ಕರ್ನಾಟಕದ ಮಲೆನಾಡಿನ ಬಿ.ಜೆ.ಪಿ. ನಾಯಕರು ಮಾಡಿದ ಈ ಒಳ್ಳೆ ಕೆಲಸಕ್ಕೆ ಅಡಿಕೆ ಬೆಳೆದಾರರು ಭಾರಿ ಖುಷಿ ಪಡುವಂತಾಗಿದೆ, ಯಾಕೆ ಗೊತ್ತ??

0
1428

Kannada News | Karnataka News

ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಜನರ ಜೀವನಾಡಿ ಎಂದೇ ಗುರುತಿಸಿಕೊಂಡಿರುವ ಅಡಿಕೆಗೆ ಈಗ ಸಕಾಲ ಬಂದಿದೆ. ಅಡಿಕೆ ಬೆಳೆಗಾರರು ಇನ್ನು ಮುಂದೆ ಯಾವುದೇ ನಿಷೇಧದ ಭಯವಿಲ್ಲದೆ ತಾವು ಬೆಳೆದ ಅಡಿಕೆಯನ್ನು ಸ್ವತಂತ್ರವಾಗಿ ಹೆಚ್ಚಿನ ಬೆಳೆಗೆ ಮಾರಬಹುದಾಗಿದೆ ಹೇಗೆ ಗೊತ್ತೇ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಅಡಿಕೆ ಬೆಳೆಯನ್ನು ಆಹಾರ ವಸ್ತುವೆಂದು ಅಧಿಕೃತವಾಗಿ ಘೋಷಿಸಲಿದೆಯಂತೆ. ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಪ್ರಧಾನಿಯ ಗಮನಕ್ಕೆ ತಂದು, ಪರಿಹಾರ ಕಂಡುಕೊಳ್ಳುವಲ್ಲಿ ಮಲೆನಾಡು ಹಾಗು ಕರಾವಳಿ ಭಾಗದ ಬಿಜೆಪಿ ನಾಯಕರುಗಳು ಯಶ ಕಂಡಿದ್ದಾರೆ.

ಹೌದು, ಮಲೆನಾಡು ಅಥವಾ ಕರಾವಳಿಯಲ್ಲಿ ನಡೆಯಲಿರುವ ನರೇಂದ್ರ ಮೋದಿಯವರ ಮುಂದಿನ ಸಮಾವೇಶದಲ್ಲಿ, ಪ್ರಧಾನಿಯವರಿಂದಲೇ ಈ ಘೋಷಣೆ ಮಾಡಿಸಲು ರಾಜ್ಯ ಬಿಜೆಪಿ ತಯಾರಿ ನಡೆಸಿದೆ. ಒಂದು ವೇಳೆ ಇದು ಯಶಸ್ವಿಯಾದರೆ ಕರ್ನಾಟಕದ ಅಡಿಕೆ ಬೆಳೆಗಾರರ ದಶಕಗಳ ಹೋರಾಟಕ್ಕೆ ಮನ್ನಣೆ ಸಿಗಲಿದೆ.

ಈ ಮೊದಲು ಅಡಿಕೆ ಬೆಳೆಗಾರರು, ಅಡಿಕೆ ಮಾರಾಟ ಮಾಡುವ ಅಥವಾ ಗುಟ್ಕಾ ಮತ್ತು ಪಾನ್ ಮಸಾಲಾ ಕಂಪನಿಗಳ ಮೇಲೆ ನಿರ್ಭರವಾಗಬೇಕಿತ್ತು. ಅದರಲ್ಲಿಯೂ ಸರ್ಕಾರ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧದ ನಂತರ ಅಡಿಕೆ ಬೆಳೆಗಾರರು ಕಂಗಾಲಾಗಿದ್ದರು, ಕಷ್ಟ-ಪಟ್ಟು ಹುಳು ಮತ್ತು ಬೆಳೆ ನಾಶದಿಂದ ತಪ್ಪಿಸಿ ಬೆಳೆದ ಅಡಿಕೆ ಬೀದಿಗೆ ಚೆಲ್ಲುವ ಪರಿಸ್ಥಿತಿ ಇತ್ತು.

ಎರಡು ವರ್ಷದ ಹಿಂದೆ ಅಡಿಕೆ ಧಾರಣೆಯಲ್ಲಿ ವ್ಯಾಪಕ ಕುಸಿತ ಕಂಡಿದ್ದಾಗ ಸ್ಪಂದಿಸಿದ ಮೋದಿ ಸರ್ಕಾರ, ವಿದೇಶದಿಂದ ಆಮದಾಗುತ್ತಿದ್ದ‌ ಅಡಿಕೆ ಮೇಲಿನ ಸುಂಕ ಹೆಚ್ಚಿಸಿ, ಕರ್ನಾಟಕದ ಅಡಿಕೆಗೆ ಉತ್ತಮವಾದ ಮಾರ್ಕೆಟ್ ಒದಗಿಸಿದ್ದರು. ಕೆಲವೇ ದಿನದಲ್ಲಿ ಅಡಿಕೆ ಧಾರಣೆಯಲ್ಲಿ ಗಣನೀಯ ಏರಿಕೆ ಕಂಡು ಬಂದು ರೈತರು ನಿಟ್ಟುಸಿರು ಬಿಡುವಂತಾಗಿತ್ತು.

ಇನ್ನು ಇದಕ್ಕೂ ಮುನ್ನ ಅಡಿಕೆಯಲ್ಲಿ ಯಾವುದೇ ಹಾನಿಕಾರಕ ವಸ್ತುಗಳಲಿಲ್ಲ ಎಂಬ ಪ್ರಯೋಗಶಾಲೆಗಳ ವರದಿ ಆಧರಿಸಿ ಭಾರತ ಸರಕಾರದ ಅಟಾರ್ನಿ ಜನರಲ್ ಅವರು ಸುಪ್ರೀಂ ಕೋರ್ಟ್ ಗೆ ಅಫಿಡವಿತ್ ಸಲ್ಲಿಸುವ ಮೂಲಕ, ಹಿಂದಿನ ಯುಪಿಎ ಸರಕಾರ ಸಲ್ಲಿಸಿದ ಅಫಿಡವಿತನ್ನು ಅನೂರ್ಜಿತಗೊಳಿಸುವಂತೆ ನ್ಯಾಯಲಾಯಕ್ಕೆ ಮೋದಿಯವರು ಮನವಿ ಮಾಡಲಿದ್ದಾರೆ.

Also Read: ದೊಡ್ಡ ದೊಡ್ಡ ಉದ್ಯಮಿಗಳು ಬ್ಯಾಂಕ್-ಗಳಲ್ಲಿ ಸಾಲ ಮಾಡಿ ಹಿಂದಿರುಗಿಸಲು ಆಗದೇ ಇರುವ ಮೊತ್ತ 3 ಲಕ್ಷ ಕೋಟಿ… ಆದರೂ ಅವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ, ಆದರೆ ನಮ್ಮ ರೈತರು??