ಸರಳ ವ್ಯಕ್ತಿತ್ವದ ರೈತ ಮುಖಂಡ ಕೆ.ಎಸ್ ಪುಟ್ಟಣ್ಣಯ್ಯ ನಿಧನ ಹೊಂದಿದ್ದಾರೆ, ರೈತ ಸಮೂಹಕ್ಕೆ ಇವರ ಅಗಲಿಕೆ ತುಂಬಲಾಗದ ನಷ್ಟವೇ ಸರಿ…!!

0
599

Kannada News | Karnataka News

ಮೇಲುಕೋಟೆ ಶಾಸಕ ಹಾಗು ರೈತ ಮುಖಂಡ ಕೆ.ಎಸ್ ಪುಟ್ಟಣ್ಣಯ್ಯ ನಿಧನ ಹೊಂದಿದ್ದಾರೆ. ತಮ್ಮ ಜೀವನದುದ್ದಕ್ಕೂ ರೈತರ ಬಗ್ಗೆ ಕಾಳಜಿ, ರೈತರ ಪರವಾಗಿ ಹೋರಾಟ ನಡೆಸಿದರು. ಶಾಸಕನಾಗಿದ್ದರು ಎಲ್ಲರ ಜೊತೆ ಸೇರುತ್ತಾ ಇದ್ದ ಸರಳ ವ್ಯಕ್ತಿತ್ವ ಹೊಂದಿದ್ದರು ಅವರು. ಅವರ ಅಗ್ಗಳಿಕೆ ರೈತ ಸಮೂಹಕ್ಕೆ ತುಂಬಲಾಗದ ನಷ್ಟವೇ ಸರಿ.

ಕೆ.ಎಸ್ ಪುಟ್ಟಣ್ಣಯ್ಯನವರು, ತಮ್ಮ ನೆಚ್ಚಿನ ಕಬ್ಬಡಿ ಪಂದ್ಯ ವೀಕ್ಷಿಸುತ್ತಿದ್ದ ವೇಳೆಯಲ್ಲಿ ಎದೆ ನೋವಿನಿಂದ ಕುಸಿದು ಬಿದ್ದರು. ತಕ್ಷಣ ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿದರು ಆದರೆ ಹೃದಯಾಘಾತದಿಂದ ಚೇತರಿಕೆಯಾಗದೆ, ಚಿಕಿತ್ಸೆ ಫಲಕಾರಿಯಾಗದೆ ನಿಧನಹೊಂದಿದರು.

ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕು, ಕಸಬಾ ಹೋಬಳಿ ಕ್ಯಾತನಹಳ್ಳಿ ಗ್ರಾಮದ ಕೆ.ಎಸ್. ಶ್ರೀಕಂಠೇಗೌಡ ಹಾಗೂ ಶ್ರೀಮತಿ ಕೆ.ಎಸ್. ಶಾರದಮ್ಮ ದಂಪತಿಯ ಮಗನಾಗಿ 1949 ರಲ್ಲಿ ಜನಿಸಿದ ಕೆ.ಎಸ್. ಪುಟ್ಟಣ್ಣಯ್ಯ ಕರ್ನಾಟಕ ರೈತ ಸಂಘದ ಏಕೈಕ ಸರಳ ಮತ್ತು ಕೆಚ್ಛೆದೆಯ ಹೋರಾಟಗಾರ, ಜನಪ್ರತಿನಿಧಿಯಾಗಿದ್ದರು.

ಮೃತರಿಗೆ 69 ವರ್ಷ ವಯಸಾಗಿತ್ತು. ಅವರ ಅಂತ್ಯಕ್ರಿಯೆಯನ್ನು ಬುಧವಾರದಂದು ಕ್ಯಾತನಹಳ್ಳಿಯಲ್ಲಿ ನೆರವೇರಿಸಲಾಗುತ್ತದೆ ಎಂದು ಪುತ್ರ ದರ್ಶನ್ ಹೇಳಿದ್ದಾರೆ. ಪುಟ್ಟಣ್ಣಯ್ಯ ರೈತ ನಾಯಕ ಮಾತ್ರವಲ್ಲದೇ ಉತ್ತಮ ಕಬಡ್ಡಿ, ಕುಸ್ತಿಪಟುವಾಗಿದ್ದರು. ಸಾಲಗಾರರ ಮನೆಗಳನ್ನು ಜಪ್ತಿಮಾಡುವ ಪ್ರಕ್ರಿಯೆಗೆ ನಿರ್ಬಂಧ, ಕಬ್ಬಿಗೆ ಬೆಂಬಲ ಬೆಲೆ, ಕಾವೇರಿ ಹೋರಾಟದಲ್ಲಿ ಪುಟ್ಟಣ್ಣಯ್ಯ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಇವರು ತಮ್ಮ ಹುಟ್ಟೂರಿನಲ್ಲಿಯೇ SSLC ವಿದ್ಯಾಭ್ಯಾಸ ಪಡೆದ ಬಳಿಕ ಮೈಸೂರಿನಲ್ಲಿರುವ ಸೇಂಟ್ ಫಿಲೋಮಿನಾ ಶಾಲೆಯಲ್ಲಿ ಪದವಿ ಪೂರ್ವ ಶಿಕ್ಷಣ, ಮೈಸೂರಿನ ಡಿ. ಬನುಮಯ್ಯ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. 1999 ರಿಂದ 2012 ರವರೆಗೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾಗಿ ದುಡಿದರು. ಬಳಿಕ ಸರ್ವೋದಯ ಕರ್ನಾಟಕ ಪಕ್ಷದಿಂದ ಪಾಂಡವಪುರ ಶಾಸಕರಾಗಿ ಆಯ್ಕೆಯಾಗಿದ್ದರು.

Also Read: ಮಹಾಮಸ್ತಕಾಭಿಷೇಕ ವೀಕ್ಷಿಸಲು ಕರ್ನಾಟಕಕ್ಕೆ ಆಗಮಿಸಿದ ಪ್ರಧಾನಿ, ಸಿದ್ದರಾಮಯ್ಯ ಏನು ಮಾಡಿದರು ಗೊತ್ತೇ?