ಇತಿಹಾಸದಲ್ಲೇ ಅತ್ಯಂತ ಹೀನಾಯ ಸ್ಥಿತಿ ತಲುಪಿದ “ರುಪಾಯಿ” ಬೆಲೆ, ಮೋದಿಯ ಫೇಲ್ ಆದ Demonetization ನ ಧಗೆ ಈಗ ಭಾರತಕ್ಕೆ ತಟ್ಟಿದೆ!!

0
405

ನೋಟ್ ಬ್ಯಾನ್’ನಿಂದಾಗಿ ದೇಶಕ್ಕೆ ಭಾರಿ ನಷ್ಟವಾಗಿದೆ. ಉದ್ಯಮದ ಮೇಲೂ ಅಮಾನ್ಯೀಕರಣ ಪರಿಣಾಮ ಬೀರಿದ್ದು, ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ನೋಟ್ ಬ್ಯಾನ್ ವೇಳೆ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ದೇಶದ ಆಡಳಿತಗಾರರೂ ಅಭಿವೃದ್ಧಿ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ಅದೆಲ್ಟೋ ಜನ ಉದ್ಯೋಗ ಕಳೆದುಕೊಂಡು ನರಳುತ್ತಿದ್ದಾರೆ. ಹೀಗಿದ್ದರೂ ದಿನವೂ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ತೀವ್ರ ಕುಸಿತ ಕಾಣುತಿದೆ.. ಇದರಿಂದ ಜನಸಾಮಾನ್ಯರಿಗೆ ರೂಪಾಯಿ ಮೌಲ್ಯದ ಏರಿಳಿಕೆಯ ಒಳ ಸುಳಿಗಳು ಗೊತ್ತಾಗದೇ ಇದ್ದರೂ, ಅವರ ನಿತ್ಯ ವಹಿವಾಟಿಗೆ ತೊಂದರೆಯಾಗಿರುವುದಂತೂ ಸತ್ಯ.

Also read: ಇದೊಂದು ವಿಚಿತ್ರ ಕೇಸ್; 19ರ ಯುವತಿ ಮೇಲೆ 25ರ ಮಹಿಳೆಯಿಂದ  ರೇಪ್, ದೂರು ನೀಡಿದರು ದಾಖಲಾಗದ ಪೊಲೀಸ್ ಕೇಸ್…

ವಾರಾಂತ್ಯವಾದರೂ ಅಮೆರಿಕದ ಡಾಲರ್‌ ಮುಂದೆ ರೂಪಾಯಿ ಚೇತರಿಸಿಕೊಂಡಿಲ್ಲ. ಒಟ್ಟಾರೆಯಾಗಿ 18 ಪೈಸೆಯಷ್ಟು ಕುಸಿತ ಕಂಡ ರೂಪಾಯಿ ಮೌಲ್ಯ ಡಾಲರ್‌ ಎದುರು 73.76 ರೂ.ಗೆ ತಲುಪಿದೆ. ಮಧ್ಯಾಂತರ ವಹಿವಾಟಿನ ವೇಳೆ ಅದು 74ರೂ. ಗಳ ಗಡಿ ದಾಟಿತ್ತು. ಇಂಥ ಬೆಳವಣಿಗೆ ಇದೇ ಮೊದಲ ಬಾರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್‌ಬಿಐ ಗವರ್ನರ್‌ ಡಾ.ಊರ್ಜಿತ್‌ ಪಟೇಲ್‌ ಭಾರತದ ಅರ್ಥ ವ್ಯವಸ್ಥೆಗೆ ಸಮನಾಗಿರುವ ಇತರ ರಾಷ್ಟ್ರಗಳ ಕರೆನ್ಸಿಗೆ ಹೋಲಿಕೆ ಮಾಡಿದರೆ ನಮ್ಮ ರೂಪಾಯಿ ದೃಢವಾಗಿದೆ ಎಂದು ಹೇಳಿದ್ದಾರೆ. ರೂಪಾಯಿಗೆ ಎದುರಾಗಿ ಇಷ್ಟೇ ಮೌಲ್ಯದ ವಿನಿಮಯ ದರ ನಿಗದಿ ಮಾಡಬೇಕು ಎಂಬ ಗುರಿ ಇಲ್ಲ ಎಂದು ಹೇಳಿದ್ದಾರೆ.

Also read: ಆಟೋ ಡ್ರೈವರ್ ಪುತ್ರ ಯುಪಿಎಸ್’ಸಿ ಟಾಪರ್ ಆದ ಕಥೆ ಕೇಳಿ, ಶ್ರಮಪಟ್ಟರೆ ಯಾರು ಬೇಕಾದರೂ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಅನ್ನೋದು ನಿಜ ಅಂತ ನಿಮಗೇ ಅನ್ಸುತ್ತೆ!!

ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲಕ್ಕೆ ಡಾಲರ್‌ ಮೂಲಕವೇ ಪಾವತಿ ಮಾಡಲಾಗುತ್ತದೆ. ಹೀಗಾಗಿ, ಸದ್ಯ ಕೊಂಚ ಹೆಚ್ಚುವರಿ ಮೊತ್ತ ಪಾವತಿ ಮಾಡಬೇಕಾದ ಜರೂರತ್ತು ಬಂದೊದಗಿದೆ. ಇದೊಂದು ರಾಷ್ಟ್ರೀಯ ಸಮಸ್ಯೆಯಾಗಿರುವುದರಿಂದ ಕೇಂದ್ರ ಸರ್ಕಾರದ ಜತೆ ಪ್ರತಿಪಕ್ಷಗಳು ಕೈಜೋಡಿಸಿ, ಪರಿಸ್ಥಿತಿ ನಿಭಾಯಿಸುವುದು ಹೇಗೆ ಎನ್ನುವುದರ ಬಗ್ಗೆ ಯೋಚನೆ ನಡೆಸಬೇಕಾಗಿದೆ.

Also read: ಐದು ಕೋಟಿ ಫೇಸ್ ಬುಕ್‌ ಖಾತೆಗಳು ಹ್ಯಾಕ್‌..? ನಿಮ್ಮ ಖಾತೆಗಳ ಖಾಸಗಿ ಮಾಹಿತಿ ಕೇವಲ 200 ರೂ.ಗೆ ಸೇಲ್.!

ಮೋದಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬಂಡವಾಳಶಾಹಿಗಳ ಅನುಕೂಲಕ್ಕಾಗಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಗೊಳಿಸಿ ಶೇ 28ರಷ್ಟು ತೆರಿಗೆ ವಿಧಿಸುತ್ತಿದ್ದಾರೆ. ಇದರಿಂದ ಕೈಗಾರಿಕೆಗಳಿಗೆ ಲಾಭವೇ ಹೊರತು ಜನ ಸಾಮಾನ್ಯರಿಗಲ್ಲ. ಮೋದಿ ಕೈಗಾರಿಕೆಗಳು ಹಾಗೂ ವಿದೇಶಿ ಕಂಪನಿ ಮಾಲೀಕರಿಂದ ಕಮಿಷನ್ ಪಡೆಯುತ್ತಿದ್ದಾರೆ. ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ವ್ಯವಸ್ಥೆಯಿಂದ ಬಡವರಿಗೆ, ರೈತರಿಗೆ ಯಾವುದೇ ಅನುಕೂಲವಾಗಿಲ್ಲ. ಬದಲಿಗೆ ದೇಶದ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದ್ದು, ಬಂಡವಾಳಶಾಹಿಗಳು ಮತ್ತಷ್ಟು ಸಿರಿವಂತರಾಗುತ್ತಿದ್ದಾರೆ ಅಷ್ಟೇ.