ಕೇಂದ್ರ ಸರ್ಕಾರ ರೈತರ ಅನುಕೂಲಕ್ಕಾಗಿ ಡಿಜಿಟಲ್ ಪೇಮೆಂಟ್ ಪ್ರೋತ್ಸಾಹ ಹಲವು ಕ್ರಮಗಳ ಘೋಷಣೆ

0
676

ನವದೆಹಲಿ: ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಶಿಕಾಂತ್ ದಾಸ್ ಸುದ್ದಿಗೋಷ್ಠಿಯಲ್ಲಿ ನೋಟುಗಳ ನಿಷೇಧದ ಬಳಿಕ ತೊಂದರೆಗೆ ಒಳಗಾಗಿರುವ ಸಾರ್ವಜನಿಕರ ಸಹಾಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು ಡಿಜಿಟಲ್ ಪೇಮೆಂಟ್ ಪ್ರೋತ್ಸಾಹ ಮತ್ತು ರೈತರ ಸಹಾಯಕ್ಕೆ ಹಲವು ಕ್ರಮಗಳನ್ನು ಘೋಷಿಸಿದೆ.

ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಶಿಕಾಂತ್ ದಾಸ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಅನುಕೂಲಕ್ಕಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು(ಡಿಸಿಸಿಬಿ)ಗಳಿಗೆ ಕೇಂದ್ರ ಸರ್ಕಾರ ಸುಮಾರು 21 ಸಾವಿರ ಕೋಟಿ ರುಪಾಯಿಯನ್ನು ಬಿಡುಗಡೆ ಮಾಡಿದೆ. ಭಾರತೀಯ ರಿಸರ್ವ ಬ್ಯಾಂಕ್(ಆರ್ಬಿಐ) ಮತ್ತು ನಬಾರ್ಡ್ ಬ್ಯಾಂಕ್ ಗಳು ಸಹಕಾರಿ ಬ್ಯಾಂಕ್ ಗಳಿಗೆ ನೀಡಿರುವ ನಿರ್ದೇಶನದಂತೆ ಆಯಾ ಸಹಕಾರಿ ಬ್ಯಾಂಕ್ ಗಳು ರೈತರಿಗೆ ಹಣ ಪೂರೈಸುತ್ತವೆ ಎಂದರು.

ಶಶಿಕಾಂತ್ ದಾಸ್ ಸುದ್ದಿಗೋಷ್ಠಿಯ ಮುಖ್ಯಾಂಶಗಳು

* ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರ ಸತತ ಮೇಲ್ವಿಚಾರಣೆ.

* ಕೇಂದ್ರ ಸರ್ಕಾರದ ಹೊಸ ಕ್ರಮಗಳು ರೈತರ ಮನಸ್ಸಿನಲ್ಲಿ ಮೂಡಿವೆ. ಹಣ ಪಾವತಿ ಹಾಗೂ ಬ್ಯಾಂಕ್ ಡಿಜಿಟಲ್ ಗೊಳಿಸುವ ನೂತನ ಯೋಜನೆ.

* ಪ್ರಸ್ತುತ ಹಿಂಗಾರು ಋತುವಿನ ಕೃಷಿ ಕಾರ್ಯಚಟುವಟಿಕೆಗಳಿಗಾಗಿ ನಬಾರ್ಡ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು(ಡಿಸಿಸಿಬಿ)ಗಳಿಗೆ 23 ಸಾವಿರ ಕೋಟಿ ಹಣ ಬಿಡುಗಡೆ. ಅಗತ್ಯ ಬಿದ್ದರೆ ಹೆಚ್ಚುವರಿ ಹಣ ಮಂಜೂರು.

* ಡಿಸೆಂಬರ್ 31ರವರೆಗೆ ರೈಲ್ವೆ ಆನ್ ಲೈನ್ ಟಿಕೆಟ್ ಬುಕಿಂಗ್ ಸೇವಾ ತೆರಿಗೆ ಕಡಿತ.

* ಡಿಸೆಂಬರ್ 31ರವರೆಗೆ ಡೆಬಿಟ್ ಕಾರ್ಡ್ ಗಳ ಬಳಕೆ ಮೇಲೆ ಯಾವುದೇ ಶುಲ್ಕ ಇರುವುದಿಲ್ಲ.

* ಡಿಸೆಂಬರ್ 31ರವರೆಗೆ ಸ್ಮಾರ್ಟ್ ಫೋನ್ ಗಳ ಮೂಲಕ ನಡೆಯುವ ಡಿಜಿಟಲ್ ಫೈನಾನ್ಸಿಯಲ್ ವ್ಯವಹಾರಗಳಿಗೂ ಸೇವಾ ಶುಲ್ಕ ರದ್ದು.

* ಸರ್ಕಾರಿ ಕಛೇರಿಯಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗಳು ಡಿಜಿಟಲ್ ಪೇಮೆಂಟ್ ಮಾಡುವಂತೆ ಸೂಚಿಸಲಾಗುತ್ತದೆ.

*ಪೇಟಿಎಂ ಸೇರಿದಂತೆ ಇತರ ಯಾವುದೇ ವ್ಯಾಲೆಟ್ ಗಳ ನಗದು ಮಿತಿಯನ್ನು 20 ಸಾವಿರ ರುಪಾಯಿಗೆ ಹೆಚ್ಚಳ