ರೈತರೊಬ್ಬರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಬೇಸತ್ತು ನಡೆಸಿದ ವಿನೂತನ ಪ್ರತಿಭಟನೆ ಕೇಂದ್ರ ಸರ್ಕಾರ ನಾಚುವಂತಿದೆ..

0
380

ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿದ ರೈತರು ಒಂದಿಲ್ಲದೊಂದು ಕಷ್ಟಗಳನ್ನೂ ಅನುಭವಿಸುತ್ತಿದ್ದಾರೆ. ಒಂದು ಕಡೆ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆಯನ್ನು ನೀಡುತ್ತಿಲ್ಲ ಎಂದು ದೇಶದ ತುಂಬೆಲ್ಲ ಪ್ರತಿಭಟನೆಗಳು ನಡೆಯುತ್ತಿವೆ. ಇಂತಹ ಪ್ರತಿಭಟನೆಗಳು ಸಾಮಾನ್ಯವಾಗಿವೆ. ಆದರೆ ಮಹಾರಾಷ್ಟ್ರದ ಪ್ರಗತಿಪರ ರೈತ ಸಂಜಯ್ ಸಾಥೆ ತಾನು ಬೆಳೆದ ಬೆಳೆಗೆ ಕೇಂದ್ರ ಸರ್ಕಾರ ನೀಡಿದ ಬೆಲೆಯನ್ನು ಖಂಡಿಸಿ ವಿಬ್ಬಿನ್ನವಾಗಿ ಪ್ರತಿಭಟನೆ ಮಾಡಿ ದೇಶದಲ್ಲಿ ಹೊಸ ಕ್ರಾಂತಿ ವುಂಟು ಮಾಡಿದ್ದಾನೆ.

Also read: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ; ಬರಿ 100 ರೂ. ಗೆ 5 ಲೀಟರ್ ಪೆಟ್ರೋಲ್..

ಏನಿದು ಸಂಜಯ್ ಸಾಥೆ ಪ್ರತಿಭಟನೆ?

ಮಹಾರಾಷ್ಟ್ರದ ಈರುಳ್ಳಿ ಬೆಳೆಗಾರ ರೈತರೊಬ್ಬರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಂಜಯ್ ಸಾಥೆ ತಮ್ಮ ವೈಜ್ಞಾನಿಕ ಪದ್ಧತಿ ಮೂಲಕ ಈರುಳ್ಳಿ ಬೆಳೆ ಬೆಳೆದಿದ್ದರು. ಅವರ ಶ್ರಮಕ್ಕೆ ಪ್ರತಿಫಲ ಎಂಬಂತೆ ಉತ್ತಮ ಫಸಲು ಕೂಡ ಬಂದಿತ್ತು. ಹೀಗೆ ಬೆಳೆದ ಸುಮಾರು 750 ಕೆಜೆ ಈರುಳ್ಳಿಯನ್ನು ಮಾರಾಟ ಮಾಡಲು ಸ್ಥಳೀಯ ನಿಪ್ಹಾಡ್​ ಮಾರುಕಟ್ಟೆಗೆ ಹೋದಾಗ ಅಲ್ಲಿ ಅತಿಯಾದ ಕೆಳಮಟ್ಟದ ಬೆಲೆಗೆ ಮಾರಾಟವಾಗಿದೆ.

Also read: ಪ್ರಯಾಣ ಮಾಡುವಾಗ ವಾಂತಿ ಹಾಗೂ ತಲೆಸುತ್ತಿನಿಂದ ಮುಕ್ತಿ ಸಿಗಬೇಕಾದರೆ ಈ ಮನೆಮದ್ದುಗಳನ್ನು ಪಾಲಿಸಿ…!!

ರೈತ ಸಂಜಯ್ ಅವರ ಇರುಳ್ಳಿಯ ಬೆಲೆ ಕೇಳಿದರೆ ರೈತರು ಬದುಕುವುದು ಕಷ್ಟವಾಗುತ್ತೆ. ಅಷ್ಟೊಂದು ಕಡಿಮೆ ಅಂದ್ರೆ ಒಂದು ಕೆ.ಜಿಗೆ ಒಂದು ರೂ. ಮಾತ್ರ. ನಾಲ್ಕು ತಿಂಗಳಿಂದ ಕಷ್ಟಪಟ್ಟು ಬೆಳೆದ ಬೆಳೆಗೆ ದೊರೆತ ಲಾಭ ನೋಡಿ ದುಃಖಿತ ರೈತ ಹೇಗೋ ಗುದ್ಯಾಡಿ ಕೆ.ಜಿಗೆ 1.40 ರೂ.ಗಳಂತೆ 750 ಕೆ.ಜಿ ಇರುಳ್ಳಿ ಮಾರಾಟ ಮಾಡಿದರು ಬರಿ 1064 ರೂ. ಸಿಕ್ಕಿದೆ ಇದಕ್ಕೆ ಬೇಸತ್ತ ಸಂಜಯ್ ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಆ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿ ಪ್ರತಿಭಟನೆ ಮಾಡಿದ್ದಾರೆ.

ಅಷ್ಟೇ ಅಲ್ಲದೆ 1064 ರೂ.ಗಳಿಗೆ ಇನ್ನೂ 54 ರೂ.ಗಳನ್ನು ಸೇರಿಸಿ ಪ್ರಧಾನಿ ಪರಿಹಾರ ನಿಧಿಗೆ ರವಾನಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ನಾಲ್ಕು ತಿಂಗಳಿಂದ ಬೆಳೆದ ಉತ್ತಮ ಫಸಲಿಗೆ ಉತ್ತಮ ಬೆಲೆ ಸಿಗದಾದಾಗ ಬಹಳ ನೋವಾಯಿತು. ಹಾಗಾಗಿ ಹಣವನ್ನು ಪ್ರಧಾನಿಗೆ ದಾನ ಮಾಡಲು ನಾನು ನಿರ್ಧರಿಸಿದೆ. ಮನಿ ಆರ್ಡರ್​ ಹಣವನ್ನೂ ಹಾಕಿ ಪ್ರಧಾನಿ ಪರಿಹಾರ ನಿಧಿಗೆ ರವಾನಿಸಿದೆ. ನಾನು ಯಾವ ಪಕ್ಷದವನೂ ಅಲ್ಲ. ಆದರೆ, ರೈತರ ಸಮಸ್ಯೆಗಳ ಬಗೆಗೆ ಮೋದಿ ಅವರ ನಿರ್ಲಕ್ಷ್ಯವನ್ನು ಖಂಡಿಸಲು ನಾನು ಹೀಗೆ ಮಾಡಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಬರಾಕ್​ ಒಬಾಮಾ ಜೊತೆ ಸಂವಾದ ನಡೆಸಿದ ಈ ರೈತ ಸಂಜಯ್:

ವಿಬ್ಬಿನ್ನ ಪ್ರತಿಭಟನೆ ಮೂಲಕ ಹೆಸರು ಪಡೆದ ಸಂಜಯ್ ಅವರು ಕೃಷಿಯಲ್ಲಿ ತಾವು ಅಳವಡಿಸಿಕೊಂಡಿದ್ದ ವೈಜ್ಞಾನಿಕತೆಯಿಂದಲೇ ಮಹಾರಾಷ್ಟ್ರದಾದ್ಯಂತ ಪ್ರಸಿದ್ಧವಾಗಿದ್ದಾರೆ. 2010ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್​ ಒಬಾಮಾ ಅವರು ಭಾರತಕ್ಕೆ ಆಗಮಿಸಿದಾಗ ಅವರೊಂದಿಗೆ ಸಂವಾದ ನಡೆಸಲೂ ಇದೇ ಸಂಜಯ್ ಸಾಥೆ ಆಯ್ಕೆಯಾಗಿದ್ದರು. ಇಷ್ಟೆಲ್ಲಾ ಪ್ರತಿಭೆ ಹೊಂದಿರುವ ಸಂಜಯ್ ವೈಜ್ಞಾನಿಕ ಪದ್ಧತಿ ಮೂಲಕ ಕೃಷಿ ಮಾಡಿದರು ಶ್ರಮಕ್ಕೆ ಪ್ರತಿಫಲವಿಲ್ಲದ ಹಿನ್ನೆಲೆಯಲ್ಲಿ. ಕೇಂದ್ರ ಸರ್ಕಾರದ ವಿರುದ್ದ ಕೈಗೊಂಡ ಪ್ರತಿಭಟನೆ ಕಾರ್ಯಕ್ಕೆ ಮಿಶ್ರ ಪ್ರತಿಕ್ರಿಯೆ ತೋರಿ ಕೇಂದ್ರ ಸರ್ಕಾರದ ಮತ್ತೆ ವಿಮರ್ಶೆಕ್ಕೆ ಒಳಗಾಗಿದೆ.