ಸಾವಿರಾರು ಕೋಟಿ ರೂಪಾಯಿ ಕೊಳ್ಳೆ ಹೊಡೆಯುವ ರಾಜಕಾರಣಿಗಳ ಮಧ್ಯೆ ಸತತ ಐದು ಬಾರಿ ಮುಖ್ಯಮಂತ್ರಿಯಾದರೂ ಇವರ ಬಳಿ ಕೇವಲ 2410 ರೂ. ಇದೆಯಂತೆ ಗೊತ್ತಾ.

0
674

ರಾಜಕಾರಣಿಗಳೆಂದರೆ ಬರೀ ಹಣ ಕೀಳಲು ಹುಟ್ಟಿದ ಜೀವಿಗಳು, ಚುನಾವಣೆ ಮುಗಿದ ನಂತರ ಈ ಕಡೆ ತಲೆಯು ಹಾಕುವುದಿಲ್ಲ, ಬರೀ ಕೋಟಿ-ಕೋಟಿ ಹಣ ಮಾಡುವುದರಲ್ಲಿ, ಹಗರಣ ಮಾಡುವುದರಲ್ಲಿ ನಿರತರಾಗಿರುತ್ತಾರೆ ಎನ್ನುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಆದರೆ, ಸತತ ಐದು ಬಾರಿ ಮುಖ್ಯಮಂತ್ರಿಯಾದರು ಇವರ ಬಳಿ ಕೇವಲ 2410 ರೂ. ಇದೆಯಂತೆ ಗೊತ್ತಾ.

ಹೌದು, ಇವರ ಬಳಿ ಕೇವಲ 2410 ರೂ. ಮಾತ್ರವಿದೆಯಂತೆ, ಯಾರು ಇವರು ಎಂದು ನಿಮಗೆಲ್ಲ ಕುತೂಹಲವಿರಬೇಕಲ್ಲ. ಅವರು ಬೇರೆ ಯಾರು ಎಲ್ಲ ತ್ರಿಪುರ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್. ಸರ್ಕಾರ್ 1998 ರಿಂದ ಇಂದಿನವರೆಗೂ, ಸತತ ಐದು ಅವಧಿಯವರೆಗೆ ತ್ರಿಪುರಾದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಧನ್ಪುರ್ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರು ತಮ್ಮ ಹಣಕಾಸಿನ ವಿವರಗಳನ್ನು ಸಾರ್ವಜನಿಕವಾಗಿ ಘೋಷಿಸಿದ್ದಾರೆ.

ಮಾಣಿಕ್ ಸರ್ಕಾರ್ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಅವರ ಬಳಿಯಲ್ಲಿ 1,520 ರೂ. ನಗದು ಮತ್ತು ರಾಷ್ಟ್ರೀಯ ಖಾತೆಯಲ್ಲಿರುವ ಬ್ಯಾಂಕಿನಲ್ಲಿ 2,410 ರೂ. ಬ್ಯಾಂಕ್ ಬ್ಯಾಲೆನ್ಸ್ ಇದೆ. ಅವರಿಗೆ ಯಾವುದೇ ಬ್ಯಾಂಕ್ ಠೇವಣಿಗಳಿಲ್ಲ ಮತ್ತು ಆದಾಯ ತೆರಿಗೆ ರಿಟರ್ನ್ ಸಲ್ಲಿಸಲಿಲ್ಲ. 2013 ರಲ್ಲಿ ನಡೆದ ಕೊನೆಯ ಚುನಾವಣೆಯಲ್ಲಿ, ಅವರು ಸಲ್ಲಿಸಿದ ಅಫಿಡವಿಟ್ ಪ್ರಕಾರ 9,720 ರೂ. ಅವರ ಬ್ಯಾಂಕ್ ಖಾತೆಯಲ್ಲಿ ಇದ್ದ ಈ ವರೆಗಿನ ಅತಿಹೆಚ್ಚು ಮೊತ್ತವಾಗಿದೆ.

ಇದಲ್ಲದೆ ನಿವೃತ್ತ ರಾಜ್ಯ ಸರ್ಕಾರಿ ಉದ್ಯೋಗಿಯಾದ ಸರ್ಕಾರ್ ಅವರ ಪತ್ನಿ ಪಂಚಾಲಿ ಭಟ್ಟಾಚಾರ್ಜಿ ಅವರು 20,140 ರೂಪಾಯಿ ನಗದು ಹೊಂದಿದ್ದಾರೆಂದು ಚುನಾವಣಾ ಘೋಷಣೆಯಲ್ಲಿ ತಿಳಿಸಿದ್ದಾರೆ. ಭಟ್ಟಾಚಾರ್ಜಿ ಅವರ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 12,15,714.78 ರೂ. ಮೊತ್ತದ ಹಣವಿದೆಯಂತೆ.

ಇನ್ನು ಸರ್ಕಾರ್ ಮತ್ತು ಅವರ ಹೆಂಡತಿಗೆ ವೈಯಕ್ತಿಕ ನಿವಾಸವಿಲ್ಲವಂತೆ ಅದಕ್ಕೆ ಅವರಿಬ್ಬರೂ ಸರ್ಕಾರ ನೀಡುವ CM ಹೌಸ್ ನಲ್ಲಿಯೇ ವಾಸವಿದ್ದಾರೆಯಂತೆ. ಇನ್ನು ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಹೆಂಡತಿ ಕೂಡ ತುಂಬಾನೆ ಸಾಮಾನ್ಯ ಮಹಿಳೆಯಂತೆ ಅಗರ್ತಲಾದಲ್ಲಿ ಇದ್ದಾಗ ಆಗಾಗ ಆಟೋ-ರಿಕ್ಷಾದಲ್ಲಿ ಪ್ರಯಾಣಿಸುತ್ತಾರೆ.

ಹಿರಿಯ ಕಮ್ಯುನಿಸ್ಟ್ ಮುಖಂಡರಾದ ಇವರು ಅಗರ್ತಲಾದಲ್ಲಿ 0.0118 ಎಕರೆಗಳಷ್ಟು ಕೃಷಿಯೇತರ ಭೂಮಿಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇದು ಅವರ ಒಡಹುಟ್ಟಿದವರ ಜೊತೆ ಜಂಟಿಯಾಗಿ ಸೇರಿದ ಭೂಮಿ. ಸತತ ಐದು ಬಾರಿ ಅಧಿಕಾರದಲ್ಲಿದ್ದ ನಂತರ ಇದು ಅವರ ಹೊಂದಿರುವ ಆಸ್ತಿಗಳು.

ಅವರು ಸಿಪಿಐ (ಎಂ) ಗೆ ರೂ. 26,315 ರ ಸಂಪೂರ್ಣ ವೇತನವನ್ನು ದೇಣಿಗೆ ನೀಡುತ್ತಾರೆ ಮತ್ತು ಜೀವನೋಪಾಯಕ್ಕಾಗಿ 5000 ರೂ.ಗಳನ್ನು ಪಕ್ಷದ ನಿಧಿಯಿಂದ ಅನುದಾನ ಪಡೆಯುತ್ತಾರೆ. ತ್ರಿಪುರದ ಐದು ಬಾರಿ ಮುಖ್ಯಮಂತ್ರಿಯಾದ ಇವರ ಬಳಿ ಸಾಮಾಜಿಕ ಮಾಧ್ಯಮ ಖಾತೆ ಅಥವಾ ಇಮೇಲ್ ಖಾತೆಯಿಲ್ಲ, ಇನ್ನು ಒಂದೂ ಅಚ್ಚರಿಯ ಸಂಗತಿಯೆಂದರೆ ಅವರ ಬಳಿ ಒಂದು ಮೊಬೈಲ್ ಫೋನ್ ಸಹ ಇಲ್ಲ.

ಒಟ್ಟಿನಲ್ಲಿ ರಾಜಕಾರಣಿಗಳೆಂದರೆ ಬರೀ ಹಣ ಕೀಳಲು ಹುಟ್ಟಿದ ಜೀವಿಗಳು ಎನ್ನುವ ಈ ಕಾಲದಲ್ಲಿ ಇಂತಹ ಅದ್ಭುತ ವ್ಯಕ್ತಿಗಳು ಇದ್ದಾರೆ ಎಂದರೆ ಅಚ್ಚರಿಯ ಸಂಗತಿಯೇ ಸರಿ…!!