ಮೈತ್ರಿ ಸರ್ಕಾರದಿಂದ ಸಾಲ ಮನ್ನಾ ವಿಚಾರಕ್ಕೆ ಮತ್ತೊಂದು ಟ್ವಿಸ್ಟ್; ಒಂದೇ ಕಂತಿನಲ್ಲಿ ಸಾಲ ಮನ್ನಾ ಮಾಡಲು ಹಣ ಬಿಡುಗಡಗೆ ಆದೇಶ..

0
238

ಕಳೆದ ಎರಡು ದಿನಗಳಿಂದ ರೈತರನ್ನು ಆತಂಕಕ್ಕೆ ದೂಡಿದ ಸಾಲಮನ್ನಾ ವಿಚಾರಕ್ಕೆ ಈಗ ಮತ್ತೊಂದು ಭರವಸೆ ಕೇಳಿ ಬಂದಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಲೋಕಸಭಾ ಚುನಾವಣೆ ಮುಗಿದ ಬಳಿಕ ರೈತರ ಸಾಲಮನ್ನಾ ಯೋಜನೆಯ ಭಾಗವಾಗಿ ಸಾವಿರಾರು ರೈತರ ಖಾತೆಯಿಂದ ಹಣ ಹಿಂಪಡೆಯಲಾಗಿದೆ ಎಂಬ ವರದಿಯಾಗಿತ್ತು, ಇದಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿಯವರು ಸ್ಪಷ್ಟನೆ ನೀಡಿದ್ದು, ಬೆಳೆ ಸಾಲಗಳನ್ನು ವರ್ಗಿಕರಿಸುವಲ್ಲಿ ಬ್ಯಾಂಕುಗಳು ಮಾಡಿದ ತಪ್ಪುಗಳಿಂದಾಗಿ ಸಾವಿರಾರು ರೈತರ ಸಾಲ ಮನ್ನಾ ಪೂರ್ಣಗೊಳಿಸುವ ಪ್ರಕ್ರಿಯೆ ಹಿನ್ನೆಡೆಗೆ ಕಾರಣವಾಗಿದೆ ಎಂದು ತಿಳಿಸಿದ ಅವರು. ಸಾಲಮನ್ನಾದ ಹಣವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡುವ ಮೂಲಕ ಎಲ್ಲ ರೈತರ ಆತಂಕಕ್ಕೆ ಸ್ಪಷಣೆ ನೀಡಿದ್ದಾರೆ.

Also read: ಕಬ್ಬನ್ ಪಾರ್ಕಿನಲ್ಲಿ ಉಚಿತ ಯೋಗ ಅಭ್ಯಾಸಕ್ಕೆ ಮುಸ್ಲಿಮರ ವಿರೋಧ; ಯೋಗದಂತೆ ನಮಾಜ್ ಮಾಡಲು ಅವಕಾಶ ನೀಡಿ ಎನ್ನುವ ಬೇಡಿಕೆ, ಮುಸ್ಲಿಂರ ವರ್ತನೆ ಸರಿನಾ??

ಒಂದೇ ಕಂತಿನಲ್ಲಿ ಸಾಲ ಮನ್ನಾ?

ಹೌದು ಕಳೆದ ಒಂದು ವರ್ಷಗಳಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದ ರೈತರ ಬೆಳೆ ಸಾಲಮನ್ನಾ ಕುರಿತು ಕೊನೆಗೂ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಮಂಗಳವಾರ ನಡೆದ ಸಭೆಯಲ್ಲಿ ವಾಣಿಜ್ಯ ಬ್ಯಾಂಕುಗಳಲ್ಲಿನ ರೈತರ ಎಲ್ಲಾ ಬೆಳೆ ಸಾಲಗಳನ್ನೂ ಏಕ ಕಾಲದಲ್ಲಿ ಮನ್ನಾ ಮಾಡುವಂತೆ ಸಿಎಂ ಕುಮಾರಸ್ವಾಮಿ ಆದೇಶಿಸಿದ್ದಾರೆ. ಅದರಂತೆ ವಾಣಿಜ್ಯ ಬ್ಯಾಂಕು ಗಳಿಂದ ಪಡೆದಿರುವ ಬೆಳೆ ಸಾಲ ಮನ್ನಾ ಸಂಬಂಧಿಸಿದಂತೆ ಅರ್ಹತೆ ಹೊಂದಿರುವ ರಿಸ್ಟ್ರಕ್ಚರ್ಡ್ ಸಾಲ, ಅರ್ಹತೆ ಹೊಂದಿರುವ ಓವರ್ ಡ್ಯೂ ಸಾಲ ಹಾಗೂ ಪ್ರೋತ್ಸಾಹ ಧನ ಸಾಲಗಳಿಗೆ ಸಂಬಂಧಿಸಿದಂತೆ ಈಗಾಗಲೇ ಬಿಡುಗಡೆಯಾದ ಮೊತ್ತವನ್ನು ಕಡಿತಗೊಳಿಸಿ, ಉಳಿದ ಸಂಪೂರ್ಣ ಮೊತ್ತವನ್ನು ಒಂದೇ ಕಂತಿನಲ್ಲಿ ರೈತರ ಖಾತೆಗೆ ಬಿಡುಗಡೆ ಮಾಡಲು ಅನುಮೋದನೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ರೈತರ ಖಾತೆಯಿಂದ ಹಣ ಕಡಿತಕ್ಕೆ ತೆರೆ:

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾಲಮನ್ನಾ ಸಾಕಷ್ಟು ಸದ್ದು ಮಾಡಿತ್ತು. ಆದರೆ ಫಲಿತಾಂಶ ಘೋಷಣೆಯಾದ ಬಳಿಕ ರೈತರ ಖಾತೆಗೆ ಜಮೆಯಾದ ಸಾಲ ಮನ್ನಾದ ಹಣವು ಸದ್ದಿಲ್ಲದೇ ಸರಕಾರಕ್ಕೆ ವಾಪಸ್ ಹೋಗಿರುವುದು ರೈತರನ್ನು ದಂಗಾಗಿಸಿದೆ. ಸಾಲ ಮನ್ನಾ ಯೋಜನೆಯಡಿ ರೈತರ ಖಾತೆಗೆ ಜಮೆಯಾದ ಹಣ ವಾಪಸ್ ಹೋಗಿರುವುದು ಬೆಳಕಿಗೆ ಬಂದಿದೆ. ಆದರೆ ರಾಜ್ಯ ಸರ್ಕಾರ ಈ ರೀತಿ ಯಾವುದೇ ಹಣವನ್ನು ಹಿಂಪಡೆದಿಲ್ಲ. ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲದ ವರ್ಗೀಕರಣವನ್ನು ನಿರ್ಧರಿಸುವ ಸಂದರ್ಭದಲ್ಲಿ ಗೊಂದಲ ಉಂಟಾಗಿ ಬ್ಯಾಂಕ್‍ಗಳು ಹಣವನ್ನು ಮುಟುಗೋಲು ಹಾಕಿಕೊಂಡಿವೆ ಎಂದು ಮುಖ್ಯಮಂತ್ರಿ ಸ್ಪಷ್ಟನೆ ನೀಡಿದರು. ಗೊಂದಲಗಳೇನೆ ಇದ್ದರೂ ರೈತರಲ್ಲಿ ಮಾತ್ರ ಇದು ಭಾರೀ ಆತಂಕ ಮೂಡಿಸಿತ್ತು. ಅದರ ನಿವಾರಣೆಗೆ ಸಾಲದ ವರ್ಗೀಕರಣದ ಉಸಾಬರಿಯನ್ನೇ ಪಕ್ಕಕ್ಕಿಟ್ಟು ಒಂದೇ ಕಂತಿನಲ್ಲಿ ರಾಜ್ಯ ಸರ್ಕಾರ 59.48 ಕೋಟಿ ಹಣವನ್ನು ಬಿಡುಗಡೆ ಮಾಡುವ ಮೂಲಕ ಎಲ್ಲ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಒದಗಿಸಿದೆ.

ರೈತರ ಖಾತೆಗೆ ಹಣ ಬಿಡುಗಡೆ

Also read: ಮಂಡ್ಯದ ಕನಗನಮರಡಿ ಬಸ್ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ..

ಪ್ರೋತ್ಸಾಹಧನಕ್ಕೆ ಅರ್ಹತೆ ಹೊಂದಿರುವ ಸಾಲಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ಬಿಡುಗಡೆಗೊಳಿಸಲಾದ ಮೊತ್ತವನ್ನು ಕಡಿತಗೊಳಿಸಿ ಉಳಿದ ಸಂಪೂರ್ಣ ಹಣವನ್ನು ಒಂದೇ ಕಂತಿನಲ್ಲಿ ರೈತರ ಖಾತೆಗೆ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರ ಅನ್ವಯ ರಚನಾತ್ಮಕ ಸಾಲದ ಮೇಲೆ ಅರ್ಹತೆ ಪಡೆದಿರುವ 2,812 ಕೋಟಿ , ಮಿತಿ ಮೀರಿದ ಸಾಲದಲ್ಲಿ 3057 ಕೋಟಿ ಹಾಗೂ ಸಾಮಾನ್ಯ ಸಾಲದ ಮೇಲೆ 720 ಕೋಟಿ ರೂ.ಗಳನ್ನು ಇದರಲ್ಲಿ ಈಗಾಗಲೇ ಬಿಡುಗಡೆಗೊಳಿಸಲಾಗಿರುವ ಮೊತ್ತವನ್ನು ಕಡಿತಗೊಳಿಸಿ ಉಳಿದ ಸಂಪೂರ್ಣ ಮೊತ್ತವನ್ನು ಒಂದೇ ಕಂತಿನಲ್ಲಿ ರೈತರ ಖಾತೆಗೆ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ.