ರೈತರಿಗೆ ಕೇಂದ್ರದಿಂದ ಸಿಹಿಸುದ್ದಿ; ಸದ್ಯದಲ್ಲೇ ರೈತರ ಖಾತೆಗಳಿಗೆ ಪಿಎಂ ಕಿಸಾನ್ ಯೋಜನೆಯಡಿ ಸಹಾಯ ಧನ ಜಮಾ.!

0
513

ರೈತರಿಗೆ ನೇರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ತನ್ನ ಮದ್ಯಂತರ ಬಜೆಟ್ ನಲ್ಲಿ ರೈತರಿಗಾಗಿ ವಾರ್ಷಿಕ ನೇರ ಆದಾಯ ಬೆಂಬಲ ನೀಡಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪರಿಚಯಿಸಿದೆ. ಇದರಲ್ಲಿ ವರ್ಷಕ್ಕೆ ಮೂರು ಕಂತುಗಳಲ್ಲಿ ತಲಾ ರೂ. 2000 ಸಹಾಯಧನ ನೀಡಲಾಗುತ್ತದೆ. ಅದರಂತೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 60 ಸಾವಿರ ಕೋಟಿ ರೂ. ಮುಂದಿನ ನವೆಂಬರ್ ಅಂತ್ಯದೊಳಗೆ ರೈತರ ಖಾತೆಗೆ ಜಮಾ ಮಾಡಲಿದೆ.

ರೈತರ ಖಾತೆಗೆ ಹಣ?

ಹೌದು ಕೇಂದ್ರ ಕೃಷಿ ಸಚಿವಾಲಯವೇ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಲಿದ್ದು, ಈ ಕುರಿತು ಮಾಹಿತಿ ನೀಡಿದ ಕೃಷಿ ಸಚಿವ ನರೇಂದ್ರ ಸಿಂಗ್​​ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಮೊದಲಿಗೆ 7.45 ಕೋಟಿ ರೈತರಿಗೆ ಬಿಡುಗಡೆ ಮಾಡಿದ್ದೇವೆ. ನಂತರ ವರ್ಷದ ಕೊನೆಗೆ ಮೂರನೇ ಕಂತಿನಲ್ಲಿ 2.99 ಕೋಟಿ ರೈತರಿಗೆ ನೀಡಿದ್ದೇವೆ. ಸುಮಾರು 11 ಕೋಟಿ ರೈತರಿಗೆ ಮೂರನೇ ಕಂತಿನ ಹಣ ಇನ್ನೂ ಸಂಪೂರ್ಣ ಸಿಕ್ಕಿಲ್ಲ. ಇಲ್ಲಿಯವರೆಗೂ ಕೇಂದ್ರ ಸರ್ಕಾರ ಸುಮಾರು 27 ಸಾವಿರ ಕೋಟಿಗೂ ಹೆಚ್ಚು ಹಣ ಕೊಟ್ಟಿದೆ. ಅಲ್ಲದೇ ಇನ್ನುಳಿದ 60 ಸಾವಿರ ಕೋಟಿ ರೂ. ಹಣವನ್ನು ಸದ್ಯದಲ್ಲೇ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಮೂರು ಕಂತುಗಳಲ್ಲಿ ಮತ್ತೆ 14.5 ಕೋಟಿ ರೈತರಿಗೆ 87000 ಕೋಟಿ ರೂ. ಹಣ ನೀಡಬೇಕಿತ್ತು. ಈ ಪೈಕಿ ಈಗಾಗಲೇ 27 ಸಾವಿ ಕೋಟಿ ನೀಡಲಾಗಿದೆ. ರೈತರ ಬ್ಯಾಂಕ್​​ ಖಾತೆಗೆ ಆಧಾರ್​​ ಲಿಂಗ್​​ ಆಗದ ಕಾರಣ ಉಳಿದ ಹಣ ನೀಡಲಾಗಿರಲಿಲ್ಲ ಎಂದಿದ್ದಾರೆ ಕೇಂದ್ರ ಕೃಷಿ ಸಚಿವರು. ಇನ್ನು ರೈತರು ತಮ್ಮ ಖಾತೆಗೆ ಆಧಾರ್​​ ಲಿಂಕ್​​ ಮಾಡಲು ನವೆಂಬರ್​​ 30ನೇ ತಾರೀಕಿನವರೆಗೂ ಅವಕಾಶ ನೀಡಿದೆ. ಕಿಸಾನ್ ಸಮ್ಮಾನ್ ನಿಧಿಯ ಹಣ ಸಿಗದವರು ಕೂಡಲೇ ತಮ್ಮ ಬ್ಯಾಂಕ್​​ ಖಾತೆಗೆ ಆಧಾರ್​​ ಲಿಂಕ್​​ ಮಾಡಬೇಕಿದೆ.

ಹಣ ಪಡೆಯಲು ಏನು ಮಾಡಬೇಕು?

ಪಿಎಂ ಕಿಸಾನ್ ಯೋಜನೆಯಡಿ ಸಹಾಯ ಧನವನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಆಧಾರ್ ಇಲ್ಲದ ರೈತರು ತಾತ್ಕಾಲಿಕವಾಗಿ ಬೇರೆ ಗುರುತಿನ ದಾಖಲೆ ಒದಗಿಸಬೇಕಿದೆ. ಮೊದಲನೇ ಕಂತಿನ ಸಹಾಯ ಧನ ಪಡೆಯಲುವ ಆಧಾರ್ ಇಲ್ಲದ ರೈತರು ಮತದಾರರ ಗುರುತಿನ ಚೀಟಿ, ಡಿಎಲ್ ಇಲ್ಲವೇ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡಿರುವ ಫೋಟೋ ಸಹಿತ ಯಾವುದಾದರೂ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಒದಗಿಸಬೇಕಿದೆ.

ಆಧಾರ್ ಕಡ್ಡಾಯ

ರೈತರು 2 ನೇ ಕಂತಿನಿಂದ ಸಹಾಯ ಧನ ಪಡೆಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಆಧಾರ್ ಕಾರ್ಡ್ ಅನ್ನು ಒದಗಿಸಬೇಕೆಂದು ತಿಳಿಸಲಾಗಿದೆ. ರೈತರಿಗೆ ನೀಡಲಾಗುವ ನೇರ ಆದಾಯ ಬೆಂಬಲ ದುರ್ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಅದರಂತೆ ರೈತರು ಈ ಸ್ಕೀಮ್​​ನ ಹಣ ಪಡೆಯಲು ಮೊದಲು ಸ್ಥಳೀಯ ಕಂದಾಯ ಅಧಿಕಾರಿ ಸಪರ್ಕಿಸಬೇಕು. ನಂತರ ಯೋಜನೆಯ ನೋಡಲ್ ಅಧಿಕಾರಿಯನ್ನು ಭೇಟಿ ಮಾಡಬೇಕು. ಇಲ್ಲಿಯೂ ಯಾವುದೇ ಮಾಹಿತಿ ಸಿಗದೇ ಹೋದಲ್ಲಿ, ಆನ್​​ಲೈನ್​​ನಲ್ಲಿ ಮೇಲ್​​ ಮಾಡುವ ಮೂಲಕ ಕಿಸಾನ್​​​​ ಹೆಲ್ಪ್​​​ ಡೆಸ್ಕ್​​​​​​ ಸಹಾಯ ಪಡೆಯಬಹುದು. 011-23381092 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ತೆಗೆದುಕೊಳ್ಳಬಹುದು.