ರಾಜ್ಯದಲ್ಲಿ ಮತ್ತೊಬ್ಬ ದೇವಮಾನವ ಪ್ರತ್ಯಕ್ಷ, ಇವನ ಬೇಡಿಕೆಗಳನ್ನು ಕೇಳಿದರೆ ಅಚ್ಚರಿಯಾಗ್ತೀರ…!!

1
1183

ಈಗಿನ ಕಾಲದಲ್ಲಿ ಯಾವ ದೇವರನ್ನು ನಂಬಬೇಕು ಯಾವ ಸ್ವಾಮಿಜಿಯನ್ನು ನಂಬಬೇಕೋ ಒಂದು ತಿಳಿಯುತ್ತಿಲ್ಲ. ನಿತ್ಯ ಸುದ್ದಿ ಮಾಧ್ಯಮಗಳಲ್ಲಿ ಸ್ವಯಂ ಘೋಷಿತ ದೇವ ಮಾನವರ ರಾಸ ಲೀಲೆಗಳು, ಭ್ರಷ್ಟಾಚಾರದ ಪುರಾವೆಗಳು ದೊರಕುತ್ತಿವೆ. ಈಗ ಇದೆ ತರಹದ ಒಂದು ಘಟನೆ ನಮ್ಮ ರಾಜ್ಯದಲ್ಲಿಯೂ ನಡೆದಿದೆ.

ವೀರ ವನಿತೆ, ಒನಕೆ ಓಬವ್ವನ ನಾಡು, ಕೋಟೆ ನಾಡು ಎಂದೇ ಜನ ಪ್ರಸಿದ್ಧವಾಗಿರುವ ಚಿತ್ರದುರ್ಗದಲ್ಲಿ ಈ ಕುತೂಹಲಕರ ವಿಷಯ ನಡೆದಿದೆ. ಕಂಚೀಪುರ ಗ್ರಾಮದ ಲೋಕೇಶ್ ಎಂಬ ಸ್ವಯಂ ಘೋಷಿತ ದೇವಮಾನವ, ನನ್ನ ಮೇಲೆ ದೇವರು ಬಂದಿದ್ದಾನೆ, ನಿಮ್ಮಇಂಜಿನಿಯರ್ ಓದಿದ ಮಗಳನ್ನು ದೇವರು ಕೇಳುತ್ತೆ ಎಂದಿದ್ದಾನೆ.

ಅರೆ ಇದು ನಿಜನಾ? ಖಂಡಿತ ಇಲ್ಲ. ಕಂಚೀಪುರ ಗ್ರಾಮದ ಲೋಕೇಶ್, ಅರಸೀಕೆರೆ ನಿವಾಸಿ ಟೀಚರ್ ದಂಪತಿಗೆ, ದೇವಮಾನವ ಎಂದು ಹೇಳಿ ಹಿಂಸೆ ನೀಡುತ್ತಿದ್ದನು. ನೀವು ನಿಮ್ಮ ಮಗಳನ್ನು ಕೊಡಲಿಲ್ಲ ಎಂದರೆ ನಿಮಗೆ ತೊಂದರೆ ಆಗುತ್ತದೆ. ಪೂಜೆ ಮಾಡಬೇಕಾಗುತ್ತದೆ, ಅದಕ್ಕೆ ನಿಮ್ಮ ಮಗಳನ್ನು ಕೊಡಿ ಎಂದು ಕೇಳಿದ್ದಾನೆ.

ಜನ ಕೂಡ ಈತ ಯಾವುದೊ ಪವಾಡ ಪುರುಷ, ದೇವಮಾನವ ಇರಬೇಕು ಎಂದು ನಂಬಿದ್ದರು, ಆದರೆ ಯಾವಾಗ ಲೋಕೇಶ್ ಅವರ ಮಗಳನ್ನು ಕೇಳಿದ್ದನೋ, ಆಗ ಜನಕ್ಕೆ ಅನುಮಾನ ಬಂದು, ಈತನಿಗೆ ಚೆನ್ನಾಗಿ ಹೊಡೆದಿದ್ದಾರೆ. ಲೋಕೇಶ್ ವಿರುದ್ಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.