ರೆಸಾರ್ಟ್ ರಾಜಕೀಯ ಮಾಡುತ್ತಿರುವ ನಾಯಕರ ವಿರುದ್ಧ ರೈತರಿಂದ ಬುಗಿಲೆದ್ದ ‘ಕ್ಯಾಕರಿಸಿ ಉಗಿಯುವ’ ಛೀ.. ಥೂ..ಚಳುವಳಿ..

0
248

ರಾಜ್ಯದಲ್ಲಿ ಬುಗಿಲೆದ್ದ ರಾಜಕೀಯ ನಾಯಕರು ರೆಸಾರ್ಟ್-ನಲ್ಲಿ ವಾಸ್ತವ್ಯ ಹೂಡಿದ್ದು, ರಾಜ್ಯದ ರೈತರು ಸಂಕಷ್ಟದಲ್ಲಿದರು ಇವರ ಹುಚ್ಚಾಟ ಮಾತ್ರ ಮುಂದುವರೆದಿದೆ. ಇಂತಹ ಶಾಸಕರ ವಿರುದ್ಧ ರೈತರು ಬೀದಿಗಿಳಿದು ಛೀ.. ಥೂ.. ಚಳುವಳಿ ಮಾಡುತ್ತಿದ್ದಾರೆ ನಿನ್ನೆ ಇಂದಲೇ ಈ ಚಳುವಳಿಯನ್ನು ರಾಜ್ಯದ ಹಲವು ಕಡೆಯಲ್ಲಿ ನಡೆಸುತ್ತಿದ್ದು. ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ, ಕುಮಾರಸ್ವಾಮಿ, ಮತ್ತು ಸಿದ್ದರಾಮಯ್ಯ ನವರ ಫೋಟೋ-ಗಳಿಗೆ ರಸ್ತೆಯಲ್ಲೇ ಸಾಲಾಗಿ ನಿಂತು ಉಗುಳಿ ಹೋರಾಟ ಮಾಡುತ್ತಿದ್ದು, ಇದು ದೊಡ್ಡ ಮಟ್ಟದಲ್ಲಿ ಸರ್ಕಾರಕ್ಕೆ ತಟ್ಟುವ ಸುದ್ದಿ ಹರಿದಾಡುತ್ತಿದೆ.

Also read: ಕರ್ನಾಟಕದ ಕುಳ್ಳ ದ್ವಾರಕೀಶ್ ಇನ್ನಿಲ್ಲ, ಎನ್ನುವ ಸುಳ್ಳು ಸುದ್ದಿಗೆ ಖುದ್ದು ದ್ವಾರಕೀಶ್ ಅವರೇ ವಿಡಿಯೋ ಒಂದನ್ನು ಹರಿ ಬಿಟ್ಟು ಹೇಳಿದ್ದು ಏನು ಗೊತ್ತಾ??

ಹೌದು ರಾಜ್ಯದ ಜನರು ರೈತರು ಹಾಕಿದ ಮತ ಭಿಕ್ಷೆಯನ್ನು ಪಡೆದು ಹುಚ್ಚರ ರೀತಿಯಲ್ಲಿ ರಾಜಕೀಯ ನಡೆಸಿರುವ ಹೊಲಸು ಶಾಸಕರು ತಮ್ಮ ಅಧಿಕಾರದ ಆಸೆಗಾಗಿ ರೆಸಾರ್ಟ್ ಸೇರಿದ್ದಾರೆ. ಇವರಿಗೆ ಸ್ವಂತ ರಾಜಕೀಯ ಚಟ ಬಿಟ್ಟರೆ ರೈತರ ಮತ್ತು ಸ್ವಂತ ತಾಲೂಕಿನ ಜನರ ಮೇಲೆ ಎಳಷ್ಟು ಕಾಳಜಿ ಇಲ್ಲದ ಕಾರಣ ತಮ್ಮನ್ನೇ ಮಾರಾಟ ಮಾಡಿಕೊಳ್ಳುತ್ತಿದ್ದಾರೆ, ಇನ್ನೂ ಜನರನ್ನು ಬಿಡುತ್ತಾರ? ಎನ್ನುವ ಮಾತುಗಳು ಕೇಳಿಬರುತ್ತಿದ್ದು. ಪ್ರಸ್ತುತ ರಾಜ್ಯದ ಹಲವೆಡೆ ಮುಂಗಾರು ಮಳೆ ಕೈಕೊಟ್ಟು ಬರಗಾಲ ಸ್ಥಿತಿ ಆವರಿಸಿದೆ. ಮಳೆಗಾಲದ ವೇಳೆಯೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವಂತಹ ದುಃಸ್ಥಿತಿಯಿದೆ. ಜನ-ಜಾನುವಾರುಗಳ ಸ್ಥಿತಿ ಶೋಚನೀಯವಾಗಿದೆ.

ಏನಿದು ಉಗಿಯುವ’ ಚಳವಳಿ?

Also read: ರೇಷನ್‌ ಕಾರ್ಡ್ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ; ಶೀಘ್ರದಲ್ಲೇ ರೇಷನ್‌ ಕಾರ್ಡ್ ಪೋರ್ಟೆಬಿಲಿಟಿ ಜಾರಿಗೆ..

ರಾಜ್ಯ ರೈತ ಸಂಘದ ಕಾರ್ಯಕರ್ತರು ರೆಸಾರ್ಟ್ ರಾಜಕಾರಣ ಮಾಡುತಿರುವ ಶಾಸಕರ ಭಾವಚಿತ್ರಕ್ಕೆ ಎಲೆ ಅಡಿಕೆಯ ಎಂಜಲನ್ನು ಉಗಿದು ಛೀ…ಥೂ.. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರು,ಶಿವಮೊಗ್ಗ ಹಾವೇರಿ, ಬೆಂಗಳೂರು ಸೇರಿದಂತೆ ಹಲವು ಕಡೆಯಲ್ಲಿ ಚಳುವಳಿಯನ್ನು ನಡೆಸಿರುವ ರೈತರು ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಶಾಸಕರನ್ನು ಪೈಸೆ ಲೆಕ್ಕದಲ್ಲಿ ಹರಾಜು ಹಾಕಲಾಗಿದೆ. ಜನರ ಹಿತಾಸಕ್ತಿ ಮರೆತು ರಾಜಕೀಯ ದೊಂಬರಾಟದಲ್ಲಿ ಮುಳುಗಿರುವ ರಾಜಕೀಯ ಪಕ್ಷಗಳ ನಾಯಕರಿಗೆ ಜನ ಥೂ ಎಂದು ಕ್ಯಾಕರಿಸಿ ಉಗಿಯುತ್ತಿದ್ದಾರೆ. ಅವರ ಭಾವಚಿತ್ರಗಳಿಗೆ ಚಪ್ಪಲಿ, ಪೊರಕೆಗಳಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಉಗಿದರು ನಾಚಿಕೆ ಇಲ್ಲದ ನಾಯಕರು

Also read: ಪ್ಲಾಸ್ಟಿಕ್ ಉತ್ಪಾದಕರ ವಿರುದ್ದ ಕ್ರಮ ಕೈಗೊಳಲ್ಲು ಸೋತ BBMP, ಈಗ ನಾಗರೀಕರ ಕೈಯಲ್ಲಿ ಪ್ಲಾಸ್ಟಿಕ್‌ ಬ್ಯಾಗ್ ಕಂಡರೆ ದಂಡ ಹಾಕ್ತಾರಂತೆ!! ನಾಗರೀಕರ ಮೇಲೆ ಈ ಗದಾ ಪ್ರಹಾರ ಸರಿಯೇ??

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಈ ಮೂರು ಪಕ್ಷಗಳಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವ ಕೆಲಸ ಮಾಡಲಿದ್ದಾರೆ. ಇನ್ನಾದರೂ ಈ ಮೂರು ಪಕ್ಷಗಳ ಶಾಸಕರು ಎಚ್ಚೆತ್ತುಕೊಳ್ಳಬೇಕು. ರಾಜಕೀಯ ಆಟೋಟೋಪ ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವವರಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸುವ ಕಾನೂನು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.