ಮೋದಿಗೆ ಮತ ಹಾಕಬೇಡಿ ಎಂದು ನರೇಂದ್ರ ಮೋದಿ ಪತ್ನಿ ಹೇಳಿರುವ ವೀಡಿಯೊ ವೈರಲ್, ಕಿಡಿಗೇಡಿಗಳು ಮಾಡಿರುವ ಈ ಸುಳ್ಳ ವೀಡಿಯೊವನ್ನು ನಂಬಬೇಡಿ!!

0
725

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅವಿವಾಹಿತ ಎಂದು ಗುಜರಾತ್ ಮಾಜಿ ಮುಖ್ಯಮಂತ್ರಿ ಹಾಗೂ ಮಧ್ಯಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾಬೆನ್ ಗುಜರಾತಿ ಭಾಷೆಯಲ್ಲೇ ಹೇಳಿಕೆ ನೀಡಿದ್ದರು ಅದ್ದನು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಅದರಲ್ಲಿ ಮೋದಿಗೆ ಮತ ಹಾಕಬೇಡಿ ಎಂದು ನರೇಂದ್ರ ಮೋದಿ ಪತ್ನಿ ಜಶೋದಾ ಬೇನ್‌ ಹೇಳಿದ್ದಾರೆ ಎಂಬು ಸುದ್ದಿ ಹರಿದಾಡುತ್ತಿತ್ತು.

90 ಸೆಕೆಂಡ್‌ಗಳಿರುವ ವಿಡಿಯೋದಲ್ಲಿ ಜಶೋದಾಬೆನ್‌ ಗುಜರಾತಿ ಬಾಷೆಯಲ್ಲಿ ಮಾತನಾಡಿದ್ದು, ಅದನ್ನು ಮೊಬೈಲ್‌ ಕ್ಯಾಮೆರಾದಲ್ಲಿ ರೆಕಾರ್ಡ್‌ ಮಾಡಲಾಗಿತ್ತು ಅದರಲ್ಲಿ 2019ರಲ್ಲಿ ನರೇಂದ್ರ ಮೋದಿಗೆ ಮತ ಹಾಕದಂತೆ ಮೋದಿ ಪತ್ನಿ ಜಶೋದಾಬೆನ್‌ ಮನವಿ ಮಾಡಿಕೊಂಡಿದ್ದಾರೆ’ ಎಂದು ಸುಳ್ಳುಸುದ್ದಿ ನೀಡಲಾಗಿತ್ತು. ಅದೆನ್ನೇ ಸತ್ಯವೆಂದು ನಂಬಿದ ಕೆಲವರು ಹಲವಾರು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಆದರೆ ಅದನ್ನು ಸರಿಯಾಗಿ ಪರಿಶೀಲಿಸಿದಾಗ ಸತ್ಯ ಏನೆಂದು ತಿಳಿಯಿತು.

ಮೋದಿಯ ಬಗ್ಗೆ ಪತ್ನಿ ಹೇಳಿದ್ದು ಹೇಳಿದ್ದೇನು?

ಮೋದಿಯವರ ಬಗ್ಗೆ ಮಾಧ್ಯಮಗಳ ಮುಂದೆ ಆನಂದಿಬೆನ್ ನೀಡಿರುವ ಹೇಳಿಕೆ ನನಗೆ ಆಶ್ಚರ್ಯವನ್ನುಂಟುಮಾಡಿದೆ. 2014ರ ಲೋಕಸಭೆ ಚುನಾವಣೆಗೆ ಮುನ್ನ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸ್ವತಃ ನರೇಂದ್ರ ಮೋದಿಯವರೇ ತಾವು ವಿವಾಹಿತ ಎಂದು ನನ್ನ ಹೆಸರನ್ನು ನಮೂದಿಸಿದ್ದಾರೆ ಎಂದು ಹೇಳಿರುವುದನ್ನು ಜಶೋದಾಬೆನ್ ಸೋದರ ಅಶೋಕ್ ಮೋದಿ ತಮ್ಮ ಮೊಬೈಲ್ ಫೋನ್ ನಲ್ಲಿ ವಿಡಿಯೊ ಮಾಡಿರುವುದು ಇದೀಗ ಸುದ್ದಿಯಾಗಿದೆ. ಒಬ್ಬ ವಿದ್ಯಾವಂತ ಮಹಿಳೆಯಾಗಿ ಆನಂದಿಬೆನ್ ಪಟೇಲ್ ಹೀಗೆ ಹೇಳುವುದು ಸರಿಯಲ್ಲ.
ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ನನಗೆ ಇದು ಸರಿ ಕಾಣುವುದಿಲ್ಲ. ಅವರ ಹೇಳಿಕೆ ಭಾರತದ ಪ್ರಧಾನ ಮಂತ್ರಿಯಾಗಿರುವ ಮೋದಿಯವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತದ್ದಾಗಿದೆ. ಅವರು ತುಂಬಾ ಗೌರವಾನ್ವಿತ ವ್ಯಕ್ತಿ. ಅವರು ನನಗೆ ಶ್ರೀರಾಮನಿದ್ದಂತೆ. ಅವರನ್ನು ತೇಜೋವಧೆ ಮಾಡಿ ರಾಜಕಾರಣ ಮಾಡುವುದನ್ನು ನಿಲ್ಲಿಸಿ. ಆನಂದಿಬೇನ್‌ ಅವರ ವರ್ತನೆಯು ನನಗೆ ಮತ್ತು ನನ್ನ ಪತಿಗೆ ನೋವುಂಟುಮಾಡಿದೆ.

ಆನಂದಿಬೆನ್ ಪಟೇಲ್ ಅವರು ಹೀಗೆ ಹೇಳಿದ್ದಾರೆಂದಾಗ ನಾವು ಆರಂಭದಲ್ಲಿ ನಂಬಲಿಲ್ಲ. ಆದರೆ ನಂತರ ದಿವ್ಯ ಭಾಸ್ಕರ ಎಂಬ ಪತ್ರಿಕೆಯ ಮುಖಪುಟದಲ್ಲಿ ಇದು ಜೂನ್ 19ರಂದು ಪ್ರಕಟವಾಯಿತು. ಹೀಗಿರುವಾಗ ತಪ್ಪಾಗಿರಲು ಸಾಧ್ಯವಿಲ್ಲ. ಹೀಗಾಗಿ ನಾವು ಅಕ್ಕ ಜಶೋದಾಬೆನ್ ಆಡಿರುವ ಮಾತುಗಳ ವಿಡಿಯೊವನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಬೇಕಾಯಿತು. ಜಶೋದಾಬೆನ್ ಅವರ ಲಿಖಿತ ಹೇಳಿಕೆಯನ್ನು ಕೂಡ ನಾವು ವಿಡಿಯೊದಲ್ಲಿ ದಾಖಲಿಸಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು. ಇದೆ ವಿಷಯವನ್ನು 2019ರಲ್ಲಿ ನರೇಂದ್ರ ಮೋದಿಗೆ ಮತ ಹಾಕಬೇಡಿ ಎಂದು ಮೋದಿಯ ಪತ್ನಿ ಹೇಳಿದ್ದಾರೆ ಎಂದು ಸುಳ್ಳು ಸುದ್ದಿಯಾಗಿತ್ತು. ಇದನ್ನು ಪರಿಶೀಲಿಸಿದ ನಂತರ ಸತ್ಯ ತಿಳಿಯಿತು.