಿಂಗ್ ಮಾಡಿ, ಕಳೆದ ಜನ್ಮದ ಕಥೆ ಕಟ್ಟಿ ನಂಬಿಸಿ ಪಂಗನಾಮ ಹಾಕಿದ್ದಾನೆ. ಇವನು ಯುವತಿಗೆ ಆಪ್ತಮಿತ್ರ ಸಿನಿಮಾದಲ್ಲಿರುವ ಸನ್ನಿವೇಶದ ನಾಗವಲ್ಲಿ ಪಾತ್ರದ ರೀತಿಯಲ್ಲಿ ಕತೆಯನ್ನು ಹೇಳಿಕೊಂಡು ಕಳೆದ ಜನ್ಮದಲ್ಲಿ ನಾವಿಬ್ಬರೂ ಗಂಡ ಹೆಂಡತಿಯಾಗಿದ್ದೆವು. ಕಳೆದ ಜನ್ಮದಲ್ಲಿ ನೀನು ಭರತನಾಟ್ಯದ ಕಲಾವಿದೆಯಾಗಿದ್ದೆ. ನಾನೇ ನಿನ್ನ ಸಾವಿಗೆ ಕಾರಣನಾಗಿದ್ದೆ. ಈ ಜನ್ಮದಲ್ಲಿ ಕಾರಣಾಂತರಗಳಿಂದ ದೂರ ಆಗಿದ್ದೇವೆ. ನೀನು ನನ್ನ ಮದುವೆಯಾದಾಗ ಮಾತ್ರ ನನಗೆ ಮೋಕ್ಷ ಎಂದು ಆ ಯುವತಿಯ ಬಳಿ ಪುನರ್ಜನ್ಮದ ಕತೆ ಹೇಳಿದ್ದ ಜ್ಯೋತಿಷಿ ಆ ಯುವತಿಯನ್ನು ನಂಬಿಸಿದ್ದ.

ಅಷ್ಟೇ ಅಲ್ಲದೆ ಆಕೆಯನ್ನೇ ಮದುವೆಯಾಗುವುದಾಗಿ ನಂಬಿಸಿ, ಆಕೆಯ ಹೆಸರಲ್ಲಿ 30 ಲಕ್ಷ ಸಾಲ ಪಡೆದಿದ್ದ. ಪೊಲೀಸರಿಗೆ ದೂರು ನೀಡಿದರೆ ತನ್ನ ತಪೋಶಕ್ತಿಯಿಂದ ಕೈ-ಕಾಲು ಬೀಳಿಸುವುದಾಗಿ ಬೆದರಿಕೆಯೊಡ್ಡಿದ್ದ ಆತನಿಗೆ ಹೆದರಿ ಯುವತಿಯೂ ಸುಮ್ಮನಿದ್ದಳು. ಯುವತಿಯ ಬ್ಯಾಗ್​ನಲ್ಲಿ ನಿಂಬೆಹಣ್ಣು, ತಾಯತ, ಹೆಣ್ಣಿನ ಗೊಂಬೆ, ಕರ್ಪೂರ ಇಟ್ಟಿದ್ದ ಜ್ಯೋತಿಷಿಗೆ ಆ ಯುವತಿಯ ಮನೆಯವರು ಕೂಡ ಹೆದರಿದ್ದರು. ಅದರಂತೆ ಯುವತಿ ಕೂಡ ಕಳ್ಳ ಸ್ವಾಮಿ ಹೇಳಿದ ಎಲ್ಲ ವಿಷಯವನ್ನು ಪಾಲಿಸಿದ್ದಾಳೆ. ಆದರು ಬಿಡದ ಸ್ವಾಮಿ ದಿನನಿತ್ಯವೂ ಒಂದಿಲ್ಲದೊಂದು ವಿಷಯ ಹೇಳಿ ಕಾಟ ಕೊಡುತ್ತಿದ್ದ.

ಇದನ್ನು ನೋಡಿದ ಯುವತಿಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಸ್ವಾಮಿ ವೆಂಕಟ ಕೃಷ್ಣಾಚಾರ್ಯ ಅತಿಥಿಯಾಗಿದ್ದಾನೆ. ಅದಕ್ಕಾಗಿ ಯಾವುದೇ ಸ್ವಾಮೀಜಿಗಳನ್ನು ನಂಬುವುದು ಅಷ್ಟೊಂದು ಯೋಗ್ಯವಲ್ಲ ಎನ್ನುವುದು ಈ ಘಟನೆ ವಿವರಿಸುತ್ತೆ.