ಜಿಂಕೆ ತನ್ನ ಮಕ್ಕಳಿಗಾಗಿ ಪ್ರಾಣವನ್ನು ಬಿಟ್ಟಿದ್ದು ಸುಳ್ಳು ವದಂತಿ: ನಿಜವಾದ ಕತೆ ಇಲ್ಲಿದೆ…

0
1065

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿಗಾಗಿ , ಹೆಚ್ಚು ಹೆಚ್ಚು ಲೈಕ್ ಗಳಿಗಾಗಿ ಜನರು ಏನು ಮಾಡಲು ಸಿದ್ದವಿರುತ್ತಾರೆ . ಅದಕ್ಕಾಗಿ ಎಂಥ ಸುಳ್ಳು ಸುದ್ದಿಯನ್ನು ಹರಡಲು ರೆಡಿ . ಆದರೆ ಕೆಲವೊಂದು ಬಾರಿ ಈ ಸುಳ್ಳು ಸುದ್ದಿಗಳು ಕೆಲವು ಜನರ ಮೇಲೆ ದುಷ್ಪರಿಣಾಮ ಬೀರುತ್ತದೆ . ಯುನೆಸ್ಕೋ ಸಂಸ್ಥೆ ನಮ್ಮ ರಾಷ್ಟ್ರಗೀತೆಯನ್ನು ವಿಶ್ವದ ಅತ್ಯುತ್ತಮ ಎಂದು ಘೋಷಿಸಿದೆ , ಮುಂಬೈ ನ ಶಿವಾಜಿ ಪ್ರತಿಮೆಯಲ್ಲಿ ಸೂರ್ಯನ ಚಿಪ್ ಗಳಿವೆ , ಅದು ಭಯೋತ್ಪಾದಕರನ್ನು ತಡೆಯುತ್ತದೆ ಇತ್ಯಾದಿ . ಇಂಥ ಸುದ್ದಿಗಳು ದಿನಾ ಬರುತ್ತಲೇ ಇರುತ್ತವೆ . ಇಂಥ ಸುದ್ದಿಗಳು ಆರೋಗ್ಯಕರವಲ್ಲದಿದ್ದರು ಸಹ ಮಾರಕವಲ್ಲ . ಆದರೆ ಕೆಲವರು ಇದರ ಲಾಭ ಪಡೆಯುತ್ತಾರೆ . ಮೊನ್ನೆ ನಡೆದ ಅಮೆರಿಕಾದ ಚುನಾವಣೆಯ ಫಲಿತಾಂಶವನ್ನೇ ಬದಲಿಸುವಷ್ಟು ಶಕ್ತಿ ಈ ಸುಳ್ಳು ಸುದ್ದಿಗಳಿಗಿದೆ .

Image result for solar chip shivaji

ಈ ಕೆಳಗಿನ ಚಿತ್ರವನ್ನು ತೆಗೆದವರು  ಅಲಿಸನ್ ಬುಟ್ಟಿಗಿಗ್ . ಕೀನ್ಯಾ ದೇಶದಲ್ಲಿ ತೆಗೆದ ಚಿತ್ರವಿದು . ಇದು ಚಿರತೆಗಳು ಆ ಜಿಂಕೆಯನ್ನು ಕೊಲ್ಲುತ್ತಿರುವ ಚಿತ್ರ . ಚಿರತೆಗಳು ಕೊಲ್ಲುವ ಮುನ್ನ ತಮ್ಮ ಮರಿಗಳಿಗೆ ಹೇಗೆ ಕೊಲ್ಲಬೇಕು ಎಂದು ತೋರಿಸುತ್ತಿದೆ . ಆ ಭಯಕ್ಕೆ ಅಲ್ಲಿರುವ ಜಿಂಕೆ ಸ್ಥಬ್ದವಾಗಿದೆ .

ಈ ಚಿತ್ರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು . ಈ ಚಿತ್ರ ಜನರಿಂದ ಜನರಿಗೆ ತಲುಪಿ , ಈ ಭಾವಚಿತ್ರದ ಹಿಂದೆ ಒಂದು ನಕಲಿ ಕಥೆಯನ್ನೇ ಯಾರೋ ಬರೆದರು. ” ಆ ಜಿಂಕೆ ತನ್ನ ಮರಿಗಳನ್ನು ರಕ್ಷಿಸಲು ತನ್ನ ಪ್ರಾಣವನ್ನು ಬಲಿಕೊಟ್ಟಿತು , ಆ ಜಿಂಕೆ ಎಂಥ ತಾಯಿ  , ಎಷ್ಟು ಪ್ರೀತಿ ಆಕೆಗೆ ಅವಳ ಮಕ್ಕಳೆಂದರೆ , ಈ ಚಿತ್ರದ ಛಾಯಾಗ್ರಾಹಕಿ ಈ ಚಿತ್ರ  ತೆಗೆದ ನಂತರ ಖಿನ್ನರಾಗಿದ್ದಾರೆ ” ಎಂದು . ಇದು ಸಾಮಾಜಿಕ ಜಾಲತಾಣದಲ್ಲಿ ಬಹಳ ಪ್ರಸಿದ್ಧಿಯಾಯಿತು ಹಾಗು ಆಕೆಗೆ ಸಾವಿರಾರು ಸಮಾಧಾನ ಹೇಳುವ ಸಂದೇಶಗಳು ಬರಲು ಆರಂಭಿಸಿದವು . ಇದಕ್ಕೆ ಬೇಸತ್ತ ಆಕೆ ಆ ಚಿತ್ರವನ್ನು ಮತ್ತೆ ಪ್ರಕಟಿಸಿ ಸ್ಪಷ್ಟನೆ ಯನ್ನು ನೀಡಿದಳು .

Fake Story

ಇದೊಂದು ಉದಾಹರಣೆ ಅಷ್ಟೇ . ಇಂಥ ಹತ್ತು ಹಲವು ಸುಳ್ಳು ಸುದ್ದಿಯಿಂದ ಬೇಸತ್ತವರ ಸಂಖ್ಯೆ ಏರುತ್ತಲೇ ಇದೆ .