50ಕೆ.ಜಿ. ಆಲೂಗಡ್ಡೆ ಬೆಳೆದ ರೈತನಿಗೆ ಸಿಕ್ಕಿದ್ದು ಕೇವಲ ಒಂದು ರೂಪಾಯಿ!!

0
665

ಇಂದೋರ್ ನಲ್ಲಿ ರೈತ ಬೆಳೆದ ಆಲುಗಡ್ಡೆ ಕೈ ಸುಡುತ್ತಿದೆ. 50 ಕೆ.ಜಿ ತೂಕದ ಆಲೂಗಡ್ಡೆ ಬೆಳೆಗೆ ಕೇವಲ 1 ರೂ. ಮಾತ್ರ  ಮಾತ್ರ ಸಿಗುತ್ತಿದೆ. ಆಲು ಗಡ್ಡೆ 1175 ರೂ. ಮಾರಾಟವಾಗುತ್ತಿದೆ. ಮಾರುಕಟ್ಟೆಯ ವೆಚ್ಚವೇ  1174 ರೂ ಆಗುತ್ತದೆ. ಇದರಿಂದ ರೈತರಿಗೆ 1 ರೂಮಾತ್ರ ಉಳಿತಾಯವಾಗುತ್ತದೆ.

ಫೆ. 23 ರಂದು ಮಧ್ಯ ಪ್ರದೇಶದ ಇಶ್ವರ್ ಖೆದಿಯ ರಾಜಕುಮಾರ್ ಚೌದರಿ ಅವರು 10 ಮೂಟೆ ಆಲುಗಡ್ಡೆ ಮಾರಲು ಬಂದಿದ್ದರು. ಅವರು ತಂದಿದ್ದ ಆಲುಗಡ್ಡೆಗೆ ಮಾರುಕಟ್ಟೆಯಲ್ಲಿ 1175 ಬೆಲೆ ನಿಗದಿ ಆಯಿತು. ರೈತ ಹೊಲದಿಂದ ಮಾರುಕಟ್ಟೆ ಮಳಿಗೆಗೆ ತರಲುಮಾಡಿದ ಖರ್ಚು 1000 ಆಗಿತ್ತು. ಇನ್ನು 174 ಇತರೆ ಖರ್ಚೆಂದು ರಾಜಕುಮಾರ್‍ ತಿಳಿಸಿದ್ದಾರೆ. ಅಂದರೆ ಅವರಿಗೆ ಉಳಿಯುವ ಹಣ 1 ರೂ.

ರಾಜಕುಮಾರ್ ಅವರ ಸಮಸ್ಯೆಯ ಕೇಂದ್ರ ಸಚಿವರ ತನಕ ಹೋಯಿತು. ಇನ್ನು ಸಚಿವರು ಈ ವಿಷಯವನ್ನು ಪ್ರಧಾನಿ ಮೋದಿಅವರ ಗಮನಕ್ಕೆ ತಂದರು.

ಇದೇ ಸಮಸ್ಯೆಯನ್ನು ಭಾರತದ ಇತರೆ  ರೈತರದ್ದು ಆಗಿದೆ. ಹಳೆ ನೋಟಿನ ರದ್ದತಿ ಹಾಗೂ ಹೊಸ ನೋಟಿನ ಚಲಾವಣೆ, ಬರಗಾಲ, ಮಾರುಕಟ್ಟೆಯಲ್ಲಿ ಬೆಲೆಯ ಏರಿಳಿತ ಇದರಿಂದ ಕಂಗೆಟ್ಟ ರೈತರು ಲಾಭವಿಲ್ಲದೆ ಕಂಗಾಲಾಗಿದ್ದಾರೆ

ಮಧ್ಯ ಪ್ರದೇಶದಲ್ಲಿ ಬೆಲೆ ಹಾನಿಯಿಂದ ಮೂರು ತಿಂಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರಸಚಿವಾಲಯ ತಿಳಿಸಿದೆ. ಸರ್ಕಾರ ಬೆಂಬಲ ಬೆಲೆ ಘೋಷಿಸದೆ ಇರುವುದು ರೈತರ ಚಿಂತೆಯನ್ನು ಹೆಚ್ಚಿಸಿದೆ.

ಇನ್ನು ಬೆಳೆಗೆ ಬೆಲೆ ಸಿಗದೆ ಕಂಗಾಲದ ರೈತ, ಆಲುಗಡ್ಡೆಯನ್ನು ರಸ್ತೆಯಲ್ಲಿ ಚೆಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಇದೇಪರಿಸ್ಥಿತಿ ದೇಶದ ಬೇರೆ ಬೇರೆ ರಾಜ್ಯದ ರೈತರದ್ದಾಗಿದೆ.

ಕೆಲ ತಿಂಗಳಿನಿಂದ ಕಾಡುತ್ತಿರುವ ಸವಾಲುಗಳೇನು?

–      ಕ್ಯಾಶ್ ಲೆಸ್ ವ್ಯವಹಾರ

–      ಹಣ ಇಲ್ಲದೆ ಪರದಾಟ

–      ವ್ಯತಿರಿಕ್ತ ಹವಾಮಾನ

–      ಬರಗಾಲ