ನೋಟು ಬದಲಾವಣೆ ಮಾಡಬೇಕಾದರೆ ಈ ನಿರ್ದಿಷ್ಟ ಫಾರಂ ಬೇಕು.

0
784

ನೋಟು ಬದಲಾವಣೆ ಮಾಡಬೇಕಾದರೆ ಈ ನಿರ್ದಿಷ್ಟ ಫಾರಂ ಭರ್ತಿ ಮಾಡಬೇಕು ನಂತರ  ಬ್ಯಾಂಕ್ ಗೆ ಸಲ್ಲಿಸಬೇಕು. 

ಬೆಂಗಳೂರು: ಕೇಂದ್ರ ಸರ್ಕಾರ ಮಂಗಳವಾರ ಮಧ್ಯರಾತ್ರಿಯಿಂದ 500 ಮತ್ತು 1,000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿರುವುದರಿಂದ ನಿಮ್ಮಲ್ಲಿರುವ  500,  1,000 ನೋಟುಗಳನ್ನು ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಬದಲಾಯಿಸಿಕೊಳ್ಳಬಹುದಾಗಿದೆ.

ಬೆಳಗ್ಗೆಯಿಂದಲೇ ಗ್ರಾಹಕರು ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ ಗಳ ಮುಂದೆ ಕ್ಯೂನಲ್ಲಿ ನಿಂತಿದ್ದು, ಹಳೆ ನೋಟುಗಳ ವಿನಿಮಯಕ್ಕೆ ಕಾಯುತ್ತಿದ್ದಾರೆ. ಹಳೇ ನೋಟು ಕೊಟ್ಟು ಹೊಸ ನೋಟು ಪಡೆಯಲು ಗ್ರಾಹಕರು ಫಾರಂ ಅನ್ನು ತುಂಬಿಸಿಕೊಡಬೇಕಾಗಿದೆ. ಜೊತೆಗೆ ಗುರುತು ಪತ್ರ ಕೊಂಡೊಯ್ಯಿರಿ. ನಿಮ್ಮ ಖಾತೆಗೆ ಎಷ್ಟು ಬೇಕಾದ್ರು ಹಣ ಜಮಾ ಮಾಡಬಹುದು. 4 ಸಾವಿರ ರೂಪಾಯಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದಾಗಿದೆ.

ನೋಟು ಬದಲಿಸಬೇಕಾದರೆ ನೀವು ಮಾಡಬೇಕಾದ ಕ್ರಮಗಳು

*  500,  1,000 ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಗೆ ಜಮಾ ಮಾಡಲು ಡಿಸೆಂಬರ್ 30ರವರೆಗೆ ಅವಕಾಶ. ಜಮಾ ಮೊತ್ತಕ್ಕೆ ಮಿತಿ ಇಲ್ಲ.

*  500,  1,000 ನೋಟುಗಳನ್ನು ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಬದಲಾಯಿಸಿಕೊಳ್ಳಲೂ ಅವಕಾಶ ಇದೆ. ಹೀಗೆ ಮಾಡುವಾಗ ಗುರುತಿನ ಚೀಟಿ ತೋರಿಸಬೇಕು.

* ಆಧಾರ್, ಪ್ಯಾನ್, ಮತದಾರರ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದನ್ನು ತೋರಿಸಬಹುದು.

* ದಿನಕ್ಕೆ ಗರಿಷ್ಠ  4,000ವರೆಗೆ ಮಾತ್ರ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.

* ನೋಟು ಬದಲಾವಣೆ ಮಾಡಬೇಕಾದರೆ ನಿರ್ದಿಷ್ಟ ಜಮಾ ಚೀಟಿ ಭರ್ತಿ ಮಾಡಿ ಬ್ಯಾಂಕ್ ‍ಗೆ ಸಲ್ಲಿಸಬೇಕು.

ನಿರ್ದಿಷ್ಟ ಜಮಾ ಫಾರಂ ಇಲ್ಲಿ ಡೌನ್‍ಲೋಡ್ ಮಾಡಿಕೊಳ್ಳಿ.

capture

https://www.iob.in/uploads/CEDocuments/Request%20slip%20for%20exchange.pdf

ಹಣ ಪಡೆಯುವುದಕ್ಕೆ ಮಿತಿ

* ಬ್ಯಾಂಕಿನಿಂದ ದಿನವೊಂದಕ್ಕೆ ಗರಿಷ್ಠ  10 ಸಾವಿರ, ವಾರಕ್ಕೆ ಗರಿಷ್ಠ  20 ಸಾವಿರ ಪಡೆಯಬಹುದು.

* ಎಟಿಎಂ ಯಂತ್ರದಿಂದ ದಿನಕ್ಕೆ ಗರಿಷ್ಠ  2,000 ಮಾತ್ರ ತೆಗೆದುಕೊಳ್ಳಬಹುದು. ಮುಂದಿನ ದಿನಗಳಲ್ಲಿ ಇದನ್ನು  4,000ಕ್ಕೆ ಹೆಚ್ಚಿಸಲಾಗುವುದು.

* ಬ್ಯಾಂಕ್ನಿಂದ ಹಣ ಪಡೆಯಲು ಹೇರಿರುವ ಮಿತಿಯನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲಾಗುವುದು ಎಂದು ಸರ್ಕಾರ ಹೇಳಿದೆ.