ಬಿತ್ತನೆ ಬೀಜ ಖರೀದಿಸಲು ರೈತರು 500 ರೂ. ನೋಟು ಬಳಸಬಹುದು

0
509

ನವದೆಹಲಿ: ಸರ್ಕಾರಿ ಮಳಿಗೆಗಳಲ್ಲಿ ಬಿತ್ತನೆ ಬೀಜ ಖರೀದಿಸಲು ರೈತರು 500 ರೂ. ನೋಟು ಬಳಸಬಹುದು ಎಂದು ಕೇಂದ್ರ ಹಣಕಾಸು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ರೈತರು ತಮ್ಮ ಕೈಯಲ್ಲಿ ನಗದು ಹಣ ಇಲ್ಲದೆ ಕೃಷಿ ಕಾರ್ಯಕ್ಕೆ ಅವಶ್ಯವಿರುವ ಬೀಜ ಇತ್ಯಾದಿಗಳನ್ನು ಖರೀದಿಸಲು ಅಸಮರ್ಥರಾದರು. ಹಾಗಾಗಿ ರಾಬಿ ಕೃಷಿ ಕಾರ್ಯಕ್ಕೆ ತೀವ್ರ ಧಕ್ಕೆ ಉಂಟಾಗಿತ್ತು. ಅಂತೆಯೇ ಸರಕಾರ ರೈತರ ನೆರವಿಗೆ ಬಂದಿದ್ದು ರದ್ದಾಗಿರುವ ಹಳೆ 500 ರೂ. ನೋಟುಗಳನ್ನು ಬಳಸಿಕೊಂಡು ಬೀಜ ಖರೀದಿಸಬಹುದು ಎಂದು ಹೇಳಿತು.

ಭಾರತ ಸರ್ಕಾರ ಬುಧವಾರ 9 ನವೆಂಬರ್ 2016 ರಿಂದ ಎಲ್ಲಾ ರೂ..500 ಮತ್ತು ರೂ. 1000 ಬ್ಯಾಂಕ್-ನೋಟುಗಳ ಅನಾಣ್ಯೀಕರಣವನ್ನು ಘೋಷಣೆ ಮಾಡಿದ್ದು, ಭಾರತದಲ್ಲಿ ಕಾನೂನು ಬದ್ಧವಾಗಿ ಮಹಾತ್ಮ ಗಾಂಧಿ ಸರಣಿಯ ರೂ.1000 ಬ್ಯಾಂಕ್ ನೋಟುಗಳ ಮೌಲ್ಯವನ್ನು (ನವೆಂಬರ್ 08,2016 ಮದ್ಯರಾತ್ರಿಯಿಂದ) ರದ್ದುಗಳಿಸುತ್ತಿರುವುದಾಗಿ 8 ನವೆಂಬರ್ 2016 ರಲ್ಲಿ ಘೋಶಿಸಲಾಯಿತು.

ಬೆಳೆ ಸಾಲದ ಹಣ ವಾರಕ್ಕೆ 25000 ರೂ. ಡ್ರಾ ಮಾಡಲು ಅನುವು ಮಾಡಿಕೊಟ್ಟಿದ್ದ ಕೇಂದ್ರ ಸರ್ಕಾರ ಇದೀಗ ಹಳೇ ನೋಟುಗಳನ್ನ ಬೀಜ ಖರೀದಿಗೂ ಬಳಸಲು ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಸರ್ಕಾರಿ ಮಳಿಗೆಗಳಲ್ಲಿ ಬಿತ್ತನೆ ಬೀಜ ಖರೀದಿಸಲು ರೈತರು 500 ರೂ. ನೋಟು ಬಳಸಬಹುದು ಎಂದು ಕೇಂದ್ರ ಹಣಕಾಸು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಇಂಡಿಯನ್ ಎಕ್ಸ್`ಪ್ರೆಸ್ ವರದಿ ಮಾಡಿದೆ.

*ರೈತರು ಕೃಷಿ ಸಾಲ ಖಾತೆ ಹಾಗೂ ಕಿಸಾನ್‌ ಕಾರ್ಡ್‌ ಬಳಸಿ ವಾರಕ್ಕೆ ರೂ.25 ಸಾವಿರ ಪಡೆದುಕೊಳ್ಳಬಹುದು.

*ಕೃಷಿ ಮಾರುಕಟ್ಟೆ ವ್ಯಾಪಾರಿಗಳು ಪ್ರತಿ ವಾರಕ್ಕೆ ರೂ.50 ಸಾವಿರವನ್ನು ತೆಗೆದುಕೊಳ್ಳಬಹುದು.

*ಕೃಷಿ ಸಾಲ ವಿಮೆ ಮೊತ್ತ ಪಾವತಿಗೆ 15 ದಿನಗಳ ಕಾಲಾವಕಾಶ ನೀಡಿ ವಿಸ್ತರಣೆ.

ಈ ನಡುವೆ ಆರ್‌ ಬಿ ಐ, ಬ್ಯಾಂಕುಗಳಲ್ಲಿ ಗ್ರಾಹಕರು ನಗದು ಹಿಂಪಡೆಯುವುದಕ್ಕೆ ಹೇರಿದ್ದ ಕೆಲವು ನಿರ್ಬಂಧಗಳನ್ನು ಸಡಿಲು ಗೊಳಿಸಿದೆ. ಓವರ್‌ ಡ್ರಾಫ್ಟ್ ಮತ್ತು ಕ್ಯಾಶ್‌ ಕ್ರೆಡಿಟ್‌ ಖಾತೆದಾರರು ಈಗ ವಾರಕ್ಕೆ 50,000 ರೂ.ನಗದನ್ನು ಹಿಂಪಡೆಯಬಹುದಾಗಿದೆ ಎಂದು ಹೇಳಿದೆ. ಈ ವರೆಗೆ ಚಾಲ್ತಿ ಖಾತೆದಾರರಿಗೆ ಮಾತ್ರವೇ ವಾರಕ್ಕೆ 50,000 ರೂ. ನಗದನ್ನು ಹಿಂಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು.