ಬಾಲ್ಯದಲ್ಲಿ ಇಷ್ಟಪಟ್ಟ ಐಷಾರಾಮಿ ಜಾಗ್ವಾರ್ ಕಾರನ್ನು 80 ವರ್ಷಗಳ ನಂತರ ಖರೀದಿಸಿದ, ರೈತನ ಅಸಲಿ ಕಥೆಯನ್ನ ಒಮ್ಮೆ ಓದಿ..

0
646

ಪತಿಯೋಬ್ಬರಿಗೂ ಜೀವನದಲ್ಲಿ ಗುರಿ, ಆಸೆಗಳು ಇರುವುದು ಸಾಮಾನ್ಯ. ಅದರಲ್ಲಿ ಕೆಲವೊಬ್ಬರಿಗೆ ಅಂತು ಆಸೆ ಪಟ್ಟದನ್ನು ಪಡೆಯಲು ಎಷ್ಟೇ ಕಷ್ಟವಾದರೂ ಸರಿ, ಎಷ್ಟೇ ವರ್ಷಗಳೇ ಆದರು ಸರಿ. ಇಷ್ಟ ಪಟ್ಟವಸ್ತುಗಳನ್ನು ಪಡೆದೆತ್ತಿರುತ್ತಾರೆ. ಇದಕ್ಕೆ ನಿದರ್ಶನವಾಗಿ ಒಬ್ಬ ಸಾಮಾನ್ಯ ರೈತ ತನ್ನ 88 ರ ಹರೆಯದಲ್ಲಿ ಜಾಗ್ವಾರ್ ಕಾರು ಖರೀದಿಸಿದ ಸ್ಟೋರಿ ಇಲ್ಲಿದೆ ನೋಡಿ.

Also read: ಮೇಕ್ ಇನ್ ಇಂಡಿಯಾ ಪ್ರಭಾವದಿಂದ ಭಾರತದಲೇ ನಡೆದಿದೆ ಮೊಬೈಲ್ ತಯಾರಿಕೆ; ಇದರಿಂದ 6.7 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದೆ.

ಹೌದು, ಪುಣೆ ನಗರದ ಹೊರವಲಯದಲ್ಲಿರುವ ಧಯಾರಿ ಗಾವ್ ಮೂಲದ ಸುರೇಶ್ ಪೊಕಾಲೆ ಎಂಬ ರೈತರೊಬ್ಬರು ರೂ. 1.34 ಕೋಟಿ ಬೆಲೆಬಾಳುವ ಐಷಾರಾಮಿ ಜಾಗ್ವಾರ್ ಎಕ್ಸ್ಜೆ ಕಾರನ್ನು ಖರೀದಿಸಿದ್ದಲ್ಲದೇ, ಕೋಟ್ಯಾಧಿಪತಿಗಳನ್ನೇ ಹುಬ್ಬೇರಿಸುವಂತೆ ಮಾಡಿದ್ದಾನೆ. ಈ ರೈತ ಸುರೇಶ್ ಪೊಕಾಲೆ 8 ವರ್ಷ ಬಾಲಕನಿದ್ದಾಗಲೇ ಅವರು ಮರ್ಸಿಡಿಸ್ ಕಾರನ್ನು ಖರೀದಿಸಬೇಕೆಂಬ ಆಸೆ ಇಟ್ಟುಕೊಂಡಿದರಂತೆ, ಅದನ್ನು ಸುಮಾರು 80 ವರ್ಷಗಳ ನಂತರ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಈ ಅಜ್ಜ ಬಾಲ್ಯದಲ್ಲಿ ಸೈಕಲ್‍‍‍ನಲ್ಲಿ ಪ್ರಯಾಣಿಸುತ್ತಿದ್ದಾಗ ಮೊದಲ ಬಾರಿಗೆ ಮರ್ಸಿಡಿಸ್ ಬೆಂಝ್ ಕಾರನ್ನು ಕಂಡಿದ್ದರಂತೆ. ಆ ವಯಸ್ಸಿನಲ್ಲಿ ಅವರಿಗೆ ಮರ್ಸಿಡಿಸ್ ಬೆಂಝ್ ಕಾರಿನ ಹೆಸರು ಕೂಡಾ ಸರಿಯಾಗಿ ತಿಳಿದಿರಲ್ಲಿಲ್ಲವಂತೆ. ಆದರೆ ಗೊತ್ತಿದ್ದು ಕೇವಲ ಮರ್ಸಿಡಿಸ್ ಬೆಂಝ್ ಸಂಸ್ಥೆಯ ಲೊಗೊ ಮಾತ್ರವಂತೆ.

ಆ ಲೊಗೊ ಕಾರನ್ನು ಖರಿದಿಸಲೇ ಬೇಕು ಎಂಬ ಚಲ ಇಟ್ಟುಕೊಂಡು ಬಂದ ರೈತ ಇಂದಿಗ ಐಷಾರಾಮಿ ಕಾರನ್ನು ಖರೀದಿಸಿ ಅದಕ್ಕೆ ತಕ್ಕಂತೆ ಸಂಭ್ರಮಾಚರಣೆ ಮಾಡಲು ಪ್ರತೀ ಕಿಲೋಗೆ ರೂ.7 ಸಾವಿರ ತೆತ್ತು ಚಿನ್ನದ ಲೇಪಿತ ದುಬಾರಿ ಪೇಡಾವನ್ನು ಹಂಚಿರುವ ಘಟನೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಜಾಗ್ವಾರ್ ಕಾರಿನಲ್ಲಿ ಅಂತಹದು ಏನಿದೆ?

Also read: ಸತ್ತ ಮೇಲೂ ಗರ್ಭಕೋಶ ಕಸಿಯಿಂದ ತಾಯಿಯಾದ ಈ ಮಹಿಳೆಯ ಸ್ಟೋರಿ ಓದಿ, ನಿಮ ಕಣ್ಣಲ್ಲಿ ನೀರು ಬರುತ್ತೆ…

ಐಷಾರಾಮಿ ಕಾರಿನ್ನು ಖರೀದಿಸುವುದು ಅಷ್ಟೊಂದು ಸರಳವಲ್ಲ, ಲಕ್ಷಾಂತರ ಬೆಲೆಯಿರುವ ಈ ಕಾರು 1922ರಲ್ಲಿ ಯುನೈಟೆಡ್ ಕಿಂಗ್‍ಡಮ್‍‍ನಲ್ಲಿ ಪ್ರಾರಂಭಗೊಂಡ ಜಾಗ್ವಾರ್ ಆಗಿನಿಂದಲೂ ಗ್ರಾಹಕರಿಗೆ ತಮ್ಮ ಕಾರಿನಲ್ಲಿ ಐಷಾರಾಮಿ ಸೌಲತ್ತುಗಳನ್ನು ಒದಗಿಸುತ್ತಿದೆ. ಕೇವಲ ಐಷಾರಾಮಿ ಪಾಸ್ಸೆಂಜರ್ ಕಾರುಗಳನ್ನಲ್ಲದೇ, ಹೆಚ್ಚು ಸಾಮರ್ಥ್ಯವಿರುವ ಸ್ಪೋರ್ಟ್ಸ್ ಕಾರುಗಳನ್ನು ಜಾಗ್ವಾರ್ ಸಂಸ್ಥೆಯು ತಯಾರಿಸುತ್ತಿದೆ. ಇನ್ನು ಜಾಗ್ವಾರ್ ಎಕ್ಸ್ಜೆ ಕಾರು 5255 MM ಉದ್ದ, 1460 MM ಎತ್ತರ, 2105 MM ಅಗಲ, 3157 MM ವ್ಹೀಲ್ ಬೇಸ್ ಮತ್ತು 104 MM ‍ನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಅಲ್ಲದೆ 19 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಒಳಗೊಂಡಿದೆ. ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಇಬಿಡಿ, ಪಾರ್ಕಿಂಗ್ ಸೆನ್ಸಾರ್, ಸೆಂಟ್ರಲ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಬ್ರೇಕ್ ಅಸಿಸ್ಟ್, ಚೈಲ್ಡ್ ಸೇಫ್ಟಿ ಲಾಕ್ಸ್, ಪ್ಯಾಸ್ಸೆಂಜರ್ ಏರ್‍‍ಬ್ಯಾಗ್ ಮತ್ತು ಇನ್ನಿತರೆ ವಿಶೇಷತೆಯನ್ನು ಹೊಂದಿದೆ.

Also read: ರಕ್ತದಾನ ಮಾಡಲು ಹೆದರುವ ವ್ಯಕ್ತಿಗಳು ಈ ಮಾಹಿತಿ ನೋಡಿ; ರಕ್ತದಾನ ಮಾಡುವುದರಿಂದ ಹೃದಯಕ್ಕೆ ಸಂಬಂದಿಸಿದ ಖಾಯಿಲೆಗಳು ಬರೋದಿಲ್ವಂತೆ..

ಇಷ್ಟೊಂದು ವಿಶೇಷತೆಯನ್ನು ಹೊಂದಿರುವ ಕಾರನ್ನು ರೈತ ಸುರೇಶ್, ಬಿಳಿ ಬಣ್ಣದ ಮರ್ಸಿಡಿಸ್ ಬೆಂಝ್ ಬಿ-ಕ್ಲಾಸ್ ಕಾರಿನ ಒಡೆಯರಾಗಿದ್ದು, ಬೆಂಝ್ ಬಿ-ಕ್ಲಾಸ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 31.99 ಲಕ್ಷದಾಗಿದ್ದು, ಟ್ರಾನ್ಸ್-ಕಾರ್ ಕಂಪೆನಿಯ ಮುಖಾಂತರ ಈ ಕಾರನ್ನು ಸುರೇಶ್ ಕುಟುಂಬ ಮುಂದೆ ಡೆಲಿವರಿ ಮಾಡಿದ್ದಾರೆ. ಈ ಸಮಯದಲ್ಲಿ ತಂದೆಯ ಆಸೆಯನ್ನು ಕುರಿತು ಸುರೇಶ್ ಅವರ ಮಗನಾದ ದೀಪಕ್ ಈ ಸಂತೋಷದ ವಿಷಯದ ಬಗ್ಗೆ ಮಾತನಾಡುತ್ತಾ. ‘ನಾವು ಐಷಾರಾಮಿ ಜಾಗ್ವಾರ್ ಕಾರನ್ನು ಖರೀದಿಸಿದ್ದೇವೆ. ನಮ್ಮ ತಂದೆಯ ಆಸೆ ಯಂತೆ ಈ ಸಂಭ್ರಮವನ್ನು ಐಷಾರಾಮಿಯಾಗಿಯೇ ಸಂಭ್ರಮಿಸುತೇವೆ ಎಂದು ಹೇಳಿದ್ದಾರೆ.

ಇದೆಲ್ಲ ನೋಡಿದರೆ ಪ್ರತೀಯೋಬ್ಬರಿಗೂ ಆಸೆ ಎನ್ನುವುದು ಇರಲೇಬೇಕು ಅದನ್ನು ಸಾಕಾರಗೊಳಿಸಲು ಇಷ್ಟಪಟ್ಟು ದುಡಿಯಬೇಕು. ಇದಕ್ಕೆ ರೈತನಾದರೂ ಸರಿ ಬಡವನಾದರೂ ಸರಿ ತನ್ನ ಗುರಿ ಸಾಧನೆಯಂತೆ ದುಡಿದರೆ ಏನ್ ಬೇಕಾದರು ಸಾಧಿಸಬಹುದು.