ಖ್ಯಾತ ನಟ ಕೆ.ಎಸ್.ಅಶ್ವಥ್ ಅವರ ಮಗ ಈಗ ಜೀವನ ನಿರ್ವಹಣೆಗಾಗಿ ಟ್ಯಾಕ್ಸಿ ನಡೆಸುತ್ತಿದ್ದಾರಂತೆ, ನಂಬಲು ಅಸಾಧ್ಯ ಆದ್ರೂ ಇದೆ ನಿಜ…

0
797

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರಾದ ಖ್ಯಾತ ಹಿರಿಯ ನಟ ದಿವಂಗತ ಕೆ.ಎಸ್. ಅಶ್ವಥ್ ಅವರು ತಮ್ಮ ಮನೋಜ್ಞ ಅಭಿನಯದಿಂದ ದಶಕಗಳ ಕಾಲ ಕನ್ನಡಿಗರ ಮನೆ ಮಾತಾಗಿದ್ದರು, ಆದರೆ ಇಂದು ಇಂತಹ ಪ್ರಸಿದ್ಧ ನಟನ ಪುತ್ರನ ಜೀವನ ಚಿಂತಾಜನಕವಾಗಿದೆ ಅಂತೆ, ಜೀವನ ಸಾಗಿಸಲು ಕಷ್ಟವಾಗಿದೆಯಂತೆ.

ಹೌದು, ಇದು ನಿಜ ನಟ ಕೆ.ಎಸ್.ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಈ ಮೊದಲು ಹಲವು ವರ್ಷಗಳಿಂದ ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲಿ ಅಭಿನಯಿಸುತ್ತಿದ್ದರು, ಪ್ರತಿಯೊಂದು ಟಿವಿ ಚಾನೆಲ್-ನಲ್ಲಿ ಇವರು ನಟಿಸಿದ ಒಂದಲ್ಲ ಒಂದು ಧಾರಾವಾಹಿ ಇರುತ್ತಿತ್ತು ಅಷ್ಟರ ಮಟ್ಟಿಗೆ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಶಂಕರ್.

ಆದರೆ ಕಳೆದ ಕೆಲ ವರ್ಷಗಳಿಂದ ಅವರಿಗೆ ಯಾವ ಸಿನೆಮಾದಿಂದಾಗಲಿ ಅಥವಾ ಕಿರುತೆರೆಯಿಂದಾಗಲಿ ಆಫರ್ ಬಂದಿಲ್ಲವಂತೆ, ಅವರ ಪತ್ನಿ ಹೇಳುವ ಪ್ರಕಾರ ಏಪ್ರಿಲ್-ನಿಂದ ಅವರಿಗೆ ಯಾವುದೇ ಅವಕಾಶ ಸಿಕ್ಕಿಲ್ಲವಂತೆ, ಅದಕ್ಕೆ ಸ್ವತಂತ್ರವಾಗಿ ಯಾರ ಹಂಗಿಲ್ಲದೆ ಬದುಕಬೇಕೆಂದು ಅವರು ಟ್ಯಾಕ್ಸಿ ನಡೆಸುತ್ತಿದ್ದಾರಂತೆ.

ಇವರ ಈ ನಿರ್ಧಾರದಿಂದ ಅವರ ತಾಯಿಯವರಿಗೆ ತುಂಬ ನಿರಾಸೆಯಾಗಿದೆಯಂತೆ, ಶಂಕರ್ ಅವರು ಜೀವನ ನಿರ್ವಹಣೆಗಾಗಿ ಉಬೆರ್ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ, ಆದರೆ ಅವಕಾಶ ಸಿಕ್ಕಾಗಲೆಲ್ಲ ಸಿನಿಮಾ ಮತ್ತು ಧಾರಾವಾಹಿ ಮಾಡುವುದನ್ನು ಮಾತ್ರ ಬಿಡುವುದಿಲ್ಲವಂತೆ, ಅಷ್ಟರ ಮಟ್ಟಿಗೆ ಅವರು ಕಲೆಯನ್ನು ಪ್ರೀತಿಸುತ್ತಾರೆ. ಶಂಕರ್ ಅವರ ಈ ಕೆಲಸಕ್ಕೆ ಅವರ ಮನೆಯವರೆಲ್ಲ ತುಂಬ ಬೆಂಬಲ ನೀಡುತ್ತಿದ್ದರಂತೆ.

ಒಟ್ಟಿನಲ್ಲಿ ಒಬ್ಬ ಶ್ರೇಷ್ಠ ನಟನ ಮಗನಾಗಿ ಜೀವನ ಸಾಗಿಸಲು ಪರದಾಡುತ್ತಿರುವುದು ದುರದೃಷ್ಟವೇ ಸರಿ…!!